50 ವರ್ಷಗಳಿಂದ ಒಂದು ಕೈಯನ್ನು ಮೇಲೆಕ್ಕೆತ್ತಿ ನಿಂತಿರುವ ಸಾಧು ಸಂತ ಅಮರ್ ಭಾರತಿ!! ಈತನ ಬಗ್ಗೆ ತಿಳಿದರೆ ಮೈ ಜುಮ್ ಎನ್ನುತ್ತೆ.

ಸಾಧು ಸಂತರ (Saint) ಬದುಕು ಸಾಮಾನ್ಯರ ಬದುಕಿಗಿಂತ ವಿಭಿನ್ನ. ಅದಲ್ಲದೇ ಅವರ ಜೀವನ ಶೈಲಿ ಹಾಗೂ ಆಹಾರ ಕ್ರಮವು ವಿಭಿನ್ನವಾಗಿರುವ ಕಾರಣದಿಂದಾಗಿ ಅವರಿಗೆ ಜೀವನದಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿರುವುದಿಲ್ಲ. ಸದಾ ಯೋಗ, ಧ್ಯಾನ, ಮುಕ್ತಿ ಹಾಗೂ ಆಧ್ಯಾತ್ಮದತ್ತ ಒಲವು ತೋರಿಸುವುದು ಸಹಜ. ಹೀಗಾಗಿ ಭಾರತದಂತಹ ದೇಶದಲ್ಲಿ ಸಾಧು ಸಂತರು, ಸನ್ಯಾಸಿಗಳು ಎಂದರೆ ಅವರಿಗೆ ಗೌರವ ಸ್ಥಾನವನ್ನು ನೀಡಲಾಗಿದೆ.

ಹಿಂದೂ ಧರ್ಮದಲ್ಲಿ, ಸಾಧುವು ಒಬ್ಬ ಧಾರ್ಮಿಕ ತಪಸ್ವಿ ಅಥವಾ ಪವಿತ್ರ ವ್ಯಕ್ತಿಯಾಗಿ ಕಾಣುವುದಿದೆ. ಆದರೆ ಕಾಲ ಬದಲಾದಂತೆ ಸಾಧು ಸಂತರು ಹಾಗೂ ಸನ್ಯಾಸಿಗಳ ಬಹುಪಾಲು ಯೋಗಿಗಳಾದರೂ, ಎಲ್ಲ ಯೋಗಿಗಳು ಸಾಧುಗಳಲ್ಲ. ಇತ್ತೀಚೆಗಿನ ದಿನಗಳಲ್ಲಿ ಸಾಧು ಸನ್ಯಾಸಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಹಿ ಆದರೆ ಅಸಲಿ ಯಾರು, ನಕಲಿ ಯಾರು ಎನ್ನುವುದನ್ನು ತಿಳಿಯುವುದು ಸ್ವಲ್ಪ ಕಷ್ಟವೇ ಸರಿ.

ಆದರೂ ಕೆಲವು ನಿಜವಾದ ಸಾಧು ಸಂತರ ಬದುಕುವ ಶೈಲಿಯು ಒಂದು ಕ್ಷಣ ಅ-ಚ್ಚರಿಯನ್ನುಂಟು ಮಾಡುತ್ತದೆ. ಇದೀಗ ವೈರಲ್ (Viral) ಆಗಿರುವ ಫೋಟೋ ವೊಂದರಲ್ಲಿ ವಯಸ್ಸಾದ ಸಂತರೊಬ್ಬರೂ ತಮ್ಮ ಒಂದು ಕೈಯನ್ನು ಎತ್ತಿಹಿಡಿದುಕೊಂಡಿದ್ದಾರೆ. ಅಚ್ಚರಿಯೆಂದರೆ ಸಾಧು ಸಂತರೊಬ್ಬರು ಕಳೆದ 40 ವರ್ಷಗಳಿಂದ ಗಾಳಿಯಲ್ಲಿ ಒಂದು ಕೈಯನ್ನು ಎತ್ತಿ ಹಿಡಿದು ನಿಂತುಕೊಂಡಿದ್ದಾರೆ.

ಒಂದು ಐದು ನಿಮಿಷಗಳ ಕಾಲ ಕೈಯನ್ನು ಮೇಲೆಕ್ಕೆತ್ತಿ ನಿಂತರೆ ಕೈ ನೋವು ಶುರುವಾಗುತ್ತದೆ. ಅಂತಹದರಲ್ಲಿ ನಲವತ್ತು ವರ್ಷಗಳಿಂದ ಎಂದರೆ ಅದು ಸಾಮಾನ್ಯವಾದ ವಿಚಾರವೇನಲ್ಲ. ಈ ಸಾಧು ಸಂತರ ಹೆಸರು ಅಮರ್ ಭಾರತಿ. ಈ ಫೋಟೋವೊಂದು ಐತಿಹಾಸಿಕ ವೇದಿಕ್ ಎನ್ನುವ ಟ್ವಿಟ್ಟರ್ ಖಾತೆ (Twitter Account) ಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಫೋಟೋದ ಜೊತೆಗೆ ಈ ಸಾಧು ಸಂತ 1973 ರಿಂದ ಕೈ ಎತ್ತುವ ಪ್ರತಿಜ್ಞೆಯನ್ನು ಮಾಡಿದ್ದರು.ಆದರಂತೆ ತಮ್ಮ ಈ ಪ್ರತಿಜ್ಞೆಯನ್ನು ಭಗವಾನ್ ಶಿವಶಂಕರ ಭೋಲೆನಾಥ್‌ಗೆ ಸಮರ್ಪಿಸಲಾಗಿದೆ. ಈಗಾಗಲೇ ಈ ಅಮರ್ ಭಾರತಿ (Amar Bharathi) ಅತ್ಯಂತ ಜನಪ್ರಿಯ ಸಾಧು, ಅವರು ಕುಂಭಮೇಳ ಸೇರಿದಂತೆ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಬರೆಯಲಾಗಿದೆ.

ಈ ಫೋಟೋವನ್ನು ನೋಡಿದರೆ ಕಳೆದ 40 ವರ್ಷಗಳಿಂದ ಕೈಯನ್ನು ಮೇಲಕ್ಕೆತ್ತಿರುವ ಕಾರಣದಿಂದಾಗಿ ಅವರ, ಕೈಯ ಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ. ಕೈ ಮೂಳೆಗಳು ಹಾಗೂ ಬೆರಳುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅವರ ಉಗುರುಗಳು ದೊಡ್ಡದಾಗಿ ಬೆಳೆದು ಇಡೀ ಕೈ ಕೋಲಿನಂತಾಗಿದೆ ಈ ಫೋಟೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಒಟ್ಟಿನಲ್ಲಿ ನೆಟ್ಟಿಗರು ಸಾಧು ಸಂತ ಅಮರ್ ಭಾರತಿಯವರ ಈ ಪ್ರತಿಜ್ಞೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *