ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಯಾರು ಗೊತ್ತಾ? ಎಷ್ಟು ಮುದ್ದಾಗಿದ್ದಾರೆ ನೋಡಿ!!

ಭಾರತೀಯ ಕ್ರಿಕೆಟ್ ಲೋಕದಲ್ಲಿ ಜನಪ್ರಿಯ ಹೆಸರು ಸಚಿನ್ ತೆಂಡೂಲ್ಕರ್. ಕ್ರಿಕೆಟ್ ಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ಸಚಿನ್ ತೆಂಡೂಲ್ಕರ್ ಅವರನ್ನು ಬಹುತೇಕರ ನೆಚ್ಚಿನ ಕ್ರಿಕೆಟ್ ಆಟಗಾರ. ಹೌದು, 1973 ಏಪ್ರಿಲ್ 24 ರಂದು ಮುಂಬೈನಲ್ಲಿ ಹುಟ್ಟಿದ್ದ ಇವರು ಸಣ್ಣ ವಯಸ್ಸಿನಲ್ಲಿಯೇ ಬ್ಯಾಟ್ ಹಿಡಿದು ಬ್ಯಾಟ್ ಮ್ಯಾನ್ ಆದರು. ಹದಿನಾಲ್ಕನೇ ವಯಸ್ಸಿಗೆ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಕ್ರೀಡಾ ಲೋಕದಲ್ಲಿ ಮಾಡಿದ ಸಾಧನೆಯೂ ಅಗಾಧವಾದದ್ದು. ಆದರೆ ಸದ್ಯಕ್ಕೆ ನಿವೃತ್ತಿ ಪಡೆದು ವೈಯುಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಸಚಿನ್ ಅವರ ಪತ್ನಿಯ ಹೆಸರು ಅಂಜಲಿ. ಈ ದಂಪತಿಗಳಿಗೆ ಇಬ್ಬರೂ ಮುದ್ದಾದ ಮಕ್ಕಳು.. ಮಗಳು ಸಿನಿಮಾದ ಕಡೆಗೆ ಗಮನಹರಿಸಿದರೆ, ಮಗ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರ ಪತ್ನಿ ಬಹಳ ಸುಂದರವಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿಯವರದ್ದು ಪ್ರೇಮ ವಿವಾಹ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೆಹ್ತಾ ಅವರ ಪ್ರೇಮಕಥೆಯೂ ಹೀಗೆಯೇ ಚಲನಚಿತ್ರ ರೀತಿಯಲ್ಲಿ ಪ್ರಾರಂಭವಾಯಿತು.

ಆ ಸಮಯದಲ್ಲಿ ಅಂಜಲಿ ವೈದ್ಯರಾಗಿದ್ದರು. ಆ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ವಾಸ್ತವವಾಗಿ ಇದು 1990 ರಲ್ಲಿ ಇಂಗ್ಲೆಂಡ್‌ಗೆ ಭೇಟಿ ನೀಡಿದ ಬಳಿಕ ಸಚಿನ್ ಭಾರತಕ್ಕೆ ಮರಳಿದರು. ಈ ವೇಳೆಯಲ್ಲಿ ಅಂಜಲಿ ಮೊದಲ ಬಾರಿಗೆ ಸಚಿನ್‌ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನೋಡಿದ್ದರು. ತಮ್ಮ ತಾಯಿಯನ್ನು ಬರಮಾಡಿಕೊಳ್ಳಲು ಅಂಜಲಿ ಸ್ನೇಹಿತನೊಂದಿಗೆ ಅಲ್ಲಿಗೆ ತಲುಪಿದ್ದರು. ಸಚಿನ್ ಅವರನ್ನು ನೋಡಿದ ಅಂಜಲಿ ತಕ್ಷಣವೇ ತನ್ನ ಸ್ನೇಹಿತನ ಬಳಿ ಸೋ ಕ್ಯೂಟ್ ಎಂದು ಹೇಳಿದ್ದರು.

ಆ ಸಮಯದಲ್ಲಿ ಸಚಿನ್ ಕ್ರಿಕೆಟಿಗ ಎಂದು ಅಂಜಲಿಗೆ ತಿಳಿದಿರಲಿಲ್ಲವಾದರೂ ಅವರು ವಿಮಾನ ನಿಲ್ದಾಣದಲ್ಲಿ ಸಚಿನ್‌ನನ್ನು ಹಿಂಬಾಲಿಸಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದರು. ಅದೇ ಸಮಯದಲ್ಲಿ, ಸಚಿನ್ ಸಹ ಅಂಜಲಿಯನ್ನು ನೋಡಿದ್ದು, ಆದರೆ ಕಟ್ಟುನಿಟ್ಟಿನ ಭದ್ರತೆಯಿಂದಾಗಿ ಅವರಿಗೆ ಅಂಜಲಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇನ್ನು, ತಮಾಷೆಯೆಂದರೆ ಸಚಿನ್ ಅವರನ್ನು ಭೇಟಿಯಾಗುವ ಪ್ರಕ್ರಿಯೆಯಲ್ಲಿ ಅಂಜಲಿ ತನ್ನ ತಾಯಿಯನ್ನು ಸ್ವಾಗತಿಸುವುದನ್ನೂ ಮರೆತಿದ್ದರಂತೆ.

ಇನ್ನು, ಸಚಿನ್ ಭಾರತೀಯ ಕ್ರಿಕೆಟ್ ತಂಡದ ಕಿರಿಯ ಕ್ರಿಕೆಟಿಗ ಇತ್ತೀಚೆಗೆ ಅವರು ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದಾರೆ ಎಂದು ಅಂಜಲಿಯ ಸ್ನೇಹಿತ ಹೇಳಿದ್ದರಂತೆ. ಆದರೆ ಅಂಜಲಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿಲ್ಲವಾದ್ದರಿಂದ ಈ ಎಲ್ಲ ಸಂಗತಿಗಳು ಯಾವುದೇ ವ್ಯತ್ಯಾಸವನ್ನುಂಟುಮಾಡಲಿಲ್ಲ. ಆದರೆ ಸಚಿನ್ ಜೊತೆ ಮಾತನಾಡಲೇ ಬೇಕೆಂಬ ಅವರ ದೃಢ ನಿಶ್ಚಯ ಅಂಜಲಿಯನ್ನು ಸಚಿನ್‌ ದೂರವಾಣಿ ಸಂಖ್ಯೆ ಹುಡುಕಲು ಕಾರಣವಾಯಿತು.

ಕಡೆಗೂ ದೂರವಾಣಿ ಸಂಖ್ಯೆ ಪಡೆದ ಅಂಜಲಿ ಸಚಿನ್‌ಗೆ ಕರೆ ಮಾಡಿ “ನನ್ನ ಹೆಸರು ಅಂಜಲಿ ಮತ್ತು ನೀವು ಬಹುಶಃ ನನಗೆ ತಿಳಿದಿಲ್ಲ. ನಿನ್ನೆ ನಾನು ನಿಮ್ಮನ್ನು ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ನೋಡಿದೆ ಎಂದಿದ್ದರು. ಇದನ್ನು ಕೇಳಿದ ಸಚಿನ್ ಪ್ರತಿಕ್ರಿಯೆಯಾಗಿ ಹೌದು – ನನಗೆ ನೆನಪಿದೆ ಎಂದಿದ್ದಾರಂತೆ. ಇದನ್ನು ಕೇಳಿದ ಅಂಜಲಿಯವರಿಗೆ ಕುತೂಹಲ ತಡೆಯಲಾಗದೆ ನಾನು ನಿನ್ನೆ ಏನು ಧರಿಸಿದ್ದೇ ಎಂದು ಹೇಳಿ? ಎಂದು ಕೇಳಿದ್ದರಂತೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಚಿನ್ ಆರೆಂಜ್ ಕಲರ್ ಟಿ-ಶರ್ಟ್ ಎಂದು ಹೇಳಿದ್ದರು”. ಇಲ್ಲಿಂದ ಅವರಿಬ್ಬರ ಸ್ನೇಹ ಪ್ರಾರಂಭವಾಯಿತು.

ಹೀಗಿರುವಾಗ ಮುಂದೊಂದು ದಿನ ಸಚಿನ್ ಮೊದಲ ಬಾರಿಗೆ ಅಂಜಲಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಸಚಿನ್ ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ಕುಟುಂಬಕ್ಕೆ ತಿಳಿದಿತ್ತು. ಆದರೆ ಅಂಜಲಿಯನ್ನು ತನ್ನ ಕುಟುಂಬಕ್ಕೆ ಪರಿಚಯಿಸಿದಾಗ ಅವಳು ಪತ್ರಕರ್ತೆ ಮತ್ತು ನನ್ನನ್ನು ಸಂದರ್ಶನ ಮಾಡಲು ಬಂದಿದ್ದಾಳೆ ಎಂದು ಹೇಳಿದ್ದರು. ಆದರೆ ಈ ವಿಚಾರವನ್ನು ಬಹಳ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು.

ಇನ್ನು, ಸಚಿನ್ ಮತ್ತು ಅಂಜಲಿ ಅವರು 1994 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಆದಾದ ಒಂದು ವರ್ಷದ ಬಳಿಕ 1995 ರಲ್ಲಿ ವಿವಾಹವಾದರು. ಈ ಹಿಂದೆಯಷ್ಟೇ ತನ್ನ ಪತ್ನಿಯ 54 ನೇ ಹುಟ್ಟುಹಬ್ಬವನ್ನು ಸಚಿನ್ ತೆಂಡೂಲ್ಕರ್ ಅವರು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದರು. ಫ್ಯಾಮಿಲಿ ಜೊತೆಗೆ ರೆಸ್ಟೋರೆಂಟ್ ನಲ್ಲಿ ಬರ್ತ್ಡೇ ಸೆಲೆಬ್ರೇಶನ್ ಮಾಡಿ ಊಟ ಮಾಡಿ ಖುಷಿಪಟ್ಟಿದ್ದರು. ಸದ್ಯಕ್ಕೆ ನಿವೃತ್ತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ಫ್ಯಾಮಿಲಿ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ಕ್ರೀಡಾ ಜಗತ್ತಿನಿಂದ ದೂರ ಉಳಿದು ಜಾಹೀರಾತುಗಳನ್ನು ಕಾಣಿಸಿಕೊಳ್ಳುವ ಮೂಲಕ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *