ಪಾಕಿಸ್ತಾನ ದಿಂದ ಓಡಿ ಬಂದ 4 ಮಕ್ಕಳ ತಾಯಿ ಸೀಮಾ ಹೈದರ್. ಇದೀಗ ಸಚಿನ್ ಜೋತೆ ಮಾಡಿದ್ದೇನು ನೋಡಿ.. ಒಂದೇ ವರ್ಷದ ಒಳಗೆ ಸಿಹಿ ಸುದ್ದಿ..!!

ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎನ್ನುವುದಕ್ಕೆ ಸೀಮಾ ಹೈದರ್ ಗಿಂತ ಮತ್ತೊಂದು ಉದಾಹರಣೆಯು ಬೇಕಾಗಿಲ್ಲ ಎನ್ನಬಹುದು. ಹೌದು ಕಳೆದ ವರ್ಷ ಮೇ ತಿಂಗಳಿನಲ್ಲಿ ಭಾರತೀಯ ಯುವಕನನ್ನು ಸೇರಲು ಪಾಕಿಸ್ತಾನ (Pakisthan) ದಿಂದ ತನ್ನ 4 ಮಕ್ಕಳೊಂದಿಗೆ ಸೀಮಾ ಹೈದರ್ (Seema Haider)​ ಭಾರತಕ್ಕೆ ಬಂದಿದ್ದಳು. ಪಬ್​ಜಿ ಮೂಲಕ ಪರಿಚಯ ಆದ ಇವರಿಬ್ಬರ ಪರಿಚಯವು ಸೀಮಾ ಹೈದರ್ ಲನ್ನು ಭಾರತಕ್ಕೆ ಬರುವಂತೆ ಮಾಡಿತ್ತು.

ಆದರೆ ಇದೀಗ ಸೀಮಾ ಹೈದರ್ ಕುರಿತಾಗಿ ಮತ್ತೊಂದು ಸುದ್ದಿಯೊಂದು ಹೊರಬಿದ್ದಿದೆ. ಹೌದು, ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ (Sachin Meena) ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.ಸೀಮಾ ಹೈದರ್ ಅವರು ಪಾಕಿಸ್ತಾನಿ ಪ್ರಜೆ ಗುಲಾಮ್ ಹೈದರ್ ಅವರನ್ನು ವಿವಾಹವಾಗಿದ್ದರು. ಪತಿ ಗುಲಾಮ್ 2019 ರಲ್ಲಿ ಕೆಲಸಕ್ಕಾಗಿ ಸೌದಿ ಅರೇಬಿಯಾ (Soudi Arebia) ಕ್ಕೆ ಹೋಗುವವರೆಗೂ ಜೊತೆಗೆ ಕರಾಚಿಯಲ್ಲಿ ಇದ್ದರು.

ಸೀಮಾ ಹೈದರ್ ಇಬ್ಬರೂ ಮಕ್ಕಳಿದ್ದಾರೆ. ಹೀಗಿರುವಾಗ ಸೀಮಾ ಹೈದರ್ 2019 ರಲ್ಲಿ ಆನ್ಲೈನ್ ಶೂಟಿಂಗ್ ಗೇಮ್ ಪಬ್ಜಿಯಲ್ಲಿ ಸಚಿನ್ ಅವರ ಪರಿಚಯವಾಯಿತು. ಈ ವೇಳೆಯಲ್ಲಿ ಸೀಮಾ ಸಚಿನ್ ನನ್ನು ಪ್ರೀತಿಸಲು ಶುರು ಮಾಡಿದಳು. ಈ ಕಾರಣದಿಂದಾಗಿ ಆಕೆ ಕಳೆದ ವರ್ಷ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದಳು. ಭಾರತಕ್ಕೆ ಬಂದ ಸೀಮಾ ಹೈದರ್ ಮೇಲೆ ನಾನಾ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡಿತ್ತು.

ಹೀಗಾಗಿ ಜುಲೈ 18 ರಂದು ಉತ್ತರ ಪ್ರದೇಶದ ಭ-ಯೋತ್ಪಾದನಾ ವಿ-ರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಜುಲೈ 17 ರಂದು 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಈ ವೇಳೆಯಲ್ಲಿ ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಿದ್ದು ಆತನಿಗಾಗಿ ಬಂದಿರುವ ಬಗ್ಗೆ ಹೇಳಿದ್ದಳು.ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದ್ದಾಗ, ಆಕೆ ಸ್ಪಷ್ಟವಾಗಿ ಓದಿದ್ದಳು.

ತಾನು ಐದನೇ ತರಗತಿ ಮಾತ್ರ ಓದಿದ್ದೇನೆ. ನನ್ನ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಸಹೋದರ ಪಾಕಿಸ್ತಾನದ ಸೇನೆಗೆ ಸೇರಿದ್ದ. ಆದರೆ ಆತ ಇನ್ನೂ ಅಲ್ಲೇ ಇದ್ದಾನಾ ಅಥವಾ ಸೈನ್ಯವನ್ನು ಬಿಟ್ಟಿದ್ದಾನಾ ಎಂಬುದು ನನಗೆ ಗೊತ್ತಿಲ್ಲ’ ಎಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಳು.ಈ ವೇಳೆಯಲ್ಲಿ ದುಬೈ (Dubai) ನಲ್ಲಿರುವ ಆಕೆಯ ಪತಿಯನ್ನು ಸಂಪರ್ಕ ಮಾಡಲಾಗಿತ್ತು.

ಸೀಮಾಳ ಪತಿ ಗುಲಾಂ ಹೈದರ್ (Galam Haider) ಇದು ಸತ್ಯ ಎಂದು ಒಪ್ಪಿಕೊಂಡಿದ್ದು, ಸೀಮಾಳ ಸಹೋದರ ಮತ್ತು ಚಿಕ್ಕಪ್ಪ ಪಾಕಿಸ್ತಾನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಸೀಮಾಳ ಚಿಕ್ಕಪ್ಪ ಉನ್ನತ ಶ್ರೇಣಿಯ ಹುದ್ದೆಯಲ್ಲಿ ಇದ್ದಾನೆ ಎಂದಿದ್ದನು. ಸಚಿನ್ ಕುಟುಂಬದವರು ಸೀಮಾ ಹಾಗೂ ಆಕೆಯ ಇಬ್ಬರೂ ಮಕ್ಕಳನ್ನು ಒಪ್ಪಿಕೊಂಡಿದ್ದು, ಸದ್ಯಕ್ಕೆ ತಾನು ಪ್ರೀತಿಸಿದ ಯುವಕ ಸಚಿನ್ ಜೊತೆಗೆ ಸೀಮಾ ಹೈದರ್ ಸುಖ ಸಂಸಾರ ನಡೆಸುತ್ತಿದ್ದಾಳೆ.

Leave a Reply

Your email address will not be published. Required fields are marked *