ಬಿಗ್ ಬಾಸ್’ (Bigg Boss Kannada) ಸೀಸನ್ 9ರ ಸ್ಪರ್ಧಿ ಸಾನ್ಯಾ ಅಯ್ಯರ್ (Saanya Iyer) ಎಲ್ಲರಿಗೂ ಚಿರಪರಿಚಿತ. ಪುಟ್ಟ ಗೌರಿ ಧಾರಾವಾಹಿಯ ಮೂಲಕ ಮನೆ ಮಾತಾದ ಸಾನ್ಯಾ ಅಯ್ಯರ್ ಬಿಗ್ ಬಾಸ್ ಶೋ ಬಳಿಕ ತನ್ನ ಜನಪ್ರಿಯತೆ ಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಯಲ್ಲಿರುವ ಬೆಡಗಿಯೂ ಈಗಾಗಲೇ ಸಾಕಷ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ ಇದೀಗ ಮತ್ತೆ ಫೋಟೋ ಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪುಟ್ಟ ಗೌರಿ ಮದುವೆ (Putta Gowri Maduve) ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಈಕೆಯೂ ತದನಂತರದಲ್ಲಿಓದಿನ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಧಾರಾವಾಹಿಯಲ್ಲಿ ನಟಿಸುವುದು ಕಡಿಮೆ ಮಾಡಿದರೂ ಕೂಡ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ಬಿಗ್ ಬಾಸ್ ಓಟಿಟಿ ( Big Boss OTT) ಸ್ಪರ್ಧಿ ಸಾನ್ಯಾ ಐಯ್ಯರ್ ಸ್ಟ್ರಾಂಗ್ ಅಭ್ಯರ್ಥಿ ಆಗಿ ಗುರುತಿಸಿಕೊಂಡಿದ್ದರು.
ಆದಾದ ಬಳಿಕ ಬಿಗ್ ಬಾಸ್ ಸೀಸನ್ 9 (Big Boss Sisan 9) ಕ್ಕೆ 6ನೇ ಸ್ಪರ್ಧಿಯಾಗಿ ಸಾನ್ಯಾ ಎಂಟ್ರಿ ಕೊಟ್ಟಿದ್ದ ಸಾನ್ಯಾ ಬಿಗ್ ಬಾಸ್ ಮನೆಯಲ್ಲಿ ಸುದ್ದಿಯಾಗಿದ್ದು ಗೊತ್ತೇ ಇದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಾನ್ಯಾ ಅಯ್ಯರ್ ಡಾನ್ಸ್ ಕ್ಲಾಸ್ ಗೆ ಹೋಗಿ ತನ್ನ ಮುಂದಿನ ಕೆರಿಯರ್ ಗಾಗಿ ಡಾನ್ಸ್ ಕಲಿಯುತ್ತಿದ್ದರು. ಅದಲ್ಲದೇ ಸಾನ್ಯಾಳಿಗೆ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದರು. ವೃತ್ತಿ ಬದುಕಿಗಾಗಿ ಸಾಕಷ್ಟು ತಯಾರಿಯಲ್ಲಿದ್ದು, ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಬಾಲಿವುಡ್ (Bollywood) ಫೋಟೋಗ್ರಾಫರ್ ಡಬೂ ರತ್ನಾನಿ (Dabboo Ratnani) ಕ್ಯಾಮೆರಾ ಕಣ್ಣಿನಲ್ಲಿ ಸಾನ್ಯ ಅಯ್ಯರ್ ಫೋಟೋಶೂಟ್ ಮಾಡಿಸಿಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಮತ್ತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ನೇರಳೆ ಬಣ್ಣದ ಕೋಟ್, ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ನಟಿ ಬೋಲ್ಡ್ ಆಗಿಯೇ ಪೋಸ್ ನೀಡಿದ್ದಾರೆ.
View this post on Instagram
ಸಾನ್ಯಾಳ ಹೊಸ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನೆಟ್ಟಿಗನೊಬ್ಬ, “ನೀನೇ ಅಲ್ವಾ ಯಾವುದೋ ಜಾತ್ರೆಯಲ್ಲಿ ಎದೆ ಮೇಲೆ ಕೈ ಹಾಕಿದ್ದ ಅಂತಾ ಗಲಾಟೆ ಮಾಡಿ ಫೇಮಸ್ ಆಗಿದ್ದು, ಈಗ ಏನು ನಿಮ್ಮ ಅವತಾರ” ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದ್ದಾನೆ. ಮತ್ತೊಬ್ಬ ನೆಟ್ಟಿಗನು, “*ಅವಕಾಶಕ್ಕಾಗಿ ಏನು ಬೇಕಾದರೂ ಮಾಡ್ತೀರಾ” ಎಂದು ಪ್ರಶ್ನೆ ಮಾಡಿದ್ದಾನೆ. ಹೀಗೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ಹರಿದು ಬಂದಿದೆ.