ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಕ್ಷಾರವರ ಮದುವೆಯ ಸುಂದರ ಕ್ಷಣವು ಹೇಗಿತ್ತು ಗೊತ್ತಾ?

ಖ್ಯಾತ ನಿರ್ದೇಶಕ ಎಸ್. ನಾರಾಯಣ್ (S. Narayan) ಅವರ ಪುತ್ರ ಬಣ್ಣದ ಬದುಕಿನಲ್ಲಿ ಸಕ್ರಿಯಾರಾಗಿದ್ದಾರೆ. ಬೆಳ್ಳಿತೆರೆಯ ಸಿನಿಮಾಗಳಲ್ಲಿ ನಟಿಸಿರುವ ನಟ ಎಸ್ ಪಂಕಜ್ ಅವರು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದು, ಉರ್ಮಿಳಾ (Urmila) ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ನಟ ಪಂಕಜ್ (Pankaj) ಅವರು ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಇದೀಗ ನಟ ಪಂಕಜ್ ಅವರ ಮದುವೆಯ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಯೂ ಹರಿದು ಬಂದಿದೆ.

ಕೊರೋನ ಸಮಯದಲ್ಲಿ ಎಸ್ ನಾರಾಯಣ್ (S. Narayan) ಅವರ ಮನೆಯಲ್ಲಿ ಮದುವೆ ವಾತಾವರಣ ಮನೆ ಮಾಡಿತ್ತು. ಮಗನ ಮದುವೆಯ ಸಂಭ್ರಮದಲ್ಲಿದ್ದರು ಎಸ್. ನಾರಾಯಣ್ ಮಗ ಪಂಕಜ್ ಅವರು ರಕ್ಷಿತಾ ಸುರೇಂದರ್ (Raksha Surendar) ಎಂಬ ಹುಡುಗಿಯನ್ನು ವಿವಾಹವಾಗಿದ್ದರು. ಮದುವೆಗೂ ಒಂದು ತಿಂಗಳು ಮುಂಚೆ ಪಂಕಜ್ ಹಾಗೂ ರಕ್ಷಾ ಅವರ ನಿಶ್ಚಿತಾರ್ಥ ನಡೆದಿತ್ತು.ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು.

ಎಸ್ ನಾರಾಯಣ್ ಅವರ ಮಗನ ಮದುವೆಯಲ್ಲಿ ಭಾರತಿ ವಿಷ್ಣುವರ್ಧನ್, ಶ್ವೇತಾ ಚಂಗಪ್ಪ ಸೇರಿದಂತೆ ಅನೇಕ ನಟ ನಟಿಯರು ಮದುವೆಗೆ ಸಾಕ್ಷಿಯಾಗಿದ್ದರು. ಕೊರೊನಾ ಕಾರಣದಿಂದ ಮದುವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳಿಗೆ ಆಹ್ವಾನ ನೀಡಿರಲಿಲ್ಲ. ಭಾರತಿ ವಿಷ್ಣುವರ್ಧನ್ ಶ್ವೇತಾ ಚಂಗಪ್ಪ ಶೃತಿ ಹಾಗೂ ಇನ್ನೂ ಅನೇಕ ಸ್ಯಾಂಡಲ್ ವುಡ್ ತಾರೆಯರು ಮತ್ತು ರಾಜಕೀಯ ಗಣ್ಯರು ಮದುವೆಯಲ್ಲಿ ಪಾಲ್ಗೊಂಡಿದ್ದರು.

ನೂತನ ಜೀವನಕ್ಕೆ ಕಾಲಿಟ್ಟ ಪಂಕಜ್ ಹಾಗೂ ರಕ್ಷಾ ಅವರಿಗೆ ಸ್ನೇಹಿತರು ಆಪ್ತರು ಸಂಬಂಧಿಕರು ಸೇರಿದಂತೆ ಅನೇಕರು ಶುಭಾಶಯಗಳನ್ನು ಕೋರಿದ್ದರು. ಮಗನ ಮದುವೆಯ ಖುಷಿಯಲ್ಲಿ ಎಸ್ ನಾರಾಯಣ್ ತೇಲಾಡಿದ್ದು, ಪಂಕಜ್ ಮದುವೆಯ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಬೆಳ್ಳಿತೆರೆಯಿಂದ ಕಿರುತೆರೆಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಎಸ್. ಪಂಕಜ್ ಅವರು, “ನಾನು ಹಾಗೂ ರಶ್ಮಿತಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ “ಊರ್ಮಿಳಾ” ಧಾರಾವಾಹಿ ಇದೇ ಜೂನ್ 5 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ನಾನು ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದೆ. ಈಗ ಈ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಬಂದಿದ್ದೇನೆ” ಎಂದಿದ್ದರು. ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಎಸ್ ನಾರಾಯಣ್ ಅವರ ಪುತ್ರ ಎಸ್ ಪಂಕಜ್ ಅವರನ್ನು ಕಿರುತೆರೆ ಪ್ರೇಕ್ಷಕರು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಕಾದುನೋಡಬೇಕು.

Leave a Reply

Your email address will not be published. Required fields are marked *