ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎನ್ನುವ ಮಾತಿದೆ. ಅಷ್ಟೇ ಅಲ್ಲದೇ ಪ್ರೀತಿಗೆ ಹಣ ಅಂತಸ್ತು, ಜಾತಿ, ವಯಸ್ಸು ಇದು ಯಾವುದು ಬೇಕಾಗಿಲ್ಲ. ಪರಿಶುದ್ಧ ಮನಸ್ಸಿದರೆ ಸಾಕು, ಒಂದು ಮನಸ್ಸು ಇನ್ನೊಂದು ಮನಸ್ಸಿಗೆ ಮಿಡಿದರೆ ಸಾಕು, ಅಲ್ಲಿಂದ ಪ್ರೀತಿ ತಾನಾಗಿ ಚಿಗುರಿ ಬಿಡುತ್ತದೆ. ಈಗಾಗಲೇ ಪ್ರೀತಿ ಚಿಗುರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖವಾಗಿ ಸಂಸಾರ ಮಾಡುತ್ತಿರುವ ಜೋಡಿಗಳು ಹಲವರಿದ್ದಾರೆ. ಆದರೆ ಈ ಜೋಡಿಯ ಪ್ರೇಮಕಥೆ (Love Story) ಕೇಳಿದರೆ ಇದೇನಪ್ಪಾ ಹೀಗೆ ಎಂದೇನಿಸುವುದು ಸಹಜ.
ದೇಶದ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ವೃಂದಾವನ (Vrundaavana) ವು ರಷ್ಯಾದಿಂದ ಬಂದ ಮಹಿಳೆಯೊಬ್ಬರು ಇಲ್ಲಿನ ಯುವಕನನ್ನೆ ಪ್ರೀತಿಸಿ ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದಾರೆ. ರಷ್ಯಾದ ಯುವತಿಯೊಬ್ಬಳು (Rissia Girl) ವೃಂದಾವನಕ್ಕೆ ಬಂದು ಗೋ ಸೇವೆ ಮಾಡುವ ವ್ಯಕ್ತಿಯನ್ನೇ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ರಷ್ಯಾದಿಂದ ಯುನಾ (Yunaa) ಳನ್ನು ವೃಂದಾವನಕ್ಕೆ ಬಂದಿದ್ದಳು. ಆ ವೇಳೆಯಲ್ಲಿ 20 ವರ್ಷಗಳಿಂದ ವೃಂದಾವನದಲ್ಲಿದ್ದ ರಾಜಕರಣ್ (Rajkaran) ನನ್ನು ಭೇಟಿಯಾಗಿದ್ದಾಳೆ.

ಈ ರಾಜಕಾರಣ್ ಅವರು ವೃಂದಾವನದಲ್ಲಿ ವಾಸಿಸುತ್ತಿದ್ದು, ಗೋವುಗಳ ಸೇವೆಯನ್ನು ಮಾಡುತ್ತಿದ್ದನು. ಹೀಗಿರುವಾಗ 36 ವರ್ಷದ ಯುನಾಳು ರಷ್ಯಾದಿಂದ ವೃಂದಾವನಕ್ಕೆ ಬಂದು ರಾಜ್‌ಕರಣ್ ಜೊತೆಗೆ ಗೋ ಸೇವೆಯಲ್ಲಿ ಜೊತೆಯಾಗಿದ್ದಾಳೆ. ಈ ವೇಳೆಯಲ್ಲಿ ಯುನಾ ಹಾಗೂ ರಾಜ್‌ಕರಣ್ ನಡುವೆ ಪ್ರೀತಿ ಚಿಗುರಿದ್ದು, ಕೊನೆಗೆ ಇವರಿಬ್ಬರೂ ಮದುವೆಯಾಗಲು ನಿರ್ಧಾರ ಮಾಡಿಕೊಂಡಿದ್ದಾರೆ.ಇದೇ ಏಪ್ರಿಲ್ 2023 ರಲ್ಲಿ ದೆಹಲಿ (Dehali) ಯಲ್ಲಿ ಹಿಂದೂ ಸಂಪ್ರದಾಯ ಬದ್ಧವಾಗಿ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ.
ಭಾರತದಲ್ಲಿಯೇ ನೆಲೆಸಿರುವ ಯುನಾ ಪತಿ ರಾಜ್ ಕರಣ್ ಜೊತೆಗೆ ಹಗಲಿನಲ್ಲಿ ಗೋಸೇವೆ ಮಾಡುತ್ತಾಳೆ. ಅದಲ್ಲದೇ ಸಂಜೆ ವೃಂದಾವನದ ಇಸ್ಕಾನ್ ದೇವಸ್ಥಾನ (Iskan Temple) ದ ಬಳಿ ಧಾರ್ಮಿಕ ಪುಸ್ತಕಗಳು ಮತ್ತು ಶ್ರೀಗಂಧವನ್ನು ಭಕ್ತರಿಗೆ ನೀಡುವ ಕೆಲಸದ ಜೊತೆಗೆ ಆಹಾರವನ್ನು ಒದಗಿಸುವ ಕೆಲಸಮಾಡುತ್ತಿದ್ದಾರೆ. ಸುಖವಾಗಿ ದಾಂಪತ್ಯ ಜೀವನ ನಡೆಸಲು ದೇಶ ಹಾಗೂ ಭಾಷೆ ಎನ್ನುವುದು ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಈ ಜೋಡಿಯೇ ಸಾಕ್ಷಿಯಾಗಿದ್ದಾರೆ. ಎನ್ನುವುದಕ್ಕೆ ಈ ಜೋಡಿಯೇ ಸಾಕ್ಷಿಯಾಗಿದ್ದಾರೆ.

ಆದರೆ ಈ ರಾಜ್‌ಕರಣ್ ಯಾವುದೇ ಶಿಕ್ಷಣವಿಲ್ಲ. ಹಿಂದಿ ಭಾಷೆಯು ಅಷ್ಟಾಗಿ ಬರುವುದಿಲ್ಲ. ಯುನಾ ಅವರ ವಯಸ್ಸು 36 ವರ್ಷವಾಗಿದ್ದು, ರಾಜಕರಣ್ ಒಂದು ವರ್ಷ ವಯಸ್ಸಿನಲ್ಲಿಯು ಸಣ್ಣವನು. ಆದರೆ ಇಬ್ಬರಿಗೂ ಕೂಡ ಭಾಷೆಯ ತೊಂದರೆಯಾಗುವುದು ಸಹಜ. ಆದರೆ ಪ್ರೀತಿಯ ಭಾಷೆಯಿದ್ದರೆ ಬೇರೆ ಭಾಷೆ ಯಾಕೆ ಎನ್ನುವುದನ್ನು ಈ ಜೋಡಿ ಅರಿತ್ತಿದ್ದಾರೆ. ಹೀಗಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದು, ಈ ಯುನಾ ಭಾರತೀಯ ನಾರಿಯಂತೆ ಸಂಪ್ರದಾಯಬದ್ಧಳಾಗಿ ಬದುಕುತ್ತಿದ್ದಾಳೆ.