ಕಳೆದ ಕೆಲವು ದಿನಗಳಿಂದ ಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳು ಪರಸ್ಪರ ಆರೋಪ – ಪ್ರತ್ಯಾರೋಪಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಾಜ್ಯದ ಮರ್ಯಾದೆಯನ್ನು ಬೀದಿಗೆ ಎಳೆಯುತ್ತಿರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ವಿರಾಮವಿಟ್ಟಿದೆ. ಹೌದು, ರಾಜ್ಯದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ರೂಪಾ ಅವರ ಪತಿ ಮನೀಷ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಿದೆ.
ನಿಯಮ ಮೀರಿ ವರ್ತನೆ ತೋರಿದ್ದ ರಾಜ್ಯದ ಉನ್ನತ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರಿಗೆ ಸರ್ಕಾರ ವರ್ಗಾವಣೆ ಮಾಡಿದ್ದರೂ, ಸ್ಥಳ ನಿಯೋಜನೆ ಮಾಡಿಲ್ಲ. ರೂಪಾರವರ ಪತಿ ಮನೀಷ್ ಮೌದ್ಗಿಲ್‌ಗೆ ಸ್ಥಳ ನಿಗದಿ ಮಾಡಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇ 30, 1984 ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದ್ದರು.
ಖಮ್ಮಂ ಜಿಲ್ಲೆಯ ಸತ್ತಪಳ್ಳಿ ತಾಲೂಕಿನ ರುದ್ರಾಕ್ಷಪಲ್ಲಿ ಗ್ರಾಮದವರಾಗಿದ್ದು, ಶ್ರೀಲಕ್ಷ್ಮಿ ರೆಡ್ಡಿ ಮತ್ತು ದಾಸರಿ ಜಯಪಲ್ ರೆಡ್ಡಿ ದಂಪತಿಗಳ ಪುತ್ರಿ. ರೋಹಿಣಿ ಹೈದರಾಬಾದ್‌ನಲ್ಲಿ ಇಂಜಿನಿಯರಿಂಗ ಮುಗಿಸಿ ಇಂ ಜಿನಿಯರಿಂಗ್ ನಂತರ ಉನ್ನತ ಅಧ್ಯಯನಕ್ಕಾಗಿ ರೋಹಿಣಿಯನ್ನು ವಿದೇಶಕ್ಕೆ ಕಳುಹಿಸಲು ಆಕೆಯ ಪೋಷಕರು ಬಯಸಿದ್ದರು.
ಆದರೆ, ತನ್ನ ತಾಯಿ ಶ್ರೀಲಕ್ಷ್ಮೀ ರೆಡ್ಡಿಯವರ ಸೇವಾ ಚಟುವಟಿಕೆಗಳನ್ನು ನೋಡಿದ್ದ ರೋಹಿಣಿ ಅವರು, ಜನ ಸೇವೆಯ ಕಡೆಗೆ ಒಲವು ತೋರಿಸಿದ್ದರು. ಹೀಗಾಗಿ, ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಹಿಮಾಯತ್ ನಗರದ ಆರ್. ಸಿ. ರೆಡ್ಡಿ ಕೋಚಿಂಗ್ ಸೆಂಟರ್‌ನ ಸಿವಿಲ್ ಸರ್ವಿಸ್ ತರಬೇತಿ ಕೇಂದ್ರಕ್ಕೆ ಸೇರಿದರು. ಅದಲ್ಲದೇ ಆ-ಕ್ಸಿಡೆಂಡ್ ಆಗಿದ್ದರೂ ಯುಪಿಎಸ್ ಸಿ ಪರೀಕ್ಷೆ ಬಿಡಲಿಲ್ಲ. ದೆಹಲಿಗೆ ಪರೀಕ್ಷೆ ಬರೆಯಲು ಹೋದಾಗ ರೋಹಿಣಿ ಸಿಂಧೂರಿಗೆ ಅ-ಪಘಾತ ವಾಗಿತ್ತು.
ಆದರೆ ಛಲ ಬಿಡದೇ 2009 ರ ಕೇಂದ್ರ ನಾಗರೀಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಅವರು ದೇಶಕ್ಕೆ 43 ನೇ ಸ್ಥಾನ ಪಡೆದಿದ್ದರು. ಸಿಂಧೂರಿಯವರು ಕೇಂದ್ರ ನಾಗರೀಕ ಸೇವೆಗೆ ಆಯ್ಕೆಯಾದ ಮೊದಲಿಗೆ, ತುಮಕೂರಿನಲ್ಲಿ ನಗರಾಭಿವೃದ್ಧಿ ವಿಭಾಗದ ಉಸ್ತುವಾರಿ ಆಯುಕ್ತರಾಗಿದ್ದರು. ಹೀಗೆ ವೃತ್ತಿ ಜೀವನವನ್ನು ಆರಂಭಿಸಿದ ರೋಹಿಣಿ ಸಿಂಧೂರಿಯವರು ವಿವಾದದಿಂದಲೇ ಸುದ್ದಿಯಾಗಿದ್ದರು.
2009ರ ಕರ್ನಾಟಕ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದರು. ಹಾಸನ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ರೋಹಿಣಿ ಸಿಂಧೂರಿ, ಸದ್ಯಕ್ಕೆ ಮುಜರಾಯಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಲಾಗಿದೆ.