Rocking Star Yash : ಮಲೇಶಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಚ್ಚೆದ್ದ ರಾಕಿ ಬಾಯ್ ಅಭಿಮಾನಿಗಳು!!

Rocking Star Yash : ನಮ್ಮ ಕನ್ನಡ ಚಿತ್ರರಂಗದ ಮಾರುಕಟ್ಟೆ ಎನ್ನುವುದು ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿನಯದ ಕೆಜಿಎಫ್ ಸಿನಿಮಾದ ಮೂಲಕ ಹೊರಗೆ ಕೂಡ ವಿಸ್ತರಣೆಯಾಗಿದೆ. ಮೊದಲು ಕೇವಲ ದಕ್ಷಿಣ ಭಾರತ ಚಿತ್ರರಂಗಕ್ಕೆ ಮೀಸಲಾಗಿದ್ದ ನಮ್ಮ ಕನ್ನಡದ ಸಿನಿಮಾಗಳು ಇಂದು ಪರಭಾಷೆಗಳಲ್ಲಿ ಅದರಲ್ಲೂ ವಿಶೇಷವಾಗಿ ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ ಎಂದರೆ ಅದಕ್ಕೆ ಪ್ರೇರಣೆ ಕೆಜಿಎಫ್.

ಕೆಜಿಎಫ್(KGF) ಗಿಂತಲೂ ಮುಂಚೆ ನಮ್ಮ ಕನ್ನಡ ಚಿತ್ರರಂಗದ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿರಬಹುದು. ಆದರೆ ಕೆಜಿಎಫ್ ಸಿನಿಮಾ ಕೇವಲ ಬಿಡುಗಡೆ ಮಾಡುವುದು ಮಾತ್ರವಲ್ಲ ಅದರಿಂದ ಯಶಸ್ಸನ್ನು ಪಡೆದುಕೊಳ್ಳುವುದು ಹೇಗೆ ಅನ್ನುವುದು ಕನ್ನಡದ ಫಿಲಂ ಮೇಕರ್ಸ್ ಗಳಿಗೆ ಸಾಬೀತುಪಡಿಸಿ ತೋರಿಸಿದೆ.

Rocking Star Yash In Malaysia

ಕೇವಲ ಕೆಜಿಎಫ್ ಮಾತ್ರವಲ್ಲದ ಕೆಜಿಎಫ್ ಸಿನಿಮಾದ ಎರಡನೇ ಭಾಗ ಕೂಡ ಬಿಡುಗಡೆಯಾಗಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಯಾವ ರೀತಿಯಲ್ಲಿ ಮಾಡಿ ಮುಗಿಸಿದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ.ಸದ್ಯಕ್ಕೆ ನಾವು ಮಾತನಾಡಲು ಹೊರಟಿರುವುದು ಕೆ ಜಿ ಎಫ್ ಸಿನಿಮಾದ ನಂತರ ಈಗ ಯಶ್(Yash) ಅವರು ಏನು ಮಾಡ್ತಾರೆ ಅನ್ನೋದರ ಬಗ್ಗೆ.

ಯಶ್ ಅವರು ತಮ್ಮ 19ನೇ ಸಿನಿಮಾದ ಬಗ್ಗೆ ಇದುವರೆಗೂ ಅಧಿಕೃತವಾಗಿ ಎಲ್ಲಿ ಕೂಡ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಇನ್ನು ಇತ್ತೀಚಿಗಷ್ಟೇ ಅಭಿಮಾನಿಗಳನ್ನು ನೋಡಲು ಮಲೇಶಿಯಾಗಿ ಕೂಡ ಯಶ್ ರವರು ಹೋಗಿರುವ ಘಟನೆ ತಿಳಿದು ಬಂದಿದೆ.ಹೌದು ಮಿತ್ರರೇ ರಾಕಿಂಗ್ ಸ್ಟಾರ್ ಯಶ್ ರವರು ಮಲೇಷ್ಯಾ ಗೆ ಹೋಗಿದ್ದು ಅಲ್ಲಿ ಕೊಡ ಕರ್ನಾಟಕದ ಹಾಗೆ ಅಭಿಮಾನಿಗಳ ಜನಸಾಗರವೇ ಹರಿದು ಬಂದಿದೆ ಎಂದು ಹೇಳಬಹುದಾಗಿದೆ.

ಭಾರತ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವುದು ಸಾಮಾನ್ಯ ನಾಯಕ ನಟರ ಸಾಮರ್ಥ್ಯವಾಗಿರಬಹುದು. ಆದರೆ ದೂರದ ಸಾಗರದಾಚೆಗಿನ ದೇಶವಾಗಿರುವ ಮಲೇಶಿಯಾದಲ್ಲಿ ಕೂಡ ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವುದಕ್ಕೆ ರಾಕಿಂಗ್ ಸ್ಟಾರ್ ಯಶ್ ರವರೆ ಆಗಿರಬೇಕು.

ಅಲ್ಲಿ ಕೂಡ ಹೋಗಿರುವ ಯಶ್ ಅವರು ಮಾತನಾಡಿದ್ದು ನಾನು ನನ್ನ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದು ನಿಮಗೆ ಒಳ್ಳೆಯ ಸಿನಿಮಾ ಅಥವಾ ಪ್ರಾಡಕ್ಟ್ ಅನ್ನು ನೀಡಲು ಸಾಕಷ್ಟು ತಯಾರಿಯೊಂದಿಗೆ ಈ ಬಾರಿ ಬರುತ್ತಿದ್ದು ನಿಮಗೆ Disappointment ಮಾಡೋದಿಲ್ಲ ಎಂಬುದಾಗಿ ಯಶ್ ಹೇಳುವ ಮೂಲಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಭರವಸೆಯನ್ನು ಮೂಡಿಸಿದ್ದಾರೆ. ಅಭಿಮಾನಿಗಳ ಈ ಅಭಿಮಾನದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ

Leave a Reply

Your email address will not be published. Required fields are marked *