ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಮುದ್ದು ಮಕ್ಕಳ ರಕ್ಷಾ ಬಂಧನ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಸುಂದರ ಕ್ಷಣಗಳು

ಸೆಲೆಬ್ರಿಟಿ ದಂಪತಿಗಳ ಸಾಲಿಗೆ ಸೇರಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ರಾಧಿಕಾ ಪಂಡಿತ್ (Radhika Pandith) ಸದಾ ಸುದ್ದಿಯಲ್ಲಿರುತ್ತಾರೆ. ನಟ ಯಶ್ ಅವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದರೂ ಕೂಡ ನಟಿ ರಾಧಿಕಾ ಪಂಡಿತ್ ಮನೆ, ಮಕ್ಕಳು, ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಇನ್ನೊಂದೆಡೆ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಫೋಟೋ, ವಿಡಿಯೋಗಳು ಹಾಗೂ ಹಬ್ಬಗಳಲ್ಲಿ ಶುಭಾಶಯ ಕೋರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅದಲ್ಲದೇ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮನೆಯಲ್ಲಿ ಪ್ರತಿ ಹಬ್ಬವನ್ನು ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಿಸುತ್ತಾರೆ.

ಹೌದು ಈ ಬಾರಿಯು ಕೂಡ ರಾಕಿಂಗ್ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮುದ್ದು ಮಕ್ಕಳಾದ ಆಯ್ರಾ (Iraa) ಮತ್ತು ಯಥರ್ವ್ (Yatharv) ಈ ವರ್ಷ ರಕ್ಷಾಬಂಧನವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಪಿಂಕ್, ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿರುವ ಉಡುಗೆ ಮಿಂಚಿದ್ದು, ಅಕ್ಕ ಆಯ್ರಾ ತಮ್ಮ ಯಥರ್ವ್‌ಗೆ ಆರತಿ ಮಾಡಿ, ತಿಲಕವಿಟ್ಟು ರಾಖಿ ಕಟ್ಟಿ ಸಿಹಿ ತಿನ್ನಿಸಿ ದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು, ಆಯ್ರಾ ಮತ್ತು ಯಥರ್ವ್ ರವರ ರಕ್ಷಾ ಬಂಧನ ಸೆಲೆಬ್ರೇಶನ್ ವಿಡಿಯೋ ಹಂಚಿಕೊಂಡು, ಕೆಲವೊಮ್ಮೆ ಸಹಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು ಇರುತ್ತಾರೆ. ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ನಟಿಯ ಮನೆಯಲ್ಲಿ ಮುದ್ದು ಮಕ್ಕಳ ರಕ್ಷಾ ಬಂಧನ ಸೆಲೆಬ್ರೇಶನ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಅದಲ್ಲದೇ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಪತ್ನಿ ರಾಧಿಕಾ ಪಂಡಿತ್ (Radhika Pandith) ಹಾಗೂ ಮಕ್ಕಳೊಂದಿಗೆ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದರು. ಈ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ರಾಧಿಕಾ ಪಂಡಿತ್ ಅವರು ಹಳದಿ ಬಣ್ಣದ ನೇರಳೆ ಬಾರ್ಡರ್ ಸೀರೆ ಉಟ್ಟು ಮಿಂಚಿದರೆ, ಯಶ್ ಹಾಗೂ ಇಬ್ಬರೂ ಮಕ್ಕಳು ಕೂಡ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದರು. ಹೀಗೆ ಸದಾ ಸುದ್ದಿಯಾಗುವ ನಟಿ ರಾಧಿಕಾ ಪಂಡಿತ್ ಅವರು ತಮ್ಮ ವೃತ್ತಿ ಜೀವನದ ಕುರಿತು ಯಾವಾಗ ಅಪ್ಡೇಡ್ ನೀಡುತ್ತಾರೆ ಎಂದು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *