ಬಾಡಿಗೆ ಮನೆಯಲ್ಲಿದ್ದ ಈ ಖತರ್ನಾಕ್ ಜೋಡಿ, ಮನೆ ಮಾಲೀಕನಿಗೆ ಪಂಗನಾಮ ಹಾಕಿದ್ರು, ಇಲ್ಲಿದೆ ನೋಡಿ ಅಸಲಿ ವಿಚಾರ

ಮನುಷ್ಯನು ಯಾರನ್ನು ಯಾರು ಕೂಡ ನಂಬದ ಸನ್ನಿವೇಶಗಳು ನಿರ್ಮಾಣವಾಗಿದೆ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಎಷ್ಟೋ ಸಂಬಂಧಗಳಲ್ಲಿ ನಂಬಿಕೆಯಿಟ್ಟು ಜೊತೆಗೆ ನಡೆಯುವವರಿಗೆ ಬೆನ್ನ ಹಿಂದೆ ಚೂರಿ ಹಾಕುವವರ ಸಂಖ್ಯೆಯೇ ಹೆಚ್ಚು ಎನ್ನಬಹುದು. ಕೆಲವೊಮ್ಮೆ ಇಂತಹ ಕೆಲವು ಘಟನೆಗಳು ಬೆಳಕಿಗೆ ಬಂದಾಗ ಅಚ್ಚರಿಯಾಗುತ್ತದೆ. ಅದಲ್ಲದೇ ವಿದೇಶಿ ಸಂಸ್ಕೃತಿಯನ್ನು ಅಳವಡಿಕೆ ಮಾಡಿಕೊಂಡವರು ಬಹುಪಾಲು ಮಂದಿ.

ಇತ್ತೀಚೆಗಿನ ದಿನಗಳಲ್ಲಿ ಲೀವ್ ಇನ್ ಟುಗೇದರ್ (Living together) ಸಂಬಂಧಗಳು ಹೆಚ್ಚಾಗುತ್ತಿದೆ. ಇದರಿಂದ ನಾನಾ ರೀತಿಯ ಅನಾಹುತಗಳು ಕೂಡ ನಡೆಯುತ್ತಿದೆ. ಆದರೆ ಸುಬ್ರಮಣ್ಯಪುರ ಪೊಲೀಸ್ (Police ) ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ (MGS Layout) ನಲ್ಲಿ ನಡೆದ ಘಟನೆಯನ್ನು ಕೇಳಿದರೆ ಶಾಕ್ ಆಗುವುದು ಪಕ್ಕಾ. ಹೌದು ಜೋಡಿಯೊಂದು ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್​​ನಲ್ಲಿತ್ತು (Living together) ಈ ವೇಳೆಯಲ್ಲಿ ಜೋಡಿ ಮಾಲೀಕರ ಮನೆಯನ್ನೇ ದೋಚಿದ್ದಾರೆ. ಈ ಕಿಲಾಡಿ ಜೋಡಿಯನ್ನು ಬಂ-ಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಜೋಡಿಯನ್ನು ಲಿಖಿತ ಹಾಗೂ ಸುಮಂತಾ ಎಂದು ಗುರುತಿಸಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ (Subramanya Police Station) ವ್ಯಾಪ್ತಿಯ ಎಜಿಎಸ್ ಲೇಔಟ್​​​ (MGS Layout) ನ ಪ್ರೇಮಲತ ಎಂಬುವವರ ಮನೆಯಲ್ಲಿ ಲಿಖಿತ (Likhitha) ಹಾಗೂ ಸುಮಂತ್ (Sumanth) ಬಾಡಿಗೆಯಿದ್ದು, ಮನೆಯವರಿಗೆ ಕನ್ನ ಹಾಕಿದ್ದಾರೆ. ಈ ಖತರ್ನಾಕ್ ಜೋಡಿಯೂ ಕಳ್ಳತನ ಮಾಡುವ ಸಲುವಾಗಿ ಎಜಿಎಸ್ ಲೇಔಟ್​​​ ಗೆ ಬಾಡಿಗೆ ಮನೆಯ ನೆಪದಲ್ಲಿ ಹೊಕ್ಕಿದ್ದರು.

ಕಳೆದ ನಾಲ್ಕು ತಿಂಗಳಿನಿಂದ ಮನೆ ಮಾಲೀಕರ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದ ಈ ಜೋಡಿಯೂ ಇತ್ತೀಚೆಗಷ್ಟೇ ಮನೆ ಖಾಲಿ ಮಾಡಿತ್ತು. ಆದಾದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕ-ಳ್ಳತನ (Robery) ಆಗಿದ್ದು, ಆರೋಪಿಗಳು ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಆದರೆ ಅಚ್ಚರಿಯೆಂದರೆ ಆರೋಪಿಗಳ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊನೆಗೆ ಈ ಜೋಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಖಿತ ಹಾಗೂ ಸುಮಂತ್ ಈ ಇಬ್ಬರೂ ಕ-ದ್ದ ಚಿನ್ನವನ್ನು ಮಾರಿ ಶಿವಮೊಗ್ಗ (Shivamogga) ದಲ್ಲಿ ಸೆಟಲ್ ಆಗಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಸುಬ್ರಮಣ್ಯಪುರ ಠಾಣಾ ಪೊಲೀಸರು ಈ ಜೋಡಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಈ ಜೋಡಿ ಕದಿಯುವುದನ್ನೇ ಕೆಲಸ ಮಾಡಿಕೊಂಡಿದ್ದರು. ಈಗಾಗಲೇ ಕದ್ದ ಹಣವು ಖಾಲಿಯಾದ ಹಿನ್ನಲೆಯಲ್ಲಿ ಈ ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *