ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತನ್ನ ಲವ್ ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದ ಪ್ರಗತಿ ಶೆಟ್ಟಿ, ಇವರಿಬ್ಬರ ಕ್ಯೂಟ್ ಲವ್ ಸ್ಟೋರಿ ಹೇಗಿದೆ ಗೊತ್ತಾ?

ಕಾಂತಾರ (Kantara) ಸಿನಿಮಾದ ಬಳಿಕ ರಿಷಬ್ ಶೆಟ್ಟಿಯವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ತುಳು ನಾಡಿನ ದೈವಾರಾಧನೆಯ ಕಥಾಸಾರದಲ್ಲಿ ತೆರೆಗೆ ಬಂದ ಕಾಂತಾರ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಕಾಂತಾರ ಸಿನಿಮಾದ ಮೂಲಕ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಯವರನ್ನು ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಿಕೊಟ್ಟರು. ಈ ಸಿನಿಮಾದಲ್ಲಿಯೇ ರಿಷಬ್ ಶೆಟ್ಟಿ ಮಕ್ಕಳು ಕೂಡ ಕಾಣಿಸಿಕೊಂಡಿದ್ದರು. ಇತ್ತ ಪ್ರಗತಿ ಶೆಟ್ಟಿ ಕಾಂತಾರದ ಮೊದಲ ಸೀನ್ ನಲ್ಲಿಯೇ ರಾಣಿಯಾಗಿ ಕಾಣಿಸಿಕೊಂಡಿದ್ದರು.

ಶೂಟಿಂಗ್ ಕೆಲಸದಲ್ಲಿ ಪತಿ ಪತ್ನಿ ಬ್ಯುಸಿ ಇದ್ದಕಾರಣ ಪುಟ್ಟ ಮಕ್ಕಳನ್ನು ಕರೆದುಕೊಂಡು ಅವರು ಸ್ಪಾಟ್​​ಗೆ ಬರುತ್ತಿದ್ದರಂತೆ. ರಿಷಬ್ ಅವರು ಪ್ರಗತಿ ರಾಣಿಯಾಗಿ ನಟಿಸಬೇಕೆಂದು ಬಯಸಿದ್ದು, ದರೆ ಪ್ರಗತಿ ಬೇರೆ ಯಾರನ್ನಾದರೂ ಆಯ್ಕೆ ಮಾಡಿ ಎಂದಿದ್ದರಂತೆ. ಕೊನೆಗೆ ನಟ ರಿಷಬ್ ಮಾತ್ರ ಪಟ್ಟು ಬಿಡದೆ ಪತ್ನಿಯಿಂದ ರಾಣಿ ಪಾತ್ರವನ್ನು ಮಾಡಿಸಿದ್ದರಂತೆ. ಈ ಹಿಂದೆ ಈ ಕುರಿತಂತೆ ಪ್ರಗತಿ ಶೆಟ್ಟಿಯವರೇ ಹೇಳಿಕೊಂಡಿದ್ದರು. ಕನ್ನಡ ಸಿನಿಮಾರಂಗದಲ್ಲಿ ನಟ ಕಮ್ ನಿರ್ದೇಶಕರಾಗಿ ಸಕ್ರಿಯರಾಗಿರುವ ರಿಷಬ್ ಶೆಟ್ಟಿ ವೈವಾಹಿಕ ಜೀನವಕ್ಕೆ ಕಾಲಿಟ್ಟ ನಂತರ ಪ್ರಗತಿ ಫ್ಯಾಷನ್ ಲೋಕ (Fashion World) ದಲ್ಲಿ ತೊಡಗಿಸಿಕೊಂಡವರು.

ರಿಷಬ್ ಅವರ ಪ್ರತಿಯೊಂದು ಚಿತ್ರಕ್ಕೂ ಪ್ರಗತಿನೇ ಡ್ರೆಸ್ ಡಿಸೈನ್ ಮಾಡಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದ ಕಾಂತಾರ ಸಿನಿಮಾದ ವಸ್ತ್ರ ವಿನ್ಯಾಸಕರು ಈ ಪ್ರಗತಿ ಶೆಟ್ಟಿಯಾಗಿದ್ದರು. ರಿಷಬ್ ಹಾಗೂ ಪ್ರಗತಿಯವರು ಪ್ರೀತಿಸಿ ಮದುವೆಯಾಗಿದ್ದು, ವೃತ್ತಿ ಜೀವನದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಜೊತೆಯಾಗಿ ಸಾಗುತ್ತಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಲವ್ ಸ್ಟೋರಿ (Love Story) ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ಆದರೆ ಕಾಂತಾರ ಸಮಯದಲ್ಲಿ ನಡೆದಿದ್ದ ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಗತಿ ಶೆಟ್ಟಿಯೇ ರಿವೀಲ್ ಮಾಡಿದ್ದರು.

ಅಂದಹಾಗೆ, ಉಳಿದವರು ಕಂಡಂತೆ ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ (Rikki) ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರಂತೆ. ಈ ವೇಳೆಯಲ್ಲಿ ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಇದು ಅವರಿಬ್ಬರ ಮೊದಲ ಭೇಟಿಯಾಗಿತ್ತು. ಸಂದರ್ಶನದಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು ಪ್ರಗತಿ ಶೆಟ್ಟಿ.

“ಎಲ್ಲರೂ ರಕ್ಷಿತ್ ಶೆಟ್ಟಿ (Rakshith Shetty) ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು. ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜತೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು. ಆದಾದ ಬಳಿಕ ರಿಷಬ್ ಶೆಟ್ಟಿಯವರೇ ನನ್ನ ಫೇಸ್‌ಬುಕ್ ಖಾತೆ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಬಳಿಕ ಇಬ್ಬರ ನಡುವೆ ಚಾಟಿಂಗ್ ಶುರುವಾಯಿತು. ಹೀಗೆ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿ ಒಂದು ವರ್ಷದ ಒಳಗೇ ಇಬ್ಬರೂ ವಿವಾಹವಾದೆವು” ಎಂದಿದ್ದರು.

Leave a Reply

Your email address will not be published. Required fields are marked *