100km ಗಿಂತಲೂ ಹೆಚ್ಚು ಸ್ಪೀಡ್ನಲ್ಲಿ ದಿವೈಡೆರ್ ಗೆ ಗುದ್ದಿದರೂ ಕೂಡ ರಿಷಬ್ ಪಂತ್ ಜೀವವನ್ನು ಉಳಿಸಿದ ಕಾರು ಯಾವುದು ಇದರ ವಿಶೇಷತೆ ಏನು? ಮತ್ತು ಇದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ!!!

Rishab pant car : ರಿಷಬ್ ಪಂತ್ ಅವರ ಕಾರು ಮುಂಜಾನೆ ಸುಮಾರು 5 ಗಂಟೆ 30 ನಿಮಿಷದ ಸಮಯಕ್ಕೆ ಅಪಘಾ-ತಕ್ಕೀಡಾಗಿದೆ. ರೂರ್ಕೆ ಸಮೀಪದ ಮಹಮ್ಮದ್ ಪುರ ಜಟ್ ನಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲಿಯೇ ಕಾರು ಹತ್ತಿಕೊಂಡು ಉರಿದಿದೆ. ಸದ್ಯ ರಿಷಬ್ ಅವರು ಪ್ರಾಣಪಾಯದಿಂದ ಪಾರಾಗಿದ್ದು , ಡೆಹ್ರಾಡೂನ್ ‌ನ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದ ಕ್ರಿಕೆಟ್ ಆಟಗಾರ ರಿಷಬ್ ಅವರು ದೆಹಲಿಯಿಂದ ಉತ್ತರ ಖಾಂಡ್ ಗೆ ಬರುವಾಗ ಮುಂಜಾವಿನ ವೇಳೆಯಾದ್ದರಿಂದ ರಸ್ತೆಯ ಮಧ್ಯದಲ್ಲಿಯೇ ಕೊಂಚ ನಿದ್ದೆಗೆ ಜಾರಿ ಕಣ್ಣು ಮುಚ್ಚಿ ಬಿಡುವುದರ ಕ್ಷಣಮಾತ್ರದ ಗಳಿಗೆಯಲ್ಲಿ ಅವಘಡ ಸಂಭವಿಸಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ. ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಕಿಯಿಂದ ದಗದಗ ಉರಿದು ಕರುಕಲಾಗಿದೆ. ಪಂತ್ ಅವರು ಕಾರಿನ ಗಾಜನ್ನು ಒಡೆದುಕೊಂಡು ಹೊರಬಂದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ.

Rishab pant car price
Rishab pant car price

ರಿಷಬ್ ಪಂತ್ ಅವರ ಜೀವವನ್ನು ಉಳಿಸಿದ್ದು ಮಾತ್ರ ಅವರು ಖರೀದಿ ಮಾಡಿರುವ ಈ ಒಂದು ದುಬಾರಿ ಕಾರ್‌. ಈ ಕಾರಿನ ಹೆಸರು ಮರ್ಸಿಡಿಸ್ ಬೆಂಜ್ ಜಿಎಲ್ ಸಿ (Mercedes-Benz GLC ). ರಿಷಬ್ ಈ ಒಂದು ಕಾರನ್ನು ಇದೇ ವರ್ಷ ಖರೀದಿ ಮಾಡಿದ್ದರು. ಸುಮಾರು ಒಂದುವರೆ ಕೋಟಿ ರೂಪಾಯಿಗಳನ್ನು ಕೊಟ್ಟು ಈ ಒಂದು ಕಾರನ್ನು ಖರೀದಿ ಮಾಡಿದ್ದರು. ಹಾಗಾದರೆ ಈ ಕಾರಿನಲ್ಲಿರುವ ಯಾವ ಒಂದು ಸೌಲಭ್ಯ ಇಂದು rishab pant ಜೀವ ಉಳಿಸಿದೆ ಎಂಬುದು ನಿಮಗೆ ಗೊತ್ತಾ??

RISHAB PANT ಖರೀದಿ ಮಾಡಿರುವ ಈ ಒಂದು ಮರ್ಸಿಡಿಸ್ ಬೆಂಜ್ ಎಸ್ ಯು ವಿ ಕಾರಿನಲ್ಲಿ ಸುಚಜ್ಜಿತವಾದ ಏರ್ ಬ್ಯಾಗ್ಗಳಿವೆ. ಸಾಮಾನ್ಯವಾಗಿ ಎಲ್ಲಾ ಕಾರುಗಳಲ್ಲಿಯೂ ಡ್ರೈವರ್ ಗಳಿಗೆ ಒಂದು ಏರ್ ಬ್ಯಾಗ್ ಗಳಿದ್ದರೆ.. ರಿಷಪ್ ಖರೀದಿ ಮಾಡಿದ ಈ ಕಾರಿನಲ್ಲಿ ಡ್ರೈವರ್ ಸೇಫ್ಟಿ ಗೆ ಎರಡು ಏರ್ ಬ್ಯಾಗ್ ಗಳಿವೆ. ಒಂದು ಏರ್ ಬ್ಯಾಗ್ ಮೊಣಕಾಲಿನ (knee air bag) ರಕ್ಷಣೆಗೆ ಮತ್ತು ಇನ್ನೊಂದು ಮುಖ ಮತ್ತು ತಲೆಯ ರಕ್ಷಣೆಗೆ. ಈ ಎರಡು ಸುಚಜ್ಜಿತವಾದ ಏರ್ ಬ್ಯಾಗ್ (air bags) ಗಳು ರಿಷಬ್ ಅಂತ ಅವರ ಜೀವವನ್ನು ಕಾಪಾಡಿವೆ. ರಿಷಬ್ ಪಂತ್ ಅವರ ದೇಹಕ್ಕೆ ಒಂದೇ ಒಂದು ಫ್ಯಾಕ್ಚರ್ ಕೂಡ ಆಗಿಲ್ಲ..

Rishab pant money was robbed by local people after car accident

ಘಟನೆಯಾದ ಮಾರ್ಗ ಮಧ್ಯದಲ್ಲಿಯೇ ಓಡಾಡುತ್ತಿದ್ದ ಕೆಲ ಯುವಕರು, ಗಾಯಗೊಂಡು ರ-ಕ್ತ ಹೊರ ಸೂಸುತ್ತಿರುವ ರಿಷಬ್ ಪಂತವರಿಗೆ ಸಹಾಯ ಮಾಡುವುದನ್ನು ಮರೆತು, ಅವರ ಬ್ಯಾಗ್ ನಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಾಣ ಕಳೆದುಕೊಳ್ಳುತ್ತಿರುವವರನ್ನು ರಕ್ಷಿಸುವುದರ ಬದಲಾಗಿ, ಅವರಿಲ್ಲಿದ್ದ ಹಣವನ್ನು ದೋಚುವುದು ಅಮಾನವೀಯತೆ ಎಂದು ಹೇಳಿವೆ.

ನಂತರ ಹರಿಯಾಣ ರೋಡ್‌ವೇಸ್‌ನ ಚಾಲಕ ಮತ್ತು ಕಂಡಕ್ಟರ್, ರಿಷಬ್ ಪಂತ್ ಅವರ ನೋವಿನ ಘಟನೆಯನ್ನು ಉತ್ತರಾಖಂಡ ಪೊಲೀಸರಿಗೆ ತಿಳಿಸಿದ್ದಾರೆ ಮತ್ತು ತಕ್ಷಣವೇ ಪೊಲೀಸ್ ಸಿಬ್ಬಂದಿಯು ರಿಷಬ್ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಮಾಹಿತಿಗಳು ತಿಳಿಸಿವೆ. ಕಾರಿನ ಅಪಘಾತದಿಂದ ಹಣೆಯ ಮೇಲಿನ ರಕ್ತಮಯವಾದ ಗಾಯದಿಂದ ಒದ್ದಾಡಿದ ರಿಷಬ್ ಅವರ ವಿಡಿಯೋಗಳು ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾದ ನಂತರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅವಘಡದ ನಂತರ ಆಸ್ಪತ್ರೆಗೆ ದಾಖಲಾದ ರಿಷಬ್ ಅವರ ಬಗ್ಗೆ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ನೀಡಿರುವ ವರದಿಯ ಪ್ರಕಾರ, ರಿಷಭ ಅವರ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಿಲ್ಲವಂತೆ. ಹಣೆ, ತಲೆ, ಮೊಣಕಾಲು, ಮೊಣಕೈ ಬೆನ್ನು ಸೇರಿದಂತೆ ದೇಹದ ಕೆಲವು ಭಾಗಗಳಲ್ಲಿ ಗಾಯ ಮತ್ತು ನೋವಿನ ಪೆಟ್ಟುಗಳಾಗಿದ್ದು, ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕ್ರಿಕೆಟ್ ಪ್ರಿಯರು ಮತ್ತು ಅಭಿಮಾನಿಗಳು ರಿಷಬ್ ಅವರು ಬೇಗನೆ ಗುಣಮುಖವಾಗಿ ಬರಲೆಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *