ಗಣೇಶ ಚತುರ್ಥಿ ಹಬ್ಬ (Ganesha Chaturthi Festival) ದ ಸಂಭ್ರಮವು ದೇಶದೆಲ್ಲೆಡೆ ರಂಗೇರಿದೆ. ವಿವಿಧ ಗಣೇಶೋತ್ಸವ ಸಂಘಟನೆಗಳು ಇಂದು ಅಥವಾ ನಾಳೆ ಗಣೇಶನನ್ನು ಕೂರಿಸಿ ಪೂಜಿಸುತ್ತಿದ್ದಾರೆ. ಕೆಲವರು ಇಂದು ಗೌರಿ ಹಬ್ಬವನ್ನು ಆಚರಿಸಿದರೆ, ಇನ್ನು ಕೆಲವರು ನಾಳೆ ಗಣೇಶನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ಕಡೆಯಲ್ಲಿ ಶ್ರೀಮಂತ ಗಣೇಶ (Richest Ganesha) ನನ್ನು ಕುಳ್ಳಿರಿಸಿ ಪೂಜಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಈ ಗಣೇಶನ ಸಿಂಗಾರಕ್ಕಾಗಿ ಬಳಸಿದ ಚಿನ್ನ ಬೆಳ್ಳಿಯ ಬಗ್ಗೆ ಕೇಳಿದರೆ ಶಾ- ಕ್ ಆಗುವುದರಲ್ಲಿ ಡೌಟ್ ಇಲ್ಲ. ಮುಂಬೈ (Mumbai) ನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್ ಸರ್ಕಲ್ (King Circle) ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿ (Gold And Silver) ಯಲ್ಲಿ ಭರ್ಜರಿಯಾಗಿ ಅಲಂಕಾರ ಮಾಡಿ ಕುಳ್ಳಿರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಗಣೇಶನನ್ನು ಅದ್ದೂರಿಯಾಗಿ ಅಲಂಕಾರ ಮಾಡಿದ್ದಾರೆ.

ಜಿಎಸ್‌ಬಿ ಸೇವಾ ಮಂಡಲ (GSB Seva Mandal) ರವರು ಗಣೇಶನನ್ನು ಕೂರಿಸಿದ್ದು, ಈ ಗಣೇಶನಿಗೆ 69 ಕೆ.ಜಿ. ಚಿನ್ನ (Gold) ಹಾಗೂ 336 ಕೆ.ಜಿ. ಬೆಳ್ಳಿ (Silver) ಯಿಂದ ಅಲಂಕಾರ ಮಾಡಲಾಗಿದೆ. ಅದಲ್ಲದೇ, ಈ ಬಾರಿಯ ವಿಮೆಯನ್ನು ಮಾಡಿಸಲಾಗಿದೆ. ಈ ವಿಮೆಯ ಒಟ್ಟು ಮೊತ್ತವು ಬರೋಬ್ಬರಿ 360 ಕೋಟಿ ರೂಪಾಯಿಯಾಗಿದೆ.
ಮುಂಬೈ (Mumbai) ಜಿಎಸ್‌ಬಿ ಸೇವಾ ಮಂಡಲದ ವತಿಯಿಂದ ಆಚರಿಸುವ ಗಣೇಶೋತ್ಸವಕ್ಕೆ ಈ ವರ್ಷ 68 ವರ್ಷಗಳು ತುಂಬಿದ್ದು, ಈ ಬಾರಿ 69ನೇ ಗಣೇಶೋತ್ಸವ ನಡೆಯುತ್ತಿದೆ. ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20 ರಂದು ಈ ಗಣೇಶನ ಪೆಂಡಾಲ್‌ನಲ್ಲಿ ವಿಶೇಷ ‘ಹವನ’ (Special Havana) ನಡೆಸಲಾಗುವುದು. ಅದಲ್ಲದೇ ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 29 ರವರೆಗೆ 10 ದಿನಗಳವರೆಗೆ ಗಣೇಶ ಹಬ್ಬದ ಆಚರಣೆಯು ಅದ್ದೂರಿಯಾಗಿ ನಡೆಯುತ್ತದೆ.
ಜಿಎಸ್‌ಬಿ ಸೇವಾ ಮಂಡಲದ ಪ್ರತಿನಿಧಿಯ ಅಮಿತ್ ಪೈ (Amith Pai) ಈ ಬಗ್ಗೆ ಮಾಹಿತಿಯನ್ನು, ನೀಡಿದ್ದು, “360 ಕೋಟಿ ರೂಪಾಯಿಗಳಲ್ಲಿ, 38.47 ಕೋಟಿ ರೂಪಾಯಿಗಳನ್ನು ಎಲ್ಲಾ-ಅಪಾಯದ ವಿಮಾ ಪಾಲಿಸಿಗೆ ಹಂಚಲಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಮತ್ತು ಆಭರಣಗಳಿಗೆ ಸಂಬಂಧಿಸಿದ ಅಪಾಯಗಳನ್ನು ಒಳಗೊಂಡಿದೆ,” ಎಂದಿದ್ದಾರೆ.
“ಹೆಚ್ಚುವರಿಯಾಗಿ, ಭೂಕಂಪದ ಅಪಾಯವನ್ನು ಒಳಗೊಂಡಂತೆ ಬೆಂಕಿ ಮತ್ತು ವಿಶೇಷ ಅಪಾಯಕ್ಕಾಗಿ 2 ಕೋಟಿ ರೂಪಾಯಿ ವಿಮೆ ಪಡೆಯಲಾಗಿದೆ. ಸಾರ್ವಜನಿಕ ಸುರಕ್ಷತೆಗಾಗಿ, ಪೆಂಡಾಲ್ ಮತ್ತು ಭಕ್ತರನ್ನು ರಕ್ಷಿಸಲು, 30 ಕೋಟಿ ರೂಪಾಯಿಗಳ ವಿಮೆ ಪಡೆಯಲಾಗಿದೆ. ಸ್ವಯಂಸೇವಕರು ಮತ್ತು ಸಿಬ್ಬಂದಿಯ ಯೋಗಕ್ಷೇಮವನ್ನು ಖಾತ್ರಿಪಡಿಸುವ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಗೆ ಬರೋಬ್ಬರಿ 289.50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ,” ಎಂದಿದ್ದಾರೆ. ಒಟ್ಟಿನಲ್ಲಿ ಕೆಜಿಗಟ್ಟಲೇ ಚಿನ್ನ ಹಾಗೂ ಬೆಳ್ಳಿಯಿಂದ ಅಲಂಕೃತರಾಗಿರುವ ಗಣೇಶನನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ.