ಡಾಕ್ಟರ್ ರಾಜಕುಮಾರ್ ಕಾಲದಿಂದಲೂ ಕನ್ನಡ ಚಿತ್ರರಂಗ ಅತ್ಯುತ್ತಮ ಸಿನಿಮಾಗಳನ್ನ ನೀಡುತ್ತಲೇ ಬಂದಿದೆ ಒಂದರ ಹಿಂದೆ ಒಂದರಂತೆ ಅತ್ಯುತ್ತಮ ಸಿನಿಮಾಗಳನ್ನ ಕೊಡುತ್ತಿರುವ ಚಂದನವನ ಬಾಲಿವುಡ್ಡಿಗರು ಕೂಡ ದಂಗಾಗುವ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಕನ್ನಡದಲ್ಲಿ ಹೆಚ್ಚಾಗಿ ಕಥೆ ನಾಯಕ ನಟ ಇಂತಹ ವಿಷಯಗಳಿಗೆ ಮಾತ್ರ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಇದೀಗ ನಿರ್ಮಾಣವೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಇನ್ನೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲಾ ಸಿನಿಮಾಗಳು ಹೆಚ್ಚು ಕಡಿಮೆ ನೂರಾರು ಕೋಟಿ ಬಜೆಟ್ ನಲ್ಲಿಯೇ ನಿರ್ಮಾಣವಾಗುತ್ತವೆ.
ಒಂದು ಸಿನಿಮಾ ಗೆಲ್ಲುವುದಕ್ಕೆ ನಿರ್ದೇಶನ, ನಿರ್ಮಾಣ, ಎಷ್ಟು ಮುಖ್ಯವೋ ಅಷ್ಟೇ ನಾಯಕ ನಟ ಅಥವಾ ನಟಿಯರು ಕೂಡ ಮುಖ್ಯ. ಹಾಗಾಗಿ ಅತಿ ಹೆಚ್ಚು ಸಂಭಾವನೆಯನ್ನು ನಟರಿಗೆ ನೀಡಲಾಗುತ್ತದೆ. ಇಂದು ಕೆಜಿಎಫ್ ನಂತಹ ಸಿನಿಮಾ ಬಂದಿರುವ ಹಿನ್ನೆಲೆಯಲ್ಲಿ ನಟರಿಗೆ ಹೆಚ್ಚು ವ್ಯಾಲ್ಯೂ ಬಂದಿದೆ. ಹೆಚ್ಚು ಹೆಚ್ಚು ಸಂಭಾವನೆಯನ್ನು ಕೊಟ್ಟು ನಟರನ್ನು ಸಿನಿಮಾಕ್ಕೆ ಹಾಕಿಕೊಳ್ಳಲಾಗುತ್ತದೆ. ಹಾಗಾದರೆ ಇದೀಗ ಹೆಚ್ಚು ಸಂಪಾದನೆ ಪಡೆಯುತ್ತಿರುವ ಹಾಗೂ ಕನ್ನಡದಲ್ಲಿ ಶ್ರೀಮಂತ ನಟರು ಯಾರು ಎಂಬುದನ್ನು ನೋಡೋಣ ಬನ್ನಿ.
ಮೊದಲನೆಯದಾಗಿ ನಟ ದರ್ಶನ್. ಕನ್ನಡದಲ್ಲಿ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ನಟ ದರ್ಶನ್ ಅವರು ಕನ್ನಡದ ಬಹು ಬೇಡಿಕೆಯ ನಟ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಕ್ರಾಂತಿ ಸಿನಿಮಾ ಇನ್ನೇನು ತೆರೆ ಕಾಣಲಿದೆ ದರ್ಶನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ನಟ ದರ್ಶನ್ ಅವರು ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.
ಒಂದು ಸಿನಿಮಾಕ್ಕೆ ಮೂರರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುವ ನಟ ದರ್ಶನ್ ಶ್ರೀಮಂತ ಕನ್ನಡ ನಟರುಗಳಲ್ಲಿ ಒಬ್ಬರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಇವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ನಮ್ಮ ಮನಸ್ಸಿನಲ್ಲಿ ಸದಾ ಕಾಲಕ್ಕೆ ಉಳಿದಿರುತ್ತಾರೆ. ಪುನೀತ್ ರಾಜಕುಮಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆಯ ನಟ ಆಗಿದ್ದವರು ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದ ಪುನೀತ್ ರಾಜಕುಮಾರ್ ಕನ್ನಡದ ಶ್ರೀಮಂತ ನಟರಲ್ಲಿ ಒಬ್ಬರು. ಕಾರ್ ಹಾಗೂ ಬೈಕ್ ಕ್ರೇಜ್ ಇದ್ದ ಪುನೀತ್ ರಾಜಕುಮಾರ್ ಕೆಲವು ಐಷಾರಾಮಿ ಕಾರ್ ಗಳ ಕಲೆಕ್ಷನ್ ಕೂಡ ಇಟ್ಟಿದ್ದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸ್ಪರ್ಶ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಕಿಚ್ಚ ಸುದೀಪ್ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇತ್ತೀಚಿಗೆ ವಿಕ್ರಾಂತ್ ರೋಣ ಎನ್ನುವ ಹಿಟ್ ಸಿನಿಮಾದಲ್ಲಿ ನಟಿಸಿ ಉತ್ತಮ ಯಶಸ್ಸು ಕಂಡಿರುವ ಸುದೀಪ್ ಅವರು ಕನ್ನಡದ ಶ್ರೀಮಂತ ನಟರುಗಳಲ್ಲಿ ಒಬ್ಬರು. ಇವರು ಸಾಕಷ್ಟು ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ.
ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತರಾಗಿರುವ ನಟ ದ್ರುವ ಸರ್ಜಾ. ಕನ್ನಡದಲ್ಲಿ ಹೆಚ್ಚು ಸಿನಿಮಾ ಮಾಡದೆ ಇದ್ದರೂ ಇವರು ಮಾಡಿರುವ ಎಲ್ಲಾ ಸಿನಿಮಾಗಳು ಹಿಟ್ ಆಗಿವೆ. ಇದೀಗ ದ್ರುವ ಸರ್ಜಾ ಅವರ ಹೊಸ ಸಿನಿಮಾ ಕೆ ಡಿ ಸೆಟ್ಟೇರಿದ್ದು ಚಿತ್ರಿಕರಣ ಆರಂಭವಾಗಿದೆ. ಇನ್ನು ಒಂದು ಸಿನಿಮಾಕ್ಕೆ ಸುಮಾರು ನಾಲ್ಕು ಕೋಟಿ ಸಂಭಾವನೆ ಪಡೆಯುವ ಧ್ರುವ ಸರ್ಜಾ ಕನ್ನಡದ ಶ್ರೀಮಂತ ನಟರುಗಳಲ್ಲಿ ಒಬ್ಬರು.
ಇನ್ನು ಕರಾವಳಿಯ ಪ್ರತಿಭೆಗಳಾದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕೂಡ ಸ್ಯಾಂಡಲ್ ವುಡ್ ನ ಶ್ರೀಮಂತರ ಪಟ್ಟಿಯಲ್ಲಿ ಸೇರುತ್ತಾರೆ. ರಕ್ಷಿತ್ ಶೆಟ್ಟಿ ಇತ್ತೀಚಿಗೆ ಚಾರ್ಲಿ ಸಿನಿಮಾ ಮಾಡಿ ಸಾಕಷ್ಟು ಹಣ ಗಳಿಸಿದ್ದರೆ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ದೊಡ್ಡ ಸಕ್ಸಸ್ ಕಂಡಿದ್ದಾರೆ. ಇವರು ಕೂಡ ಸಿನಿಮಾಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಯಾರಿಗೂ ಕಡಿಮೆ ಇಲ್ಲ. ನಿಜ ಹೇಳಬೇಕೆಂದರೆ ಈ ಎಲ್ಲಾ ಸ್ಟಾರ್ ನಟರುಗಳಿಗಿಂತ ಒಂದು ಪಟ್ಟು ಹೆಚ್ಚು ಶ್ರೀಮಂತರು ಎನ್ನಬಹುದು. ಹೌದು, ಕನ್ನಡದ ಶ್ರೀಮಂತ ನಟರ ಪಟ್ಟಿಯಲ್ಲಿ ಗಣೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಬ್ಬ ನಿರೂಪಕರಾಗಿ ಗುರುತಿಸಿಕೊಂಡಿದ್ದ ಗಣೇಶ್, ಇದೀಗ ಕನ್ನಡ ಸ್ಟಾರ್ ನಟರುಗಳಲ್ಲಿ ಒಬ್ಬರು. ಇವರಿಗೂ ಕೂಡ ಕನ್ನಡದಲ್ಲಿ ಹೆಚ್ಚು ಬೇಡಿಕೆಯಿದ್ದು, ಶ್ರೀಮಂತ ನಟ ಎನಿಸಿದ್ದಾರೆ. ಇವಿಷ್ಟು ಕನ್ನಡದ ಶ್ರೀಮಂತ ನಟರ ಹೆಸರುಗಳು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.