Rekha and prabhu stroy : ತನ್ನ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದ ಎರಡನೇ ಗಂಡ , ಇದರಿಂದ ಕೋಪಗೊಂಡ ಮಾಡಿದ್ದೇನು ಗೊತ್ತಾ?
ದಾಂಪತ್ಯ ಜೀವನದಲ್ಲಿ ಸತಿ ಪತಿಯ ನಡುವೆ ಜಗಳ ಮನಸ್ತಾಪಗಳು ಸರ್ವೇ ಸಾಮಾನ್ಯ. ಆದರೆ ಈ ಮನಸ್ತಾಪ ಹಾಗೂ ಜಗಳಗಳು ವಿಚ್ಛೇಧನ ಹಂತಕ್ಕೆ ಬಂದು ತಲುಪುವುದು ಇದೆ. ಇಲ್ಲೊಬ್ಬ ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಚೆನ್ನಾಗಿ ಜಗಳವಾಡಿದ್ದಾಳೆ. ಈ ಯುವತಿಯು ಜಗಳವಾಡಲು ಕಾರಣವು ಇದೆ. ಆದರೆ ಕೊನೆಗೆ ಈ ರೇಖಾಳು ಮಾಡಿದ ಕೆಲಸ ನೋಡಿದರೆ ಅಚ್ಚರಿಯಾಗುತ್ತದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟಿಯ ರೇಖಾ ಎಂಬ ಮಹಿಳೆ 16 ವರ್ಷಗಳ ಹಿಂದೆ ವಿವಾಹವಾದಳು. ವಿವಾಹಿತ ರೇಖಾ ತನ್ನ ಪತಿಯೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡು ಇದ್ದಳು. ರೇಖಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ರೇಖಾ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತಿಯ ಮರಣದ ನಂತರ ರೇಖಾ ತನ್ನ ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು.
ರೇಖಾ ತನ್ನ ಹೆಣ್ಣು ಮಕ್ಕಳ ಜೊತೆಗೆ ತಿರುಚ್ಚಿ ಜಿಲ್ಲೆಯ ಮುಸಿರಿಗೆ ತೆರಳಿ, ಅಲ್ಲಿ ಬದುಕು ಶುರು ಮಾಡಿದಳು. ಹೀಗಿರುವಾಗ ರೇಖಾ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದಳು. ಆ ವೇಳೆ ರೇಖಾ ಅವರಿಗೆ ಅದೇ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಎಂಬ ಯುವಕನ ಪರಿಚಯವಾಗಿತ್ತು. ಒಂದೇ ಸ್ಥಳದಲ್ಲಿ ಕೆಲಸ ಮಾಡುವ ರೇಖಾ ಮತ್ತು ಪ್ರಭು ಪ್ರತಿದಿನ ಮಾತನಾಡಿಕೊಳ್ಳುತ್ತಿದ್ದರು.
ಗಂಡನ ದೀರ್ಘಾಯುಷ್ಯಕ್ಕಾಗಿ ಎಂಟನೇ ಮಾಡಿಯಿಂದ ಜಿಗಿದ ಹೆಂಡತಿ. ಆದರೆ ಸ್ವಲ್ಪ ದಿನಗಳ ನಂತರ ಬಯಲಾಗುತ್ತೆ ಸಾ ವಿನ ರಹಸ್ಯ ಮತ್ತು ಗಂಡನ ಅಸಲಿ ಮುಖ. ಯಾವ ಕ್ರೈಂ ಥ್ರಿಲ್ಲರ್ ಮೂವಿಗಿಂತಲೂ ಕಡಿಮೆ ಇಲ್ಲ ಈ ಸ್ಟೋರಿ!!!
ರಾಣೂರ ರೇಖಾ ಮತ್ತು ಪ್ರಭು ಇಬ್ಬರ ನಡುವೆ ಪ್ರೇಮ ಹುಟ್ಟಿಕೊಂಡಿತ್ತು. ರೇಖಾ ಅವರ ಹೆಣ್ಣುಮಕ್ಕಳು ಪ್ರಾಯಕ್ಕೆ ಬಂದಿದ್ದರು. ಆದರೆ ಈ ಪ್ರಭು ಕೂಡ ರೇಖಾಳ ಮನೆಗೆ ಬಂದು ಹೋಗತೊಡಗಿದನು. ಸ್ವಲ್ಪ ಸಮಯದ ನಂತರ, ರೇಖಾ ತನಗಿಂತ ವಯಸ್ಸಿನಲ್ಲಿ ಸಣ್ಣವನು ಆದ ಪ್ರಭುವನ್ನು ಎರಡನೇ ಮದುವೆಯಾಗಲು ನಿರ್ಧರಿಸಿದಳು. ಪ್ರಭು ರೇಖಾಳನ್ನು ಮದುವೆಯಾಗಲು ಒಪ್ಪಿದ ನಂತರ ಅವರು ಮದುವೆಯಾದರು.
ಆಕೆಯ ಎರಡನೇ ಪತಿ ಪ್ರಭು ಕೂಡ ರೇಖಾ ಮನೆಯಲ್ಲಿಯೇ ಇದ್ದ. ರೇಖಾ ತನ್ನ ಮೊದಲ ಗಂಡನ ಹೆಣ್ಣುಮಕ್ಕಳಿಗೆ ಪ್ರಭು ಲೈಂಗಿಕ ಕಿರು-ಕುಳ ನೀಡಿದ್ದಾನೆ. ಈ ವಿಷಯ ಹೊರಗೆ ಬಂದರೆ ನಿನ್ನನ್ನು ಮತ್ತು ನಿನ್ನ ತಾಯಿ ರೇಖಾಳನ್ನು ಸಾಯಿಸುತ್ತೇನೆ ಎಂದು ಪ್ರಭು ಇಬ್ಬರು ಹುಡುಗಿಯರಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಭ-ಯಗೊಂಡ ಹುಡುಗಿಯರು ತನ್ನ ತಾಯಿ ರೇಖಾಳಿಗೆ ಬಹಳ ದಿನ ಹೇಳಿರಲಿಲ್ಲ. ಕೆಲವು ತಿಂಗಳ ಹಿಂದೆ ಎರಡನೇ ಪತಿ ಪ್ರಭು ತನ್ನ ಹೆಣ್ಣುಮಕ್ಕಳೊಂದಿಗೆ ಚೆಲ್ಲಾಟವಾಡುತ್ತಿರುವುದು ಲೈಂಗಿಕ ಕಿರು-ಕುಳ ನೀಡುವ ವಿಷಯ ತಿಳಿದ ರೇಖಾ ಕೋಪಗೊಂಡಿದ್ದಳು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಗೆ ಕೆಲಸವಿದೆ ಎಂದು ರೇಖಾ ಪ್ರಭುಗೆ ತಿಳಿಸಿ ಆತನನ್ನು ಅಯ್ಯಂಪಾಳ್ಯಂ ಗ್ರಾಮದ ಬಳಿಯ ಕಾವೇರಿ ನದಿಯ ದಡಕ್ಕೆ ಕರೆದುಕೊಂಡು ಹೋಗಿದ್ದಳು. ತದನಂತರ ನೀವು ಹೆಣ್ಣು ಮಕ್ಕಳೊಂದಿಗೆ ಚೆಲ್ಲಾಟ ಆಡುತ್ತೀರಾ ಜಗಳವಾಡಿದ್ದಳು. ರೇಖಾ ತನ್ನ ಬ್ಯಾಗ್ ನಲ್ಲಿಟ್ಟಿದ್ದ ಮಚ್ಚನ್ನು ಹೊರತೆಗೆದು ಎರಡನೇ ಪತಿ ಪ್ರಭುಗೆ ಬೇಕಾದಂತೆ ಹ-ಲ್ಲೆ ಮಾಡಿದ್ದಳು. ನದಿಯ ದಡದಲ್ಲಿ ಗಂಡನ ಜೀವ ತೆಗೆದಿದ್ದಾಳೆ. ಈ ಶ-ವವನ್ನು ಕಾವೇರಿ ನದಿಯಲ್ಲಿ ಎಸೆದ ನಂತರ ರೇಖಾ ಮೌನವಾಗಿ ಅಲ್ಲಿಂದ ಬಂದಿದ್ದಳು.
ಆದರೆ ಕೆಲ ದಿನಗಳಿಂದ ನದಿಯಲ್ಲಿ ಕೊಳೆತು ನಾರುತ್ತಿದ್ದ ವ್ಯಕ್ತಿಯ ಮೃತದೇಹ ದಡ ಸೇರಿತ್ತು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪೊಲೀಸರು ಅಪರಿಚಿತ ಮೃ-ತದೇಹದ ಪ್ರಕರಣ ದಾಖಲಿಸಿದ್ದರು. ಕೆಲವು ತಿಂಗಳಿಂದ ಮಗ ಕಾಣದ ಹಿನ್ನೆಲೆಯಲ್ಲಿ ಪ್ರಭುವಿನ ತಂದೆ ಪೊಲೀಸ್ ಕೇಸ್ ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಳೆತ ಶವ ಪ್ರಭುರವರದ್ದು ಎಂದು ಗುರುತಿಸಿದ್ದರು.
ಆದರೆ ಪ್ರಭು ಹ-ತ್ಯೆಯಾದ ಒಂದು ವಾರದ ನಂತರ ರೇಖಾ ತನ್ನ ಮಕ್ಕಳೊಂದಿಗೆ ಆ ಏರಿಯಾದಿಂದ ಬೇರೆ ಕಡೆ ಹೋಗಿದ್ದಳು. ಬಹಳ ದಿನಗಳಿಂದ ರೇಖಾಳನ್ನು ಹುಡುಕುತ್ತಿದ್ದ ಪೊಲೀಸರಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ. ಪ್ರಭುವನ್ನು ತಾನೇ ಕೊಂದಿರುವುದಾಗಿ ರೇಖಾ ತಪ್ಪೊಪ್ಪಿಕೊಂಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.