ಸಂಸಾರದಲ್ಲಿ ವಿರಸ, ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಆದರೆ ಸರಿ ತಪ್ಪುಗಳನ್ನು ತಿದ್ದಿಕೊಂಡು ನಡೆಯಬೇಕಾದದ್ದು ಮನುಜನ ಧರ್ಮ. ಆದರೆ ಇತ್ತೀಚೆಗಿನ ದಿನಗಳಲ್ಲಿ ಮೋಸ, ಕೊ-ಲೆ, ಅ’ನೈತಿಕ ಸಂಬಂಧಗಳ ಪ್ರ’ಕರಣಗಳು ಬೆಳಕಿಗೆ ಬಂದಾಗ ಸಮಾಜದಲ್ಲಿನ ಜನರ ಮನಸ್ಥಿತಿಗಳು ಬದಲಾಗಿವೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಅಂದಹಾಗೆ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಮೊಹಮ್ಮದ್ ಹುಸೇನ್ ಅಲಿಯಾಸ್ ಮೊಹಮ್ಮದ್ (29) ಎಂಬ ಯುವಕ ಕೆಲ ವರ್ಷಗಳ ಹಿಂದೆ ರೆಜಿನಾ (26) ಎಂಬ ಯುವತಿಯನ್ನು ವಿವಾಹವಾಗಿದ್ದ. ಈ ಇಬ್ಬರೂ ಕೂಡ ಮನಸಾರೆ ಒಪ್ಪಿಕೊಂಡೇ ಮದುವೆ ಮಾಡಿಕೊಂಡಿದ್ದರು. ಹೀಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಆದರೆ ಆರು ವರ್ಷಗಳ ಹಿಂದೆ ಮೊಹಮ್ಮದ್ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್ ಕೋವಿಲ್ ಪಟ್ಟಣಕ್ಕೆ ಉದ್ಯೋಗಕ್ಕಾಗಿ ಬಂದಿದ್ದರು. ಹೀಗಾಗಿ ಮೊಹಮ್ಮದ್ ತನ್ನ ಪತ್ನಿ ರೆಜಿನಾ ಮತ್ತು ಮಕ್ಕಳೊಂದಿಗೆ ನಾಗರ ಕೋವಿಲ್ ತಲುಪಿ ಪುನ್ನೈ ನಗರದಲ್ಲಿ ಬಾಡಿಗೆ ಮನೆ ತೆಗೆದುಕೊಂಡು ವಾಸವಾಗಿದ್ದರು.
ಮೊಹಮ್ಮದ್ ಪರೋಟ ನಾಗರ ಕೋವಿಲ್‌ನ ಡಾಬಾದಲ್ಲಿ ಕೆಲಸ ಮಾಡುತ್ತಿದ್ದನು. ಮನೆಯಿಂದ ಬೆಳಿಗ್ಗೆ ಹೊರಡುವ ಮೊಹಮ್ಮದ್ ಮಧ್ಯರಾತ್ರಿಯ ನಂತರ ಮನೆಗೆ ಬರುಟ್ಟಿದ್ದನು. ಮೊಹಮ್ಮದ್ ರಾತ್ರಿ 2 ಗಂಟೆಯವರೆಗೆ ಡಾಬಾದಲ್ಲಿಯೇ ಇರುತ್ತಿದ್ದನು. ಪತಿ ಮೊಹಮ್ಮದ್ ಹೊರಗೆ ಹೋದ ನಂತರ ಅವರ ಪತ್ನಿ ರೆಜಿನಾ ಮಕ್ಕಳೊಂದಿಗೆ ಮನೆಯಲ್ಲಿಯೇ ಇರುತ್ತಿದ್ದಳು.
ಕೆಲ ದಿನಗಳಿಂದ ಮನೆಯಲ್ಲಿದ್ದ ರೆಜಿನಾ ಬದಲಾಗಿರುವುದು ಪತಿ ಮೊಹಮ್ಮದ್‌ಗೆ ಗೋಚರವಾಗಿದೆ. ರೆಜಿನಾಳನ್ನು ಆಕೆಯ ಪತಿ ಮೊಹಮ್ಮದ್ ಗೊತ್ತಿಲ್ಲದೇ ಇನ್ನೊಬ್ಬನ ಜೊತೆಗೆ ಚೆಲ್ಲಾಟ ಆಡಿದ್ದಾಳೆ. ನನ್ನ ಪತ್ನಿ ರೆಜಿನಾ ತನ್ನ ಬಾಯ್ ಫ್ರೆಂಡ್ ಅನ್ನು ಮನೆಗೆ ಕರೆದು ಖುಷಿ ಪಡುತ್ತಿದ್ದಳು ಮೊಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವಿಚಾರಕ್ಕಾಗಿ ಮೊಹಮ್ಮದ್ ರಾತ್ರಿ 3 ಗಂಟೆಗೆ ಮನೆಗೆ ತೆರಳಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಆ ಸಂದರ್ಭದಲ್ಲಿ ಆತ್ಮ-ಹತ್ಯೆ ಮಾಡಿಕೊಳ್ಳುವುದಾಗಿ ರೆಜಿನಾ ಕು’ತ್ತಿಗೆಗೆ ಟವೆಲ್ ಕಟ್ಟಿಕೊಂಡು ಪತಿ ಮೊಹಮ್ಮದ್ ಗೆ ಬೆ’ದರಿಕೆ ಹಾಕಿದ್ದಾಳೆ. ರೆಜಿನಾಳ ಬೆದರಿಕೆಯಿಂದ ಕೋಪಗೊಂಡ ಮೊಹಮ್ಮದ್ ವಾಸ್ತವವಾಗಿ ತನ್ನ ಹೆಂಡತಿಯನ್ನು ಕುತ್ತಿಗೆಗೆ ಟ’ವೆಲ್ ಸುತ್ತಿ ಆಕೆಯ ಕ-ಥೆ ಮುಗಿಸಿದ್ದಾನೆ.
ಈ ವೇಳೆಯಲ್ಲಿ ಎಚ್ಚರಗೊಂಡ ಮಕ್ಕಳೊಂದಿಗೆ ಮೊಹಮ್ಮದ್ ಆಟವಾಡಿದ್ದು, ಅಮ್ಮ ಯಾಕೆ ನಿದ್ದೆ ಮಾಡಿದೆ ಎಂದು ಮಕ್ಕಳು ಕೇಳಿದಾಗ ಮೊಹಮ್ಮದ್ ಅಮ್ಮನಿಗೆ ಜ್ವರ ಬಂದು ಮಲಗಿದೆ ಎಂದು ಹೇಳಿದ್ದಾರೆ. ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಪತ್ನಿಯ ಕಥೆ ಮುಗಿಸಿ ಕೊನೆಗೆ ನಾಟಕವಾಡಿದ್ದಾನೆ.
ರಾತ್ರಿ ಮಲಗಿದ್ದ ನನ್ನ ಹೆಂಡತಿ ರೆಜಿನಾ ಬೆಳಿಗ್ಗೆ ಏಳಲಿಲ್ಲ, ಅವಳಿಗೆ ಏನೋ ಆಗಿದೆ ಎಂದು ಮೊಹಮ್ಮದ್ ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಆಂಬ್ಯುಲೆನ್ಸ್‌ನಲ್ಲಿ ಪತ್ನಿ ರೆಜಿನಾಳನ್ನು ಆಸ್ಪತ್ರೆಗೆ ಕರೆ ತಂದರೆ ಅದಾಗಲೇ ಮೃ-ತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಮೊಹಮ್ಮದ್‌ನನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.