ಕುಡಿದು ಗಲಾಟೆ ಮಾಡಿ ಇದೀಗ ಧರ್ಮಸ್ಥಳಕ್ಕೆ ಹೋಗಿ ನಿಖಿಲ್ ಮಾಡಿದ ಕೆಲಸ ಏನು ನೋಡಿ!!

ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿಲ್ಲದವರು ಬೆರಳಿಣಿಕೆಯಷ್ಟು ಮಂದಿ ಎಂದರೆ ತಪ್ಪಾಗಲಾರದು. ಹೀಗಾಗಿ ಈ ಸೋಶಿಯಲ್ ಮೀಡಿಯಾವನ್ನು ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದಿನ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಸೋಶಿಯಲ್ ಮೀಡಿಯಾಗಳು ಅನೇಕ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ಕೂಡ ವೈರಲ್ ಆಗುತ್ತಿರುತ್ತದೆ. ಇದಕ್ಕೆ ಈಗಾಗಲೇ ಬಹುತೇಕರು ಸಾಕ್ಷಿಯಾಗಿದ್ದಾರೆ. ಅದೃಷ್ಟ ಯಾವಾಗ ಬೇಕಾದರೂ ಎಲ್ಲಿಯೂ ಕೂಡ ಬದಲಾಗಿ ಬಿಡಬಹುದು. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದೇ ಒಂದು ವಿಡಿಯೋದಿಂದ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು ಇದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ನಿಖಿಲ್ ಗೌಡ, ಮಧುಗೌಡ ಹಾಗೂ ನಿಶಾ ರವೀಂದ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?.

ರೀಲ್ಸ್ ಸ್ಟಾರ್ ನಿಖಿಲ್ (Reels Star Nikhil) ಅವರು ವಿಡಿಯೋ ಮೂಲಕ ಸಾಕಷ್ಟು ಸಂಖ್ಯೆ ಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿದ್ದು, ಇತ್ತೀಚೆಗಷ್ಟೇ ಆದರೆ ಇದೀಗ ಬೇಡದ ವಿಚಾರಗಳಿಂದ ಸುದ್ದಿಯಾಗಿದ್ದರು. ನಿಖಿಲ್ ರವರು ಕುಡಿದು ಹೀರೋ ರೇಂಜಿಗೆ ಗಲಾಟೆ ಮಾಡಿದ್ದು, ಈ ವಿಡಿಯೋವೊಂದು ಸದ್ಯಕ್ಕೆ ವೈರಲ್ (Viral) ಆಗಿತ್ತು. ಕೊನೆಗೆ ನಿಖಿಲ್ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದು, ನಿಖಿಲ್ ಪೊಲೀಸ್ ವಾಹನದಲ್ಲಿ ಕುಳಿತುಕೊಂಡು ಅಲ್ಲಿದ್ದವರಿಗೆ ಬಾಯಿಗೆ ಬಂದಂತೆ ಬೈದಿದ್ದನು. ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಅವರ ಹೊಸ ಅವತಾರದ ವಿಡಿಯೋವೊಂದು ಹರಿದಾಡಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಆದರೆ ಇದೀಗ ಮತ್ತೆ ನಿಖಿಲ್ ಗೌಡ ಸುದ್ದಿಯಾಗಿದ್ದಾರೆ.

ಇದೀಗ ನಿಖಿಲ್ ರವರು ಮಧು ಗೌಡ (Madhu Gowda) ಹಾಗೂ ನಿಶಾ ರವೀಂದ್ರ (Nisha Ravindra) ರವರ ಜೊತೆಗೆ ಧರ್ಮಸ್ಥಳ (Dharmastala) ಕ್ಕೆ ತೆರಳಿದ್ದಾರೆ. ಅಂದಹಾಗೆ, ಮಧುಗೌಡ ತನ್ನ ಮುದ್ದಾದ ಡಾನ್ಸ್ ಹಾಗೂ ಹಾವಭಾವದಿಂದಲೇ ಎಲ್ಲರ ಚಿತ್ತವನ್ನು ಸೆಳೆಯುವ ಬೆಡಗಿ. ಈಗಾಗಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವನ್ನು ಹೊಂದಿದ್ದು, ಈ ನಡುವೆ ಯೂಟ್ಯೂಬ್ (Youtube) ನಲ್ಲಿ ಕುಕ್ಕಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತ ನಿಶಾ ರವೀಂದ್ರ ಕೂಡ ಯಾವುದರಲ್ಲಿಯೂ ಕಡಿಮೆಯಿಲ್ಲ ಬಿಡಿ.

ಆದರೆ ಇದೀಗ ತನ್ನ ಸಹೋದರ ನಿಖಿಲ್ ರವರ ಜೊತೆಗೆ ಮಧು ಗೌಡ ಹಾಗೂ ನಿಶಾ ರವೀಂದ್ರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆದ ನಂತರದಲ್ಲಿ ದೇವಾಲಯದ ಮುಂದೆ ತೆಗೆದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಇಪ್ಪತ್ತೆರಡು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ. ಈ ಪೋಸ್ಟ್ ಗೆ ಫ್ಯಾನ್ಸ್ ಗಳು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *