ಪ್ರೀತಿಸಿದ ಯುವಕನಿಗಾಗಿ 2,499 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಬಿಟ್ಟು ಬಂದ ಈ ಯುವತಿಯ ಲವ್ ಸ್ಟೋರಿ ಕೇಳಿದ್ರೆ ಶಾ-ಕ್ ಆಗ್ತೀರಾ!!

ಪ್ರೀತಿ (Love) ಎನ್ನುವುದು ಕಣ್ಣಿಗೆ ಕಾಣುವುದಿಲ್ಲ, ಎರಡು ಮನಸ್ಸುಗಳ ನಡುವಿನ ಸುಂದರವಾದ ಭಾವ. ಈ ಪ್ರೀತಿ ಎನ್ನುವ ಎರಡು ಅಕ್ಷರ ಒಬ್ಬ ವ್ಯಕ್ತಿಗೆ ಪೂರಕವು ಆಗಬಹುದು, ಮಾರಕವು ಆಗಬಹುದು. ಪ್ರೀತಿಗೆ ಯಾವುದೇ ಆಸ್ತಿ, ಅಂತಸ್ತು, ಜಾತಿಯ ಹಂಗಿಲ್ಲ. ಎರಡು ಮನಸ್ಸುಗಳು ಒಪ್ಪಿಕೊಂಡರೆ ಸಾಕು. ಈಗಾಗಲೇ ಪ್ರೀತಿಗಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟವರು ಇದ್ದಾರೆ.

ಆದರೆ ಇಲ್ಲೊಬ್ಬಳು ಯುವತಿಯು ತಾನು ಪ್ರೀತಿಸಿದವನಿಗಾಗಿ ಕೋಟಿಗಟ್ಟಲೇ ಮೌಲ್ಯದ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ. ಹೌದು, ಪ್ರೀತಿ ಏನನ್ನು ಬೇಕಾದರೂ ಮಾಡಿಸಬಹುದು ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆಯಿಲ್ಲ ಎನ್ನಬಹುದು ಮಲೇಷ್ಯಾದ ಶ್ರೀಮಂತ ಯುವತಿ ತಾನು ಪ್ರೀತಿಸಿದ ಹುಡುಗನಿಗಾಗಿ ಕೋಟ್ಯಾಂತರ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ ಎಂದರೆ ನಿಜಕ್ಕೂ ನಂಬಲೇಬೇಕು.

ಐಷಾರಾಮಿ ಜೀವನವನ್ನು ಸಂಭ್ರಮಿಸುತ್ತಿದ್ದ ಈಕೆಯು ಬರೋಬ್ಬರಿ 2,499 ಕೋಟಿ ರೂ. ಆಸ್ತಿಯನ್ನು ತ್ಯಜಿಸಿ ಬಂದಿದ್ದಾಳೆ. ಈಕೆಯ ಹೆಸರು ಏಂಜಲೀನ್ ಫ್ರಾನ್ಸಿಸ್ (Angeline Francis) . ಪ್ರೀತಿಗಿಂತ ಆಸ್ತಿ ದೊಡ್ಡದಲ್ಲ ಎಂದು ನಿರೂಪಿಸಿದ ಈಕೆಯು ಸಾಭೀತು ಪಡಿಸಿದ್ದಾಳೆ. ಏಂಜಲೀನ್ ಫ್ರಾನ್ಸಿಸ್ ಳು ಉದ್ಯಮಿ ಖೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪಾಲಿನ್ ಚಾಯ್ (Khoo Kay Peng and former Miss Malaysia Pauline Chai) ಅವರ ಮುದ್ದಿನ ಮಗಳು.

ಆಕ್ಸ್‌ಫರ್ಡ್‌ (Oxford) ನಲ್ಲಿ ತಮ್ಮ ವಿಶ್ವವಿದ್ಯಾನಿಲಯ ಓದುತ್ತಿದ್ದ ವೇಳೆಯಲ್ಲಿ ಜೆಡಿಯಾ ಫ್ರಾನ್ಸಿಸ್‌ (Jediah Francis) ನ್ನು ಭೇಟಿಯಾಗಿದ್ದಳು. ಈ ವೇಳೆಯಲ್ಲಿ ಇಬ್ಬರ ಪರಿಚಯವು ಸ್ನೇಹವಾಗಿ ಮತ್ತೆ ಪ್ರೀತಿಗೆ ಚಿಗುರಿತು. ಏಂಜೆಲಿನ್ ಫ್ರಾನ್ಸಿಸ್ ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ತಿಳಿಸಿದ್ದಾಳೆ. ಆದರೆ ಈಕೆ ಪ್ರೀತಿಸುತ್ತಿದ್ದ ಹುಡುಗ ಆರ್ಥಿಕವಾಗಿ ಸಶಕ್ತನಾಗಿರಲಿಲ್ಲ.

ಅಷ್ಟೇ ಅಲ್ಲದೇ ಏಂಜೆಲಿನ್ ಫ್ರಾನ್ಸಿಸ್ ಳ ತಂದೆ ಕೋರಸ್ ಹೋಟೆಲ್‌ (Chorus Hotel) ನ ನಿರ್ದೇಶಕರಾಗಿದ್ದು, ಮಲೇಷ್ಯಾದ 44 ನೇ ಶ್ರೀಮಂತ ವ್ಯಕ್ತಿಯಾಗಿದ್ದ ಕಾರಣ ತಮ್ಮ ಕುಟುಂಬಕ್ಕೆ ಯೋಗ್ಯರಲ್ಲದ ಕಾರಣ ಮಗಳು ಪ್ರೀತಿಸಿದ ಹುಡುಗನನ್ನು ನಿ-ರಾಕರಿಸಿಬಿಟ್ಟರು. ಈ ವೇಳೆಯಲ್ಲಿ ಮಗಳಿಗೆ ಎರಡು ಆಯ್ಕೆಯನ್ನು ಮುಂದೆ ಇಟ್ಟರು. ಏಂಜಲೀನ್ ತಂದೆಯು ಪ್ರಿಯಕರ ಹಾಗೂ ಆಸ್ತಿಯ ಆಯ್ಕೆ ಮುಂದೆ ಇಟ್ಟು ಪ್ರೀತಿ ಮತ್ತು ಸಂಪತ್ತು ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಟ್ಟರು.

ಈ ವೇಳೆಯಲ್ಲಿ ಏಂಜೆಲಿನ್ ತನ್ನ ಪ್ರೀತಿಯನ್ನು ಆಯ್ಕೆ ಮಾಡಿಕೊಂಡು ತನ್ನ ಪ್ರೀತಿಗಾಗಿ ಅಂತಸ್ತನ್ನು ತ್ಯಜಿಸಿಬಿಟ್ಟಳು. ಕೊನೆಗೆ ಈ ಮಲೇಷಿಯಾದ ಉತ್ತರಾಧಿಕಾರಿ ಏಂಜೆಲಿನ್ ಫ್ರಾನ್ಸಿಸ್ 2008ರಲ್ಲಿ ಜೆಡಿಯಾ ಫ್ರಾನ್ಸಿಸ್ ನನ್ನು ಮದುವೆಯಾಗುವ ಮೂಲಕ ಹಣಕ್ಕಿಂತ ಪ್ರೀತಿಯೇ ದೊಡ್ಡದು ಎಂದು ಸಾಭೀತು ಪಡಿಸಿಬಿಟ್ಟಳು.

Leave a Reply

Your email address will not be published. Required fields are marked *