IPL 2023 : ಮಿನಿ ಹರಾಜು ಅಂತ್ಯಗೊಂಡಿದ್ದು, ಖರೀದಿಸಲಾದ ಒಟ್ಟು ಆಟಗಾರರ ಸಂಖ್ಯೆ 65 ಎನ್ನಲಾಗುತ್ತಿದೆ. 16ನೇ ಸೀಸನ್ಗಾಗಿ ಆರ್‌ಸಿಬಿ ತಂಡದ ಆಟಗಾರರ ಆಯ್ಕೆಯು ನಡೆದಿದ್ದು, RCB ಪ್ಲೇಯಿಂಗ್ 11 ಹೇಗಿದೆ ಎಂಬುದನ್ನು ತಿಳಿದುಕೊಂಡ ಅನೇಕ ಕ್ರಿಕೆಟ್(Cricket) ಪ್ರಿಯರು ಸಂತಸಗೊಂಡಿದ್ದಾರಂತೆ.
ಎಲ್ಲಾ ತಂಡಗಳು ಮುಂಬರುವ ಸೀಸನ್ ಗಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ತಮ್ಮ ಟೀಮನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವಲ್ಲಿ ಪ್ರಯತ್ನಿಸಿವೆ ಎನ್ನಬಹುದು. ಆರ್‌ಸಿಬಿ ತಂಡವು ಮುಂಬರುವ ಸೀಸನ್ ಗಾಗಿ ಸುಮಾರು 25 ಆಟಗಾರರ ಶಕ್ತಿಯುತ ಟೀಮನ್ನು ತನ್ನದಾಗಿಸಿಕೊಂಡಿದೆ. ಹರಾಜಿಗೂ ಮುನ್ನವೇ ತಂಡವು 5 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಇದೀಗ ತಂಡವು ಹರಾಜಿನಲ್ಲಿ ಸುಮಾರು ಏಳು ಆಟಗಾರರನ್ನು ಖರೀದಿಸಿದೆ.

ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂಗಳೂರು ತಂಡವು ದೇಶಿ ಆಟಗಾರರಿಗೆ ಹೆಚ್ಚಿನ ಒತ್ತು ನೀಡಿದ್ದು, ಉತ್ತಮ ಆಟಗಾರರನ್ನು ತನ್ನದಾಗಿಸಿಕೊಂಡಿದೆ. ತಂಡದಲ್ಲಿ ಎಂಟು ಜನ ಬೌಲರ್ಸ್ ಹಾಗೂ ಹತ್ತು ಜನ ಆಲ್ ರೌಂಡರ್ಸ್ ಗಳಿದ್ದು, ತಂಡವು ಬಲಿಷ್ಠವಾಗಿದೆ ಎನ್ನಬಹುದು.
ಐಪಿಎಲ್ 2023ರ ಆರ್‌ಸಿಬಿ ಪ್ಲೇಯಿಂಗ್ 11 ನ ಸಂಯೋಜನೆ :
ಬ್ಯಾಟ್ಸಮ್ಯಾನ್ಗಳು (Batsman) : ಫಾಫ್ ಡು ಪ್ಲೆಸಿಸ್, ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ ಮತ್ತು ವಿಲ್ ಜಾಕ್ಸ್
ವಿಕೆಟ್ ಕೀಪರ್ ಗಳು (wicket keepers) : ಅನುಜ್ ರಾವತ್, ದಿನೇಶ್ ಕಾರ್ತಿಕ್.
ಆಲ್ ರೌಂಡರ್ ಗಳು (All rounders) : ವನಿಂದು ಹಸರಂಗಾ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ. ಬೌಲರ್ ಗಳು (Bowlers) : ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ ..
ಇದೀಗ ಕ್ರಿಕೆಟ್ ಪ್ರಿಯರು 2023ರ ಐಪಿಎಲ್ ಗಾಗಿ ಕಾದು ಕುಳಿತಿದ್ದಾರಂತೆ. ಈ ಬಾರಿಯ ಐಪಿಎಲ್ ನಲ್ಲಿ ಆರ್‌ಸಿಬಿ ತಂಡವು ಗೆಲ್ಲುವಲ್ಲಿ ಯಶಸ್ವಿಯಾಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ. ಆರ್‌ಸಿಬಿ ತಂಡದಲ್ಲಿ ಇದೀಗ ಅತಿ ಹೆಚ್ಚು ಆಲ್ ರೌಂಡರ್ ಪ್ಲೇಯರ್ ಗಳು ಇರುವುದರಿಂದ ಆರ್ಸಿಬಿ ಅಭಿಮಾನಿಗಳಿಗೆ ಈ ಸಲ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ಬಂದಿದೆ.