ಐಪಿಎಲ್ ಫೈನಲ್ ನಲ್ಲಿ ಮಿಂಚಿದ ರವೀಂದ್ರ ಜಡೇಜಾರವರ ಪತ್ನಿ ರಿವಾಬಾ ಜಡೇಜಾ ಯಾರು ಗೊತ್ತಾ? ಇವರು ನಿಜಕ್ಕೂ ಸಾಮಾನ್ಯ ಮಹಿಳೆ ಅಲ್ಲ!!

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾರವರ ಪತ್ನಿ ರಿವಾಬಾ ಜಡೇಜಾರವರ ಬಗ್ಗೆ ನಿಮಗೆಷ್ಟು ಗೊತ್ತು?ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಮತ್ತು ಐಪಿಎಲ್‌ (IPL) ನಲ್ಲಿ ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ (CSK All Rounder Ravindra Jadeja) ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತನ್ನದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿರುವ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ (Rivaabaa Jadeja) ಅವರ ಪರಿಚಯ ಎಲ್ಲರಿಗೂ ಇದೆ. ಆಗಾಗ ಸುದ್ದಿಯಲ್ಲಿರುವ ರಿವಾಬಾ ಜಡೇಜಾರವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಹೌದು, ಐಪಿಎಲ್​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ (Chennai Super Kings) ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ತಂಡದ ಗೆಲುವಿಗೆ ಕಾರಣವಾಗಿರುವ ರವೀಂದ್ರ ಜಡೇಜಾಗೆ ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಅದಲ್ಲದೇ, ಈ .ಪಂದ್ಯವನ್ನು ಗೆಲ್ಲಿಸಿದ ಸಂತಸದಲ್ಲಿ ಜಡೇಜಾ ಅವರ ಪತ್ನಿ ರಿವಾಬಾ ರವರು ಕಣ್ಣೀರು ಸುರಿಸಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ.

ಇತ್ತೀಚೆಗಷ್ಟೇ ಗುಜರಾತ್​ ಚುನಾವಣೆ (Gujarath Election) ಯಲ್ಲಿ ಸ್ಪರ್ಧಿಸಿ ಗೆದ್ದು ಬಿಜೆಪಿ ಶಾಸಕಿಯಾಗಿದ್ದಾರೆ. ಗುಜರಾತ್‌ನ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳ ಹಿಂದೆ ದಂಪತಿಗಳು ಪ್ರಧಾನಿ ನಿವಾಸಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದರು. ಆ ಬಳಿಕ ರವೀಂದ್ರ ಜಡೇಜಾರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಸರ್ ಅವರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ತಂದಿದೆ. ನಮ್ಮ ತಾಯ್ನಾಡಿಗಾಗಿ ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದೀರಿ. ನೀವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಎಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ’ ಎಂದು ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇತ್ತ ರಿವಾಬಾ ಜಡೇಜಾರವರು, ‘ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದು ಎಂದರೆ ಅನಂತ ಸಾಮರ್ಥ್ಯವನ್ನು ಭೇಟಿಯಾದಂತೆ ಮತ್ತು ಅನಂತ ಸಾಧ್ಯತೆಗಳನ್ನು ಸಾಧ್ಯವಾಗಿಸಲು ನಿರ್ದೇಶನ ಮತ್ತು ಶಕ್ತಿಯನ್ನು ಪಡೆಯುವುದು. ನಿಮ್ಮ ಮಾರ್ಗದರ್ಶನ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಭೇಟಿಗೆ ಸಮಯ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದರು.

ಸದಾ ಸುದ್ದಿಯಲ್ಲಿರುವ ರವೀಂದ್ರ ಜಡೇಜಾರವರ ಪತ್ನಿ ರಿವಾಬಾ ಬಗ್ಗೆ ಕುತೂಹಲವಿರುತ್ತದೆ. ಹೌದು, ರಿವಾಬಾ ಮತ್ತು ರವೀಂದ್ರ ಜಡೇಜಾ ತಮ್ಮ ಪರಸ್ಪರ ಸ್ನೇಹಿತರ ಮೂಲಕ ಪರಸ್ಪರ ಭೇಟಿಯಾದರು. ಜಡೇಜಾ ಅವರ ಸಹೋದರಿ ನೈನಾ ರಿವಾಬಾ ಅವರ ಸ್ನೇಹಿತರಾಗಿದ್ದರು. ಈ ಪರಿಚಯವು ಜಡೇಜಾ ಮತ್ತು ರಿವಾಬಾರವರ ನಡುವೆ ಉತ್ತಮ ಸ್ನೇಹ ಸಂಬಂಧವನ್ನು ಬೆಸೆಯಿತು. ಈ ಸ್ನೇಹವು ಪ್ರೀತಿಗೆ ತಿರುಗಿ ಜಡೇಜಾ ಮತ್ತು ರಿವಾಬಾರವರು 2016 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜಡೇಜಾ ದಂಪತಿಗಳಿಗೆ ಹೆಣ್ಣು ಮಗುವಿದ್ದು, ಆ ಮಗುವಿಗೆ ನಿಧ್ಯಾನಾ (Nidhyaana) ಎಂದು ಹೆಸರು ಇಡಲಾಗಿದೆ.

ಅದಲ್ಲದೆ, ರಿವಾಬಾ ಅವರ ಹಿನ್ನೆಲೆಯನ್ನು ಗಮನಿಸುವುದಾದರೆ, 1990 ರಲ್ಲಿ ಹರ್ದೇವ್ ಸಿಂಗ್ ಸೋಲಂಕಿ ( Hardev Singh Solanki) ಮತ್ತು ಪ್ರಫುಲ್ಲಬಾ ಸೋಲಂಕಿ (Prafullaba Solanki) ದಂಪತಿಗೆ ಜನಿಸಿದರು. ರಿವಾಬಾ ಅವರ ತಂದೆ ಉದ್ಯಮಿಯಾಗಿದ್ದು, ತಾಯಿ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರು. ರಿವಾಬಾ ರಾಜ್‌ಕೋಟ್‌ನ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ (Institute of Technology And Science) ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ (Mechanical engineering) ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಇದೀಗ ಜಡೇಜಾರವರನ್ನು ಪ್ರೀತಿಸಿ ಮದುವೆಯಾಗಿದ್ದು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

Ravindra

Leave a Reply

Your email address will not be published. Required fields are marked *