ಭಾನುವಾರದಂದು ರವಿ ಪುಷ್ಯ ಯೋಗ, ಈ ರಾಶಿಯವರಿಗೆ ಅದೃಷ್ಟವೇ ಅದೃಷ್ಟ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಕೆಲವರು ಈ ಜ್ಯೋತಿಷ್ಯ ಶಾಸ್ತ್ರವನ್ನು ನಂಬುತ್ತಾರೆ. ಇನ್ನು ಕೆಲವರು ಅಷ್ಟಾಗಿ ನಂಬುವುದಿಲ್ಲ. ಆದರೆ ಜೀವನದ ಏರಿಳಿತಗಳಿಗೆ ರಾಶಿಚಕ್ರದಲ್ಲಿ ಆಗುವ ಬದಲಾವಣೆಗಳು ಕಾರಣವಾಗುತ್ತದೆ. ಅದರ ಜೊತೆಗೆ ನಕ್ಷತ್ರಗಳು ಕೆಲವು ರಾಶಿಗಳಿಗೆ ಶುಭ ಫಲವನ್ನು ತಂದುಕೊಡುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ 27 ನಕ್ಷತ್ರಪುಂಜಗಳಲ್ಲಿ ಪುಷ್ಯ ನಕ್ಷತ್ರ (Pushya Nakstra) ವನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಪುಷ್ಯ ನಕ್ಷತ್ರವು ಭಾನುವಾರದಂದು ಬಂದರೆ ಅದನ್ನು ರವಿ ಪುಷ್ಯ ನಕ್ಷತ್ರ ಎನ್ನಲಾಗುತ್ತದೆ.

ಇದೇ ತಿಂಗಳ ಸೆಪ್ಟೆಂಬರ್ 10 ರಂದು ಪುಷ್ಯ ನಕ್ಷತ್ರವು ಭಾನುವಾರ (Sunday) ಬರಲಿದ್ದು, ಹೀಗಾಗಿ ಈ ದಿನವು ಅನೇಕ ರಾಶಿಗಳಿಗೆ ಮಂಗಳಕರವಾಗಿದೆ. ಈ ದಿನದಂದು ಪೂಜೆ ಮಾಡುವುದರಿಂದ ವಿಷ್ಣು (Vishnu) ಮತ್ತು ತಾಯಿ ಲಕ್ಷ್ಮಿ ದೇವಿ (Lakshmi Devi) ಯ ಅನುಗ್ರಹಕ್ಕೆ ಪಾತ್ರರಾಗಬಹುದು. ಅದಲ್ಲದೇ ಈ ರವಿ ಪುಷ್ಯ ಯೋಗವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಹಾಗಾದರೆ ಆ ರಾಶಿಗಳ ಕುರಿತಾಗಿ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮಿಥುನ ರಾಶಿ: ರವಿ ಪುಷ್ಯ ನಕ್ಷತ್ರವು ಮಿಥುನ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ ಆದಾಯವನ್ನು ಪಡೆಯಲಿದ್ದಾರೆ. ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರವು ಆದಾಯದ ಮೂಲವನ್ನು ಹೆಚ್ಚಿಸಲಿದೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯು ಯಶಸ್ಸನ್ನು ಕಾಣುತ್ತಾರೆ.

ಸಿಂಹ ರಾಶಿ: ರವಿ ಪುಷ್ಯ ನಕ್ಷತ್ರದ ದಿನದಂದು ಸಿಂಹ ರಾಶಿಯವರಿಗೆ ತುಂಬಾ ಅದೃಷ್ಟಕರವಾಗಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಆರಂಭವಾಗಿ ಪೂರ್ಣಗೊಳ್ಳಲಿದೆ. ಹೂಡಿಕೆ ಮಾಡಬೇಕು ಎನ್ನುವವರಿಗೆ ಇದು ಸೂಕ್ತವಾದ ಕಾಲ ಎನ್ನಬಹುದು. ಅದಲ್ಲದೇ ಆಸ್ತಿ ಹಾಗೂ ವಾಹನ ಖರೀದಿ ಮಾಡಬೇಕು ಎನ್ನುವವರಿಗೆ ಒಳ್ಳೆಯ ದಿನವಾಗಿದೆ.

ತುಲಾ ರಾಶಿ : ರವಿ ಪುಷ್ಯ ನಕ್ಷತ್ರವು ತುಲಾ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತದೆ. ಏಕಾಏಕಿ ಈ ರಾಶಿಯವರಿಗೆ ಹಣವು ಹರಿದು ಬರಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯನ್ನು ತರುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳು ಪಡೆದುಕೊಂಡು ಗೌರವವು ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *