ಬದುಕಿನಲ್ಲಿ ನಾವು ಅಂದುಕೊಂಡಂತೆ ಏನು ನಡೆಯದು, ಹೀಗಾಗಿ ಈ ಬದುಕಿನಲ್ಲಿ ಏನು ಬರುತ್ತದೆಯೋ ಅದನ್ನು ಸ್ವೀಕರಿಸುವ ಜಾಣ್ಮೆ ನಮ್ಮಲ್ಲಿರಬೇಕು. ಬದುಕಿನಲ್ಲಿ ಕೆಲವೊಂದು ಆಯ್ಕೆಗಳು ಬದುಕಿನ ದಿಕ್ಕನ್ನೆ ಬದಲಾಯಿಸುತ್ತದೆ. ಹೀಗಾಗಿ ಬದುಕಿನಲ್ಲಿ ಕೆಲವೊಂದು ನಿರ್ಧಾರ ಹಾಗೂ ಆಯ್ಕೆಗಳನ್ನು ಮಾಡುವಾಗ ಎಚ್ಚರಿಕೆ ವಹಿಸಬೇಕು. ರವಿಗೌಡ (35) ಕರ್ನಾಟಕದ ಮಂಡ್ಯ ಜಿಲ್ಲೆಯ ಕೆಂಟಗೋಸಹಳ್ಳಿ ಗ್ರಾಮದವರು.
ರವಿಗೌಡನು ಬೆಂಗಳೂರಿನ ಯೋಗಿತಾ (27) 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಈ ಸುಂದರ ಸಂಸಾರದಲ್ಲಿ ಬಾಂಬ್ ಸಿಡಿದಂತೆ ಘಟನೆಯೊಂದು ನಡೆದಿತ್ತು. ರವಿಗೌಡಗೆ ಸುಂದರ ಪತ್ನಿ ಹಾಗೂ ಮಕ್ಕಳಿದ್ದರೂ ಕೂಡ, ಅದೇ ಗ್ರಾಮದ ಮತ್ತೊಬ್ಬ ಹುಡುಗಿಯ ಸಹವಾಸಕ್ಕೆ ಬಿದ್ದಿದ್ದನು.
ಒಂದು ದಿನ ಯೋಗಿತಾ ತನ್ನ ಗಂಡನ ಕಳ್ಳಾಟವನ್ನು ಕಣ್ಣಾರೆ ನೋಡಿದಳು. ಇದರಿಂದ ಕೋಪಗೊಂಡ ಯೋಗಿತಾ ತನ್ನ ಪತಿ ರವಿಗೌಡ ಜೊತೆ ಜಗಳ ಮಾಡಿಕೊಂಡು ಅತ್ತೆ ಮನೆಗೆ ಹೋಗಿದ್ದಳು. ಆ ವೇಳೆ ಮನೆಯಲ್ಲಿದ್ದ ಹಿರಿಯರೆಲ್ಲ ಸೇರಿ ಗ್ರಾಮ ಪಂಚಾಯ್ತಿ ನಡೆಸಿ ರವಿಗೌಡನಿಗೆ ಎ-ಚ್ಚರಿಕೆ ನೀಡಿ ರಾಜಿ ಮಾಡಿ ಯೋಗಿತಾಳನ್ನು ಗಂಡನ ಜೊತೆಗೆ ಬಾಳುವಂತೆ ಕಳುಹಿಸಿದ್ದರು.
ತದನಂತರವು ರವಿಗೌಡ ತನ್ನ ಗೆಳತಿಯ ಜೊತೆ ಡೇಟಿಂಗ್ ಮಾಡುವುದನ್ನು ನಿಲ್ಲಿಸಿರಲಿಲ್ಲ. ಇದೇ ವಿಚಾರವಾಗಿ ಗಂಡ ಹೆಂಡಿರ ನಡುವೆ ಪ್ರತಿನಿತ್ಯ ಜ-ಗಳ ನಡೆಯುತ್ತಿತ್ತು. ಹೀಗಿರುವಾಗ ಒಂದು ದಿನ ರಾತ್ರಿ ರವಿಗೌಡ ಅವರು ತಮ್ಮ ಇಬ್ಬರು ಮಕ್ಕಳಿಗೆ ಪಾನಿಪುರಿ ಖರೀದಿಸಿದ್ದರು. ಅದನ್ನು ತಿನ್ನಬೇಡಿ ಎಂದು ಯೋಗಿತಾ ಮಕ್ಕಳಿಗೆ ಹೇಳಿದ್ದು, ಇದರಿಂದ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿತ್ತು.
ಕೊನೆಗೆ ರವಿಗೌಡ ಯೋಗಿತಾಳ ತಲೆಗೂದಲು ಹಿಡಿದು ಎಳೆದೊಯ್ದಿದ್ದನು. ಅಷ್ಟೇ ಅಲ್ಲದೇ ವಿದ್ಯುತ್ ತಂತಿಯಿಂದ ಯೋಗಿತಾ ಕುತ್ತಿಗೆ ಬಿ-ಗಿದು ಕೊ-ಲೆ ಮಾಡಿದ್ದನು. ಕೊಠಡಿಯಿಂದ ಹೊರ ಬಂದ ರವಿಗೌಡ ಅಲ್ಲಿಂದ ಪರಾರಿಯಾಗಿದ್ದನು. ಕೊನೆಗೆ ರವಿಯ ಹಿರಿಯ ಮಗಳು ಎದುರು ಮನೆಯವರಿಗೆ ವಿಷಯ ತಿಳಿಸಿದ್ದು, ಕೂಡಲೇ ಯೋಗಿತಾ ಮನೆಗೆ ಕರೆ ಮಾಡಿದ್ದರು.
ದೂರಿನ ಮೇರೆಗೆ ಅರಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಗೆ ಮೋ-ಸ ಮಾಡಿ ಮುಂದೆಯೇ ಪತ್ನಿಯನ್ನು ಎಳೆದೊಯ್ದು ಕೊಲೆ-ಗೈದ ಪತಿಯ ಕೃ-ತ್ಯ ಈ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆದರೆ ಇಬ್ಬರೂ ಮಕ್ಕಳು ಹೆತ್ತತಾಯಿಯನ್ನು ಕಳೆದುಕೊಂಡು ಅನಾಥರಾಗಿರುವುದು ನಿಜಕ್ಕೂ ವಿಪರ್ಯಾಸ.
