ಕೆಜಿಎಫ್ ಸಿನಿಮಾದ ಬಳಿಕ ಸಿಕ್ಕಾಪಟ್ಟೆ ಬೇಡಿಕೆಯನ್ನು ಹೊಂದಿರುವ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು. ಕೆಜಿಎಫ್ 2 ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ರಮಿಕಾ ಸೇನ್ ಪಾತ್ರ ಕೂಡ ಒಂದಾಗಿತ್ತು. ರಮಿಕಾ ಸೇನ್ ಪಾತ್ರದಲ್ಲಿ ನಟಿ ರವೀನಾ ಟಂಡನ್ ಕಾಣಿಸಿಕೊಂಡಿದ್ದರು. ಕೆಜಿಎಫ್ 2 ಸಿನಿಮಾದ ಬಳಿಕ ರವೀನಾ ಟಂಡನ್ ಅವರ ಬೇಡಿಕೆ ಕೂಡ ಹೆಚ್ಚಾಗಿದೆ.
ಅಂದಹಾಗೆ, ಒಂಭತ್ತರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ ನಟಿ ಈ ರವೀನಾ ಟಂಡನ್. ಸಲ್ಮಾನ್ ಖಾನ್ ಅವರ ಜೊತೆ 1991ರಲ್ಲಿ ಪತ್ತರ್ ಕೇ ಫೂಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ತದನಂತರದ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ನಾಯಕ ನಟರ ಜೊತೆಗೆ ನಟಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಅವರ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ರವೀನಾ ಟಂಡನ್ ಸಿಕ್ಕಾಪಟ್ಟೆ ಫೇಮಸ್ ಆದರು. ನಟಿ ರವೀನಾ ಟಂಡನ್ ಅವರು ಸಿನಿಮಾರಂಗದಲ್ಲಿ ನಡೆದ ಅವಮಾನಗಳು ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಮಹಿಳೆಯರಿಂದಲೇ ತಮಗೆ ನಡೆದ ಅವಮಾನಗಳ ಕುರಿತು ನಟಿ ಬಾಯಿ ಬಿಟ್ಟಿದ್ದು, “ನಾನು ಸ್ವಿಮ್ ಸೂಟ್ ಧರಿಸಿಲ್ಲ, ಯಾವುದೇ ಕಿಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿಲ್ಲ ಇದರಿಂದ ನಾನು ಚಿತ್ರರಂಗದಲ್ಲಿ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದೆ. ಇನ್ನು ಆಗಿನ ಕೆಲವು ಮ್ಯಾಗಜೀನ್ ಅವರಿಗೂ ಸಹ ನನ್ನ ಮೇಲೆ ಕಣ್ಣಿತ್ತು.
ತಮ್ಮನ್ನು ಸ್ತೀವಾಧಿಗಳು ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯರೇ. ಒಬ್ಬ ಮಹಿಳೆಯ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದರು. ನನ್ನ ಬಗ್ಗೆ ಇಲ್ಲ ಸಲ್ಲದನ್ನು ಬರೆಯುತ್ತಿದ್ದರು. ನಾನು ಸಿನಿಮಾರಂಗಕ್ಕೆ ಬಂದಾಗ ನನಗೆ 16 ವರ್ಷ ಆಗ ನನ್ನ ತೊಡೆಗಳು ಕೊಂಚ ದಪ್ಪ ಇದ್ದವು. ಇನ್ನು ಈ ತಮ್ಮನ್ನು ಸ್ಟೀವಾಧಿಗಳು ಎಂದು ಕರೆಸಿಕೊಳ್ಳುವ ಇವರು, ನನ್ನ ತೊಡೆಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು.
ನನಗೆ ತೊಡೆಗಳ ರಾಣಿ ಎಂದು ಸಹ ಹೆಸರಿಟ್ಟಿದ್ದರು. ಈ ಬಗ್ಗೆ ನಾನು ಪ್ರಶ್ನೆ ಮಾಡಿದಾಗ ಅದಕ್ಕೆ ಕ್ಷಮೆ ಕೇಳಿ, ಈ ಬಗ್ಗೆ ಸಣ್ಣದಾಗಿ ಯಾವುದಾದರೂ ಒಂದು ಪೇಜ್ ನ ಮೂಲೆಯಲ್ಲಿ ಬರೆದಿರುತ್ತಿದ್ದರು. ಇನ್ನು ಅಷ್ಟರಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ವಿಷಯಗಳು ಹರಿದಾಡಿರುತ್ತಿತ್ತು.
ಇಂದಿಗೂ ಇವರು ತಮ್ಮನ್ನು ಸ್ತೀವಾಧಿಗಳೂ ಎಂದೇ ಕರೆಸಿಕೊಳ್ಳುತ್ತಾರೆ. ಆದರೆ ಇವರು ಅನ್ಯಾಯ ಮಾಡುವುದು ಮೊದಲು ಮಹಿಳೆಯರಿಗೆ, ಇಂತವರನ್ನು ಏನೆಂದು ಕರೆಯಬೇಕೋ ಗೊತ್ತಿಲ್ಲ ಎಂದಿದ್ದಾರೆ. ತನ್ನ ಮನಸ್ಸಿನ ನೋವನ್ನು ಬಿಚ್ಚಿಟ್ಟ ನಟಿ ರವೀನಾ ಟಂಡನ್ ಅವರ ಈ ಮಾತಿನ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.