ಸಾವಿರಾರು ಕೋಟಿ ಒಡೆಯನಾಗಿದ್ದರೂ ಕೂಡ ರತನ್‌ ಟಾಟಾ ಪ್ರತಿ ನಿತ್ಯ ಬಳಸುವ ಕಾರುಗಳಾವುವು ಗೊತ್ತಾ? ನಿಜಕ್ಕೂ ನಂಬೋಕೆ ಆಗಲ್ಲ!!

ಭಾರತದ ಪ್ರಮುಖ ಉದ್ಯಮಿ ಹಾಗೂ ಟಾಟಾ ಸನ್ಸ್‌ ಚೇರ್ಮನ್‌ ರತನ್‌ ಟಾಟಾ (Ratan TATA) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಬಹಳ ಚಿರಪರಿಚಿತವಾದ ಹೆಸರು ಈ ಟಾಟಾ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ʻಆರ್ಡರ್‌ ಆಫ್‌ ಆಸ್ಟ್ರೇಲಿಯಾʼ ನೀಡಿ ಗೌರವಿಸಲಾಗಿತ್ತು. ಈ ಕುರಿತು ಸಂತಸ ವ್ಯಕ್ತಪಡಿಸಿದ್ದ ಆಸ್ಟ್ರೇಲಿಯಾ ರಾಯಭಾರಿ ಬ್ಯಾರಿ ಓ ಫಾರೆಲ್‌ ಟ್ವೀಟ್‌ ನಲ್ಲಿ, “ರತನ್‌ ಟಾಟಾರಿಗೆ ಆಸ್ಟ್ರೇಲಿಯಾದ ಉನ್ನತ ಪ್ರಶಸ್ತಿ ನೀಡಿ ಗೌರವಿಸ್ತೋರದಕ್ಕೆ ಸಂತೋಷವಾಗ್ತಿದೆ” ಎಂದಿದ್ದರು.

ಇನ್ನೊಂದೆಡೆ ಭಾರತೀಯ ವಾಹನ ನಿರ್ಮಾಣ ಕ್ಷೇತ್ರದಲ್ಲಿ ರತನ್‌ಟಾಟಾ (Ratan TATA) ಅವರ ಹೆಸರು ಜನಪ್ರಿಯವಾದದ್ದು. ಈಗಾಗಲೇ ಇವರ ಬಳಿಯಲ್ಲಿ ರೇಂಜ್‌ರೋವರ್‌, ಜಾಗ್ವಾರ್‌ ಸೇರಿದಂತೆ ಇನ್ನಿತ್ತರ ಐಷಾರಾಮಿ ಕಾರುಗಳು ಇವರ ಬಳಿಯಿವೆ. ಅದೆಷ್ಟೇ ದುಬಾರಿ ಬೆಲೆ ಕಾರು ಮಾರುಕಟ್ಟೆಗೆ ಪ್ರವೇಶಿಸಿದರೂ ಕೂಡ ಅದನ್ನು ಕೊಂಡುಕೊಳ್ಳುವ ಸಾಮರ್ಥ್ಯವು ಇವರ ಬಳಿಯಿದೆ. ಆದರೂ ಕೂಡ ಟಾಟಾ ರತನ್ ಅವರ ಬಳಿ ಕಡಿಮೆ ಬೆಲೆಯ ಕಾರುಗಳಿವೆ. ಹಾಗಾದರೆ ಟಾಟಾ ರತನ್ಸಂ ಅವರ ಬಳಿಯಿರುವ ಕಡಿಮೆ ಬೆಲೆಯ ಕಾರುಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀವಿಲ್ಲಿ ನೋಡಬಹುದು.

Ratan tata car collection

ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಭಾರತಕ್ಕೆ ಟಾಟಾ ಪರಿಚಯಿಸಿದ ಮೊಟ್ಟ ಮೊದಲ ಕಾರು ಎಂದರೆ ಅದುವೇ ಟಾಟಾ ನೆಕ್ಸಾನ್‌ (Tata Nexon). ಈ ಕಾರು ಗ್ಲೋಬಲ್‌ NCAP ಕ್ರ್ಯಾಶ್‌ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದ್ದು, ಈ ಕಾರನ್ನು ರತನ್ ಅವರು ಉಪಯೋಗಿಸುತ್ತಿದ್ದಾರೆ. ಅದರ ಜೊತೆಗೆ, ಕಸ್ಟಮ್‌ ಬಿಲ್ಟ್‌ ಟಾಟಾ ನ್ಯಾನೋ (Custom Built Tata Nano) ಕಾರನ್ನು ಭಾರತದ ಪ್ರಮುಖ ಇವಿ ಎಲೆಕ್ಟ್ರಿಕ್‌ ವಾಹನಗಳ ಪವರ್‌ಟ್ರೈನ್‌ ಸೊಲ್ಯೂಷನ್‌ ಸಂಸ್ಥೆಯಾದ ಎಲೆಕ್ಟ್ರಾ ಇವಿಯು ರತನ್‌ಟಾಟಾ ಅವರಿಗೆ ಉಡುಗೊರೆಯಾಗಿ ನೀಡಿತ್ತು.

ಟಾಟಾ ರತನ್ ಅವರು ಹೋಂಡಾಸಿವಿಕ್‌ (Honda Civic) ಕಾರನ್ನು ಬಳಸುತ್ತಿದ್ದಾರೆ. ಹೋಂಡಾ ಕಂಪನಿ ತಯಾರಿಸಿದ ಆಕರ್ಷಕ ಪ್ರೀಮಿಯಂ‌ ಸೆಡಾನ್‌ ಕಾರುಗಳಲ್ಲಿ ಹೋಂಡಾ ಸಿವಿಕ್‌ ಕೂಡ ಒಂದು. 1.8 ಲೀಟರ್ ವಿ-ಟೆಕ್‌ ಇಂಜಿನ್‌ ಅನ್ನು ಹೊಂದಿರುವ ಈ ಕಾರು 130 bhp ಮತ್ತು 172 nm ಟಾರ್ಕ್‌ ಉತ್ಪಾದಿಸುತ್ತದೆ. ‌ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಒಂದಾಗಿತ್ತು. ಹೀಗೆ ಕಡಿಮೆ ಬೆಲೆಯ ಕಾರುಗಳು ಟಾಟಾ ರತನ್ ಅವರ ಬಳಿಯಿವೆ.

 

Leave a Reply

Your email address will not be published. Required fields are marked *