ದಕ್ಷಿಣ ಭಾರತ ಹಾಗೂ ಹಿಂದಿ ಸಿನಿಮಾರಂಗದಲ್ಲಿ ಬೇಡಿಕೆಯನ್ನು ಹೊಂದಿರುವ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ನವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದರ ನಡುವೆ ಕೂಡ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣನವರ ಡಾನ್ಸ್ ವಿಡಿಯೋವೊಂದು ವೈರಲ್ ಆಗಿದೆ.
ಮುಂಬೈ (Mumbai) ನಲ್ಲಿ ನಡೆದಿರುವಂತಹ ಪ್ರಶಸ್ತಿ ಪ್ರಧಾನ ಸಮಾರಂಭ ಒಂದರಲ್ಲಿ ರಶ್ಮಿಕ ಮಂದಣ್ಣ (Rashmika Mandanna) ಮರಾಠಿ ಶೈಲಿಯ ಉಡುಗೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಡಾನ್ಸ್ ಶೈಲಿಗೆ ಫಿದಾ ಆಗಿದ್ದಾರೆ.
ಅದಲ್ಲದೇ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಒಂದೆರಡು ದಿನಗಳ ಹಿಂದೆಯಷ್ಟೇ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ರಶ್ಮಿಕಾ ತನ್ನ ಸಹಾಯಕಿ ಮೇಲೆ ಎಗರಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ, ತಮಗೆ ಮೇಕಪ್ ಮಾಡಲು ಬಂದ ಸಹಾಯಕಿಯ ಮೇಲೆ ರಶ್ಮಿಕಾ ರೇಗಾಡಿದ್ದಾರೆ. ಸಿಟ್ಟು ಮಾಡಿಕೊಂಡು ಶೂಟಿಂಗ್ ಬಿಟ್ಟು ಹೊರಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ರಶ್ಮಿಕಾರವರು, ‘ಏನ್ ನಡೀತಾ ಇದೆ? ಟ್ಯಾಲೆಂಟ್ಗೆ ಇಲ್ಲಿ ಬೆಲೆಯೇ ಇಲ್ಲ. ಟ್ಯಾಲೆಂಟ್ಗೆ ಎಲ್ಲಿ ಬೆಲೆ ಇದೆಯೋ ಅಲ್ಲಿಗೆ ನಾನು ಹೋಗುತ್ತೇನೆ’ ಎಂದು ಅವರು ಸಿಟ್ಟು ಮಾಡಿಕೊಂಡು ಹೊರಟು ಹೋಗಿದ್ದಾರೆ. ಕೊಡಗಿನ ಬೆಡಗಿಯ ಈ ವರ್ತನೆಗೆ ಫ್ಯಾನ್ಸ್ ಶಾಕ್ ಆಗಿದ್ದು, ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಪ್ರಶ್ನೆಯೊಂದು ಮೂಡಿದೆ. ಆದರೆ ಪ್ರಚಾರಕ್ಕಾಗಿ ಹೀಗೆ ಮಾಡಿರುವುದು ಎಂದು ನೆಟ್ಟಿಗರಿಗೆ ತಿಳಿದಿದ್ದು, ಪ್ರಚಾರಕ್ಕಾಗಿ ಏನ್ ಬೇಕಾದರೂ ಮಾಡ್ತಾರೆ ಎಂದು ಹೀಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇತ್ತ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ರಣಬೀರ್ ಕಪೂರ್ (Ranabir Kapoor) ಜೊತೆಗೆ ಅನಿಮಲ್ (Animal), ಟೈಗರ್ ಶ್ರಾಫ್ (Tiger Shraaf) ನಟನೆಯ ಸಿನಿಮಾಗೆ ಸಹಿ ಮಾಡಿದ್ದಾರೆ. ಅದಲ್ಲದೇ, ತೆಲುಗಿನಲ್ಲಿ ಪುಷ್ಪ 2 (Pushpa 2) ಹಾಗೂ ಗೀತ ಗೋವಿಂದಂ 2 ( Geetha Govindam 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.