ರಣಬೀರ್​​ ಕಪೂರ್​ ಕೆನ್ನೆಗೆ ಜೋರಾಗಿ ಹೊಡೆದಿದ್ದ ರಶ್ಮಿಕಾ ಮಂದಣ್ಣ, ಕೊನೆಗೆ ಅತ್ತಿದ್ದರಂತೆ ನ್ಯಾಷನಲ್ ಕ್ರಶ್, ಸತ್ಯ ಬಾಯಿಬಿಟ್ಟು ಹೇಳಿದ್ದೇನು ಗೊತ್ತಾ?

ಟಾಲಿವುಡ್ ಹಾಗೂ ಬಾಲಿವುಡ್ ರಂಗದಲ್ಲಿ ಭಾರಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಹೊರತಾಗಿಯೂ ವೈಯಕ್ತಿಕ ಬದುಕಿನ ವಿಚಾರದಲ್ಲಿ ಸುದ್ದಿಯಾಗುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಆದರೆ ಇದೀಗ ರಣಬೀರ್​​ ಕಪೂರ್​ (Ranabeer Kapoor) ಇನ್ನೊಬ್ಬಳ ಜೊತೆ ಮಲಗಿ ಸುದ್ದಿ ಕೇಳಿದ ರಶ್ಮಿಕಾ ಮಂದಣ್ಣ, ರಣಬೀರ್​​ ಕಪೂರ್​ ಕೆನ್ನೆಗೆ ಜೋರಾಗಿ ಹೊಡೆದಿದ್ದಾರೆ. ನಂತರ ಹೀಗೆ ಹೊಡೆದಿದ್ದಕ್ಕೆ ಪ-ಶ್ಚಾತ್ತಾಪ ಪಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣನವರೇ ರಿವೀಲ್ ಮಾಡಿದ್ದಾರೆ.

ಅನಿಮಲ್​ (Animal) ಚಿತ್ರದಲ್ಲಿ ರಣಬೀರ್​ ಕಪೂರ್​ ಕೆನ್ನೆಗೆ ಹೊಡೆದಿದ್ದಾರೆ. ಆದರೆ ಚಿತ್ರದ ಉದ್ದೇಶಕಕ್ಕೆ ಹೊಡೆದಿದ್ದು, ಯಾಕೋ ನಟಿಗೆ ತುಂಬಾ ನೋವಾಯಿತು. ಇದನ್ನು ಸಹಿಸಿಕೊಳ್ಳಲು ಆಗದೇ ಸಿಕ್ಕಾಪಟ್ಟೆ ಅತ್ತೆ ಎಂದು ಹೇಳಿದ್ದಾರೆ.ಈ ಬಗ್ಗೆ ಪಿಂಕ್‌ವಿಲ್ಲಾ ವೆಬ್‌ ಪೋರ್ಟಲ್‌ (Pink villa web portal) ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ‘ಅಷ್ಟಕ್ಕೂ ಹೀಗೊಂದು ದೃಶ್ಯ ಇತ್ತು ಎಂದು ತಮಗೆ ತಿಳಿದಿರಲಿಲ್ಲ. ಇಡೀ ಚಿತ್ರೀಕರಣ ಒಂದು ಅನುಕ್ರಮ ಘಟನೆಗಳನ್ನು ಆಧರಿಸಿತ್ತು. ಮುಂದೆ ಯಾವ ದೃಶ್ಯವಿದೆ, ನಾನು ಏನು ಮಾಡಲಿದ್ದೇನೆ ಎನ್ನುವುದೂ ನನಗೂ ಗೊತ್ತಿರಲಿಲ್ಲ. ನಿರ್ದೇಶಕರು ಹೇಳುತ್ತಿದ್ದಂತೆಯೇ ಮಾಡುತ್ತಾ ಹೋಗುವುದು ಅಷ್ಟೇ ಆಗಿತ್ತು’ ಎಂದಿದ್ದಾರೆ.

‘ರಣಬೀರ್​​ ಅವರಿಗೆ ಹೊಡೆಯುವ ದೃಶ್ಯ ಬಂದಾಗ ನಾನೇನು ಮಾಡುತ್ತಿದ್ದೇನೆ ಎಂದು ತಿಳಿದರಲಿಲ್ಲ. ಇದು ಸಾಧ್ಯವೇ ಇಲ್ಲ ಎಂದಾಗ, ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಧೈರ್ಯ ತುಂಬಿದರು. ನಂತರ ನಾನು ಅವರಿಗೆ ಕಪಾಳಮೋಕ್ಷ ಮಾಡಿದೆ. ಚಿತ್ರೀಕರಣದ ಬಳಿಕ ಬಿಕ್ಕಿ ಬಿಕ್ಕಿ ಅತ್ತೆ. ರಣಬೀರ್​​ ಕಪೂರ್​ ಬಳಿ ಹೋಗಿ ನೀವು ಆರಾಮವಾಗಿದ್ದೀರಾ ಎಂದೆಲ್ಲ ಕೇಳಿದೆ’ ಎಂದಿದ್ದಾರೆ.

‘ಅರ್ಧ ದಿನ ನಾನು ಇದೇ ರೀತಿ ರಣಬೀರ್‌ ಕಪೂರ್‌ ಬಳಿ ಹೋಗಿ ಕೇಳುತ್ತಿದ್ದೆ. ಆ ಕ್ಷಣದಲ್ಲಿ ಸಿನಿಮಾ ದೃಶ್ಯವಾಗಿರುವುದರಿಂದ ಹೊಡೆದೆ. ನಾನು ಈ ಸಿನಿಮಾ ಮತ್ತು ಈ ಸೀಕ್ವೆನ್ಸ್‌ ಮಾಡಿದ್ದಕ್ಕೆ ಖುಷಿಯಿದೆ. ಆದರೆ, ನಾನು ಈ ರೀತಿ ಮಾಡಿದೆ ಎಂದು ನೆನಪಿಸಿಕೊಂಡಾಗ ಆಶ್ಚರ್ಯವಾಗುತ್ತದೆ’ ಎಂದು ರಶ್ಮಿಕಾ ಹೇಳಿದ್ದಾರೆ.

Leave a Reply

Your email address will not be published. Required fields are marked *