ಹಿಂದಿನ ಎಲ್ಲಾ ದಾಖಲೆ ಗಳನ್ನು ಮುರಿದು ಲಕ್ಷಾನುಗ್ಗಟ್ಟಲೆ ರೂಪಾಯಿಯ ಪ್ಯಾಕೇಜ್ ಪಡೆದ ಬಿಟೆಕ್ ವಿದ್ಯಾರ್ಥಿನಿ ರಾಶಿ, ಎಷ್ಟು ಲಕ್ಷ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

ಇತ್ತೀಚೆಗಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈಗಾಗಲೇ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಐಐಟಿ (IIT), ಐಐಎಂ (IIM) ಮತ್ತು ಎನ್‌ಐಟಿ (NIT)ಗಳಂತಹ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮುಗಿಸಿದ ಅನೇಕ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಐಟಿ ಕಂಪೆನಿಗಳ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಬಿಡುತ್ತಾರೆ.

ಅಷ್ಟೇ ಅಲ್ಲದೇ, ದಾಖಲೆಯ ಸಂಬಳದ ಪ್ಯಾಕೇಜ್‌ (Salary Package) ಪಡೆಯುವುದಿದೆ. ಈ ಸಾಲಿಗೆ ಅನೇಕ ವಿದ್ಯಾರ್ಥಿಗಳು ಸೇರಿಕೊಂಡಿದ್ದುಡಿದ್ದು, ಅಂತಹವರಲ್ಲಿ ರಾಶಿ ಬಗ್ಗಾ ಕೂಡ ಒಬ್ಬರು. ಆದರೆ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ರಾಯ್‌ಪುರ್‌ ನ (ಐಐಐಟಿ-ಎನ್‌ಆರ್) ಬಿಟೆಕ್ ವಿದ್ಯಾರ್ಥಿನಿಯಾದ ರಾಶಿ ಬಗ್ಗಾ (Rashi Baggaa) ಅವರು 2023 ರ ಆರಂಭದಲ್ಲಿ ವಾರ್ಷಿಕ 85 ಲಕ್ಷ ರೂಪಾಯಿಗಳ ಉದ್ಯೋಗ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.

ಐಐಐಟಿ ಮಾಧ್ಯಮ ಸಂಯೋಜಕರು ರಾಶಿ ಬಗ್ಗಾರವರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ತನ್ನ ಆರಂಭಿಕ ಉದ್ಯೋಗದ ಪ್ರಸ್ತಾಪದೊಂದಿಗೆ ತೃಪ್ತರಾಗಿದ್ದಾರೆ ಎಂದಿದ್ದಾರೆ..ಅಷ್ಟೇ ಅಲ್ಲದೇ ರಾಶಿ ಬಗ್ಗಾ ಅವರು ಬೆಂಗಳೂರಿನ ಇನ್ಸ್ಟಿಟ್ಯೂಟ್‌ನಲ್ಲಿ ಎಸ್‌ಡಿಇ ಇಂಟರ್ನ್ ಆಗಿ ಮತ್ತು ಅಮೆಜಾನ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಇಂಟರ್ನ್ ಆಗಿ ಕೆಲಸವನ್ನು ಮಾಡುತ್ತಿದ್ದು, ಕಳೆದ ಜುಲೈ 2023 ರಿಂದ, ಅವರು ಅಟ್ಲಾಸಿಯನ್‌ಗೆ ಪ್ರಾಡೆಕ್ಟ್ ಸೆಕ್ಯೂರಿಟಿ ಎಂಜಿನಿಯರ್ ಆಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಈ ಹಿಂದೆ IIIT-NR ನಿಂದ ಚಿಂಕಿ ಕರ್ದಾ (Chindi Karda) ಅವರು ಕೂಡ 57 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆದಿದ್ದರು. IIIT-NR ವಿದ್ಯಾರ್ಥಿ ಯೋಗೇಶ್ ಕುಮಾರ್ (Yogesh Kumar) ಕೂಡ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಹುದ್ದೆಗಾಗಿ ವರ್ಷಕ್ಕೆ 56 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆದಿದ್ದರು.

ಕೋವಿಡ್ ಸಮಯದಲ್ಲಿ ಐಐಐಟಿ-ಎನ್‌ಆರ್ ವಿದ್ಯಾರ್ಥಿ, ರವಿ ಕುಶ್ವಾ (Ravi Kushwa) ಅವರಿಗೆ ದೊಡ್ಡ ಬಹುರಾಷ್ಟ್ರೀಯ ಕಂಪನಿಯಿಂದ ವಾರ್ಷಿಕ 1 ಕೋಟಿ ರೂಪಾಯಿ ಸಂಬಳದ ಕೆಲಸ ಸಿಕ್ಕಿತ್ತು. ಆದರೆ ಕೋವಿಡ್ ಇದ್ದ ಕಾರಣ ಕೆಲಸ ಪಡೆಯಲು ಸಾಧ್ಯವಾಗಿರಲಿಲ್ಲ. ಒಟ್ಟಿನಲ್ಲಿ ಈ ವಿದ್ಯಾರ್ಥಿಗಳ ಸಾಧನೆಯು ಉಳಿದ ವಿದ್ಯಾರ್ಥಿಗಳಿಗೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *