Ranjani Raghavan : ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ನೋಡಿ ಸುಂದರ ಕುಟುಂಬ!!

Ranjani Raghavan : ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?ಕನ್ನಡ ಕಿರುತೆರೆ ಲೋಕದಲ್ಲಿ ಕನ್ನಡತಿ ಧಾರಾವಾಹಿಯ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರಂಜನಿ ರಾಘವನ್ (Ranjani Raghavan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ನಟಿ ರಂಜನಿ ರಾಘವನ್ ರವರು ಒಬ್ಬ ನಟಿ ಮಾತ್ರವಲ್ಲದೇ ನಿರ್ದೇಶಕಿ ಹಾಗೂ ಬರಹಗಾರ್ತಿಯಾಗಿದ್ದಾರೆ.

ಕತೆ ಡಬ್ಬಿ (Kathe Dabbi) ಎನ್ನುವ ಪುಸ್ತಕವನ್ನು ಬರೆದಿದ್ದು, ಇವರ ಬರಹಗಳ ಪುಸ್ತಕಗಳು ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿವೆ. ನಟಿ ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

Ranjani Raghavan Family Photos

ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಬಿಡುವು ಮಾಡಿಕೊಂಡು ಟ್ರಿಪ್ ಎಂದು ಸುತ್ತಾಡುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಕುಟುಂಬದ ಜೊತೆಗಿನ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟಿ ರಂಜನಿ ರಾಘವನ್ ಅವರ ಅಪ್ಪ, ಅಮ್ಮ ಹಾಗೂ ತಂಗಿಯರು ಇದ್ದಾರೆ.ಇತ್ತೀಚೆಗಷ್ಟೇ ಮಧ್ಯಪ್ರದೇಶ (Madhya Pradesh) ದ ಪ್ರವಾಸದಲ್ಲಿದ್ದು, ದೇಗುಲಕ್ಕೆ ತೆರಳಿದ್ದರು.

ಈ ದೇಗುಲ ದರ್ಶನದ ಫೋಟೋಗಳನ್ನು ನಟಿ ರಂಜನಿ ರಾಘವನ್ ಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋದಲ್ಲಿ ಹಣೆ ಮೇಲೆ ಮಹಾಕಾಲ ಎಂದು ಬರೆದು, ತ್ರಿಶೂಲದ ಚಿತ್ರವಿರುವ ತಿಲಕ (ತ್ರಿಪುಂಡ್) ನಟಿಯ ಹಣೆಯ ಮೇಲೆ ಇತ್ತು.ಉಜ್ಜಯಿನಿ ದೇಗುಲದ ಫೋಟೋ ಶೇರ್ ಮಾಡಿಕೊಂಡಿದ್ದ ನಟಿ ರಂಜನಿ, “ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದೆ. ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ.

ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರುವ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!’ ಎಂದು ಬರೆದುಕೊಂಡಿದ್ದರು ನಟಿ ರಂಜನಿ ರಾಘವನ್ ಅವರ ನಟನಾ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಆಕಾಶದೀಪ (Akasha Deepa) ದಲ್ಲಿ ಅಮೃತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2014 ರಲ್ಲಿ ಕೆಳದಿ ಚೆನ್ನಮ್ಮ (Keladi Chennamma) ದಲ್ಲಿ ನಾಗವೇಣಿ ಪಾತ್ರವನ್ನು ಮಾಡಿದರು.

ಆದಾದ ಬಳಿಕ ಪುಟ್ಟಗೌರಿ ಮದುವೆ (Putta Gowri Maduve) ಯಲ್ಲಿ ಗೌರಿ ಪಾತ್ರದಲ್ಲಿ ನಟಿಸಲು ಅವಕಾಶವು ಸಿಕ್ಕಿತು. ಪುಟ್ಟ ಗೌರಿ ಮದುವೆಯಲ್ಲಿ ಗೌರಿ ಪಾತ್ರವು ಇವರ ನಟನಾ ಬದುಕಿಗೆ ಬ್ರೇಕ್ ನೀಡಿತು. ಪೌರ್ಣಮಿ ತಿಂಕಲ್ ಎಂಬ ಮಲಯಾಳಂ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇಷ್ಟದೇವತೆ ಧಾರಾವಾಹಿಯ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡರು.

ಇನ್ನು, ಟ್ರೇನ್ ಟು ಪಾಕಿಸ್ತಾನ್, ಕರ್ವಾಲೋ, ರಾಮಧಾನ್ಯ, ಯಹೂದಿ ಹುಡುಗಿ ಮುಂತಾದ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ನಟಿ ರಂಜನಿ ರಾಘವನ್ ನಟಿಸಿರುವ ಕನ್ನಡತಿ ಧಾರಾವಾಹಿಯೂ ಮುಕ್ತಾಯವಾಗಿದೆದೆ. ಸದ್ಯಕ್ಕೆ ನಟಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *