ಸ್ಯಾಂಡಲ್ ವುಡ್ ನ ಕ್ವೀನ್ ನಟಿ ರಮ್ಯಾ. ಸಿನಿಮಾ ರಂಗದಿಂದ ಎಷ್ಟೇ ದೂರ ಇದ್ದರು ಅವರ ಚಾರ್ಮ್ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಿನಿಮಾಗಳಲ್ಲಿ ರಮ್ಯಾ ಅಭಿನಯಿಸಬೇಕು ಎನ್ನುವುದೇ ಅವರ ಅಭಿಮಾನಿಗಳ ಬಹುದೊಡ್ಡ ಬೇಡಿಕೆ. ಸದ್ಯ ರಮ್ಯಾ ತಮ್ಮ ಹುಟ್ಟು ಹಬ್ಬದ ಖುಷಿಯಲ್ಲಿ ಇದ್ದಾರೆ. ಆದರೆ ಅಭಿಮಾನಿಗಳ ಜೊತೆ ಬರ್ತಡೆ ಆಚರಿಸಿಕೊಳ್ಳುತ್ತಿಲ್ಲ ಬದಲಿಗೆ ತಾವು ವಿದೇಶದಲ್ಲಿ ಕುಳಿತು ಬರ್ತಡೇ ಯ ಫೋಟೋ ಶೇರ್ ಮಾಡುತ್ತಿದ್ದಾರೆ.
ಹೌದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಲ್ವತ್ತರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈಗಲೂ 20ರ ಹರೆಯದವರಂತೆ ಕಾಣುವ ರಮ್ಯಾ ಅವರಿಗೆ 40 ವರ್ಷ ಅಂದ್ರೆ ನಂಬೋದಕ್ಕೆ ಸಾಧ್ಯವಿಲ್ಲ ಆದರೂ ಸಿನಿಮಾದಲ್ಲಿ ಅವರ ಜರ್ನಿ ಬಹಳ ದೊಡ್ಡದು ಪುನೀತ್ ರಾಜಕುಮಾರ್ ಅವರಿಂದ ಹಿಡಿದು ಸಾಕಷ್ಟು ಕನ್ನಡದ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ ಖ್ಯಾತಿ ಅವರದ್ದು.
ನಟಿ ರಮ್ಯಾ ಸಿನಿಮಾ ರಂಗದಿಂದ ದೂರವಾಗಿ ರಾಜಕೀಯಕ್ಕೆ ಇಳಿದರು. ಇದೀಗ ರಾಜಕೀಯದಿಂದಲೇ ದೂರವಾಗಿ ಮತ್ತೆ ಸಿನಿಮಾದ ಕಡೆಗೆ ಮುಖ ಮಾಡಿದ್ದಾರೆ. ರಮ್ಯಾ ಅವರ ದಿ ಆಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆ ಈಗಾಗಲೇ ಸಿನಿಮಾ ನಿರ್ಮಾಣದಲ್ಲಿ ತೊಡಗಿದೆ ಅವರ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ರಾಜ್ ಬಿ ಶೆಟ್ಟಿ ಅವರ ನಿರ್ದೇಶನ ಈ ಸಿನಿಮಾಕ್ಕೆ ಇದೆ. ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ರಮ್ಯಾ ಅಭಿನಯಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದ ಬದಲಾವಣೆಯಿಂದ ರಮ್ಯಾ ಈ ಸಿನಿಮಾವನ್ನ ನಿರ್ಮಾಣ ಮಾಡಿದರೆ ಹೊರತು ನಟಿಸಲಿಲ್ಲ.

40ರ ಕ್ಲಬ್ ಹೌಸ್ ಸೇರಿರುವ ನಟಿ ರಮ್ಯಾ ಇನ್ನೇನು ಉತ್ತರ ಕಾಂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಈ ಸಿನಿಮಾದ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. ಮೋಹಕ ತಾರೆ ಕನ್ನಡದ ಪದ್ಮಿನಿ ರಮ್ಯಾ ಅವರ ಹುಟ್ಟುಹಬ್ಬಕ್ಕೆ ಅವರ ಎರಡು ಸಿನಿಮಾಗಳಲ್ಲಿ ಯಾವುದಾದರೂ ಸಿನಿಮಾದ ಪೋಸ್ಟರ್ ರಿಲೀಸ್ ಆಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ ರಮ್ಯಾ ವಿದೇಶ ಪ್ರವಾಸದಲ್ಲಿದ್ದಾರೆ ಸದ್ಯ ಜಪಾನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಮ್ಯಾ, ಅಲ್ಲಿಂದ ಹಿಂತುರುಗಿ ಬಂದ ಮೇಲೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬಹುದು. ಸದ್ಯ ಮೋಹಕ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಿಷಸ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.