ಸಿಲಿಕಾನ್ ಸಿಟಿಯಲ್ಲಿ ರಾಮೇಶ್ವರಂ ಕೆಫೆ ಹೆಸರಿನ ಹೋಟೆಲ್ ನಡೆಸಿ ಯಶಸ್ಸು ಕಂಡ ಈ ಮಾಲೀಕರ ತಿಂಗಳ ಆದಾಯವೆಷ್ಟು ಗೊತ್ತಾ? ಬೆಚ್ಚಿ ಬೀಳುತ್ತಿರಾ.. ಪಕ್ಕಾ..

ಇತ್ತೀಚೆಗಿನ ದಿನಗಳಲ್ಲಿ ಓದು ಮುಗಿದ ಕೂಡಲೇ ಮೊದಲು ಆಯ್ಕೆ ಮಾಡುವುದು ಸಿಲಿಕನ್ ಸಿಟಿಯನ್ನ. ಹೌದು ಓದು ಮುಗಿಯುತ್ತಿದ್ದಂತೆ ಗಂಟುಮೂಟೆ ಕಟ್ಟಿ ಬೆಂಗಳೂರಿ (Banglore) ನತ್ತ ಪ್ರಯಾಣ ಬೆಳೆಸುವವರೇ ಹೆಚ್ಚು. ಬೆಂಗಳೂರಿನಲ್ಲಿ ಕನ್ನಡಿಗರಿಗಗಿಂತ ಹೆಚ್ಚಾಗಿ ಬೇರೆ ಬೇರೆ ಊರಿನಿಂದ ಬಂದವರೇ ಹೆಚ್ಚಾಗಿದ್ದಾರೆ.

ದುಬಾರಿ ದುನಿಯಾವಾಗಿದ್ದರೂ ಕೂಡ ಸಣ್ಣ ಪುಟ್ಟ ಬ್ಯುಸಿ ನೆಸ್ (Business) ಮಾಡಿಕೊಂಡದರೂ ಕೂಡ ಬದುಕಬಹುದು ಎನ್ನುವ ಧೈರ್ಯವನ್ನು ಬೆಂಗಳೂರು ನೀಡುತ್ತದೆ. ಹಣ ಸಂಪಾದನೆ ಮಾಡಬೇಕೆನ್ನುವವರಿಗೆ ಈ ಹೋಟೆಲ್ ಉದ್ಯಮ ಬೆಸ್ಟ್ ಎನ್ನಬಹುದು. ಸ್ಟ್ರೀಟ್ ಫುಡ್ ನಿಂದ ಹಿಡಿದು ಸ್ಟಾರ್ ಹೋಟೆಲ್‌ ಗಳು ಈ ಬೆಂಗಳೂರಿನಲ್ಲಿವೆ.

ಆದರೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿ ಯಶಸ್ಸು ಕಂಡವರು ಈ ಇವರು ಕೂಡ ಒಬ್ಬರಾಗಿದ್ದಾರೆ.10×10 ಹಾಗು 10×15 ಚದರ ಜಾಗದಲ್ಲಿ ಆರಂಭವಾಗಿರುವ ಒಂದು ಹೋಟೆಲ್ ತಿಂಗಳಿಗೆ ಸುಮಾರು ನಾಲ್ಕು ಕೋಟಿಗೂ ರೂಪಾಯಿವರೆಗೆ ಹಣ ಗಳಿಕೆ ಮಾಡುತ್ತಾರೆ ಎಂದು ತಿಳಿದರೆ ಅಚ್ಚರಿಯಾಗಬಹುದು.

ಅದುವೇ ಬೆಂಗಳೂರಿನಲ್ಲಿರುವ ಸಸ್ಯಾಹಾರಿ ಹೋಟೆಲ್ ಗಳಲ್ಲಿ ಫೇಮಸ್ ಆಗಿರುವುದೇ ಈ ರಾಮೇಶ್ವರಂ ಕೆಫೆ (Rameshwaram Cafe).ರಾಮೇಶ್ವರಂ ಕೆಫೆ ಆರಂಭವಾಗಿ ಕೇವಲ ಮೂರು ವರ್ಷಗಳಾಗಿದ್ದು, 2021 ರಲ್ಲಿ ಪ್ರಾರಂಭವಾಯಿತು. ಸ್ವಾದಿಷ್ಟ, ಆರೋಗ್ಯಕರ ಹಾಗೂ ರುಚಿಕರ ಆಹಾರವನ್ನು ಗ್ರಾಹಕರಿಗೆ ಉಣಬಡಿಸುವಲ್ಲಿ ಈ ಹೋಟೆಲ್ ಬೆಸ್ಟ್ ಎನ್ನಬಹುದು.

ರಾಮೇಶ್ವರಂ ಕೆಫೆಯ ಮೂಲವು ದಿವ್ಯಾ ರಾಘವೇಂದ್ರ ರಾವ್ (Divya Raghavendra Rao) ಮತ್ತು ರಾಘವೇಂದ್ರ ರಾವ್ (Raghavendra Rao) ಇಬ್ಬರೂ ಜೊತೆ ಸೇರಿ ಶುರು ಮಾಡಿದರು.ಹೌದು, ಐಐಎಂ ಅಹಮದಾಬಾದ್‌ನ ಸ್ನಾತಕೋತ್ತರ ವಿದ್ಯಾರ್ಥಿನಿ (Master degree student) ಯಾಗಿರುವ ದಿವ್ಯಾ ರಾಘವೇಂದ್ರ ರಾವ್ ಯವರು ಸಾಂಪ್ರದಾಯಿಕ ದಕ್ಷಿಣ ಭಾರತದ ಪಾಕಪದ್ಧತಿಯನ್ನು ಫೇಮಸ್ ಮಾಡಬೇಕೆಂದು ಕನಸು ಕಂಡಿದ್ದರು.

ಹೀಗಿರುವಾಗ ರಾಘವೇಂದ್ರ ರಾವ್ ಅವರನ್ನು ಭೇಟಿಯಾದರು. ರಾಘವೇಂದ್ರ ರಾವ್ ಅವರು ಶೇಷಾದ್ರಿಪುರಂ (Sheshadripuram) ನಲ್ಲಿ ಒಂದು ಸಾಮಾನ್ಯ ಫುಡ್ ಕಾರ್ಟ್ ಒಂದನ್ನು ನಡೆಸುತ್ತಿದ್ದು, ಆಹಾರ ಉದ್ಯಮದಲ್ಲಿ 20 ವರ್ಷಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದು ಅನುಭವಿಯಾಗಿದ್ದರು.

ತಮ್ಮ ಹೋಟೆಲ್ ಗೆ ರಾಮೇಶ್ವರಂ ಹೆಸರನ್ನು ಆರಿಸಿಕೊಳ್ಳಲು ಕಾರಣವೊಂದಿದೆ. ದಿವಂಗತ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (Dr. APJ Abdul Kalam) ಅವರ ಜನ್ಮಸ್ಥಳಕ್ಕೆ ಗೌರವ ಸಲ್ಲಿಸಲು ಅವರು “ರಾಮೇಶ್ವರಂ” ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು. ಸಸ್ಯಹಾರಿ ಹೋಟೆಲ್ ಆಗಿರುವ ಇದು ಮುಂಜಾನೆ 2 ಗಂಟೆಯವರೆಗೂ ತೆರೆದಿರುತ್ತದೆ.

ಬೆಂಗಳೂರಿನಲ್ಲಿ ಈ ಹೋಟೆಲ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬೆಳಗ್ಗಿನ ಉಪಹಾರವನ್ನು ಸವಿಸಲು ಸರತಿ ಸಾಲಿನಲ್ಲಿ ಆಹಾರಪ್ರಿಯರು ಇಲ್ಲಿಗೆ ಬರುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ, ರಾಮೇಶ್ವರಂ ಕೆಫೆ ದಿನಕ್ಕೆ ಸುಮಾರು 7,500 ಬಿಲ್ ಗಳನ್ನು ಪ್ರಕ್ರಿಯೆಗೊಳಿಸುವ ಉತ್ತಮವಾದ ಆದಾಯವನ್ನು ಗಳಿಸುತ್ತಾರೆ ಎನ್ನಲಾಗಿದೆ. ಅಂದರೆ ರಾಮೇಶ್ವರಂ ಕೆಫೆ ಮಾಸಿಕ 4.5 ಕೋಟಿ ರೂಪಾಯಿ ಆದಾಯದೊಂದಿಗೆ ಯಶಸ್ವಿ ಉದ್ಯಮವಗಿ ಅಲ್ಲಿನ ಸುತ್ತಮುತ್ತ ಜನರಿಗೆ ಉತ್ತಮ ಆಹಾರವನ್ನು ಉಣಬಡಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *