ಬಾಲಿವುಡ್ ನಟಿ ರಾಕುಲ್ ಪ್ರೀತ್ (Bollywood Actress Rakul Preeth) ತನ್ನ ಮಾದಕ ನೋಟ ಹಾಗೂ ನಟನೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ನಟಿ ರಾಕುಲ್ ಪ್ರೀತ್ ಅವರು ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಇದೀಗ ಸಿನಿಮಾದ ಬ್ಯುಸಿ ನಡುವೆ ಬಿಡುವು ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆ. ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಮಾಲ್ಡೀವ್ಸ್ (Maldives) ನಲ್ಲಿ ವೆಕೇಷನ್ ಅನ್ನು ಎಂಜಾಯ್ ಮಾಡಿದ್ದಾರೆ.
ನಟಿ ರಾಕುಲ್ ಪ್ರೀತ್ ಸಿಂಗ್ ಮಾಲ್ಡೀವ್ಸ್ನಲ್ಲಿ ಓಪನ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ರೆಡ್ ಡ್ರೆಸ್ ನಲ್ಲಿ ಪಡ್ಡೆ ಹೈಕಳ ನಿದ್ದೆ ಕದಿಯುವ ಮೂಲಕ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳನ್ನು ನೋಡಿ ನೆಟ್ಟಿಗರು ಕಮೆಂಟ್ಗಳ ಸುರಿಮಳೆಗೈದಿದ್ದಾರೆ.
ತೆಲುಗು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು ರಾಕುಲ್ ಪ್ರೀತ್ ಸಿಂಗ್. ಅಂದಹಾಗೆ, ಕಾಲೇಜಿನಲ್ಲಿ ಓದುತ್ತಿದ್ದಾಗ ರಾಕುಲ್ ಮಾಡೆಲಿಂಗ್ (Modeling) ನತ್ತ ಮುಖ ಮಾಡಿದರು. 2009ರಲ್ಲಿ ಕನ್ನಡ ಚಿತ್ರ ಗಿಲ್ಲಿ (Gilli) ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಸದ್ಯಕ್ಕೆ ರಾಕುಲ್ ಪ್ರೀತ್ ತೆಲುಗು (Telugu), ಹಿಂದಿ (Hindi), ತಮಿಳು (Tamil), ಕನ್ನಡ (Kannada) ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೇ ನಟಿ ರಾಕುಲ್ ಪ್ರೀತ್ ಅವರ ಮದುವೆಯ ಸುದ್ದಿಯೊಂದು ಕೇಳಿ ಬಂದಿತ್ತು. ನಟ ಹಾಗೂ ಚಿತ್ರ ನಿರ್ಮಾಪಕ ಜಕ್ಕಿ ಬಗ್‌ನಾನಿ (Jakki Bagnani) ಯೊಂದಿಗೆ ನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್ ಮಾಡುತ್ತಿದ್ದಾರೆ. ಅವರಿಬ್ಬರ ಮದುವೆ ಕುರಿತ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ ಇದೀಗ ಈ ಮುದ್ದಾದ ಜೋಡಿಯು ಶೀಘ್ರದಲ್ಲೇ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಮಾಹಿತಿಯು ಹೊರ ಬಿದ್ದಿತ್ತು.
ಅದಲ್ಲದೇ, ರಾಕುಲ್ ಅವರನ್ನು ಮದುವೆಯಾಗುತ್ತಿರುವ ಜಕ್ಕಿ ಬಗ್‌ನಾನಿ ಕೋಲ್ಕತ್ತ ಮೂಲದವರು. 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್ ನಟ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ನಟನ ಜೊತೆಗೆ ರಾಕುಲ್ ಪ್ರೀತ್ ಬಾಲಿವುಡ್ ನಟನನ್ನು ಮದುವೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಮದುವೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ, ನಟಿ ರಾಕುಲ್ ಪ್ರೀತ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.