Rakul preet singh about kisisng scene : ಸಿನಿಮಾಗಳಲ್ಲಿ ಚುಂಬನ ದ ದೃಶ್ಯದ ಬಗ್ಗೆ ಮಾತನಾಡಿದ್ದ ಬಹುಭಾಷಾ ನಟಿ ರಾಕುಲ್ ಪ್ರೀತ್, ಏನು ಹೇಳಿದ್ದಾರೆ ಗೊತ್ತಾ?.. ಸಿನಿಮಾ ಜಗತ್ತು ಎಂದರೆ ಅದೊಂದು ಬಣ್ಣದ ಲೋಕ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟರೂ ಕೂಡ, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ.
ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ಕೆಲವು ನಟಿಯರು ಈ ಲೋಕದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಸಿನಿ ಲೋಕದಲ್ಲಿ ಬದುಕು ಕಟ್ಟಿಕೊಂಡವರ ಪೈಕಿ ರಾಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ತೆಲುಗು ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿಕೊಂಡಿದ್ದು ಸದ್ಯಕ್ಕೆ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ.
ರಾಕುಲ್ 1990ರ ಅಕ್ಟೋಬರ್ 12 ರಂದು ರಾಜೇಂದ್ರ ಸಿಂಗ್ ಮತ್ತು ಸುಲ್ವಿಂದರ್ ಸಿಂಗ್ ದಂಪತಿಗೆ ಜನಿಸಿದರು. ಅವರ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಕಾರಣ ನವದೆಹಲಿಯಲ್ಲಿಯೇ ಇದ್ದರು. ತನ್ನ ವಿದ್ಯಾಭ್ಯಾಸವನ್ನು ಆರ್ಮಿ ಪಬ್ಲಿಕ್ ಸ್ಕೂಲ್ ಧೌಲಾ ಕುವಾನ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಟಿ ಗಾಲ್ಫ್ ಆಟಗಾರ್ತಿಯಾಗಿಯೂ ರಾಷ್ಟ್ರಮಟ್ಟದಲ್ಲಿ ಫೇಮಸ್ ಆಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ರಾಕುಲ್ ಮಾಡೆಲಿಂಗ್ ನತ್ತ ಮುಖ ಮಾಡಿದರು.
2009ರ ವೇಳೆಗೆ ಗಿಲ್ಲಿ ಕನ್ನಡ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ನಟಿ ರಾಕುಲ್ ಪ್ರೀತ್ ಅವರು ತೆಲುಗು, ಹಿಂದಿ ಮಾತ್ರವಲ್ಲದೇ ತಮಿಳು, ಕನ್ನಡ ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯ ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಆದರೇ ಯಾವುದೇ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಈ ಬಗ್ಗೆ ನಟಿ ರಾಕುಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಕೆಲವು ವಿಚಾರ ಗಳನ್ನು ರಿವೀಲ್ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಬಾಕ್ಸ್ ಆಫೀಸ್ ಸಂಖ್ಯೆ ಎಷ್ಟು ಪ್ರಮುಖವಾಗುತ್ತದೆ ಎಂದು ಪ್ರಶ್ನೆ ಕೇಳಿದ್ದು, ಈ ಬಗ್ಗೆ ಉತ್ತರ ನೀಡಿದ, ರಾಕುಲ್ ಜನರ ಬಳಿ ಹಣವಿಲ್ಲ. ಹಣವಿಲ್ಲದ ಕಾರಣ ಜನರು ತಿಂಗಳಿಗೆ ಒಂದು ಸಿನಿಮಾವನ್ನು ಮಾತ್ರ ಆಯ್ಕೆ ಮಾಡುತ್ತಾರೆ.
ಪ್ರತಿವಾರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕೆಲವೊಮ್ಮೆ ಎರಡು ಚಿತ್ರಗಳು ಬಿಡುಗಡೆಯಾಗುತ್ತವೆ. ಪ್ರತಿ ಚಿತ್ರಕ್ಕೂ ಪ್ರೇಕ್ಷಕರು ಬಂದು ನೋಡುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಇದು ದುಬಾರಿ ವಿಚಾರ. ಇದು ಕೇವಲ ಒಂದು ಅಂಶ ಅಷ್ಟೇ, ನಿಮ್ಮ ಚಿತ್ರವನ್ನು ನೋಡಿಲ್ಲ ಎಂದರೆ ಅದು ಕೆಟ್ಟ ಸಿನಿಮಾ ಎಂದು ಅರ್ಥವಲ್ಲ, ಆದರೆ ಚಲನಚಿತ್ರ ವೀಕ್ಷಣೆ ದುಬಾರಿ ವ್ಯವಹಾರವಾಗಿರುವುದರಿಂದ ಆಗಿರಬಹುದು.
ಪ್ರೇಕ್ಷಕರ ಪ್ರೀತಿಯೇ ಮುಖ್ಯ, ಬಾಕ್ಸ್ ಆಫೀಸ್ ಸಂಖ್ಯೆ ಅಥವಾ ಜಡ್ಜಮೆಂಟ್ ಅಲ್ಲ ಎಂದಿದ್ದಾರೆ. ಕಳೆದ ವರ್ಷ ವಷ್ಟೇ ಸಂದರ್ಶನವೊಂದರಲ್ಲಿ ರಾಕುಲ್ ಪ್ರೀತ್ ಸಿಂಗ್ ಕೆಲವು ಆಸಕ್ತಿದಾಯಕ ವಿಚಾರಗಳು ಹಾಗೂ ವೃತ್ತಿ ಜೀವನದ ಕುರಿತು ಮಾತನಾಡಿದ್ದರು. ಹಲವು ಬಾರಿ ಸಹ ನಟರು ಇಂಟಿಮೇಟ್ ದೃಶ್ಯಗಳು ಮತ್ತು ಚುಂಬನದ ದೃಶ್ಯಗಳಿಗೆ ನಾಚಿಕೆಪಡುತ್ತಾರೆ. ಚುಂಬನದ ದೃಶ್ಯದ ನಂತರವೂ ತನ್ನ ಮನಸ್ಸಿನಲ್ಲಿ ಸೆಕೆಂಡ್ ಗಳನ್ನು ಎಣಿಸುತ್ತಲೇ ಇರುತ್ತೇನೆ ಎನ್ನುವುದನ್ನು ಹೇಳಿದ್ದರು. ಬಹುಭಾಷ ನಟಿಯಾಗಿರುವ ರಾಕುಲ್ ಪ್ರೀತ್ ಅವರು ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.