ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಮ್ಮ ತಾಯಿಯನ್ನು ಕಳೆದುಕೊಂಡು ಮತ್ತು ನಂತರದಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಎದ್ದ ಬಿರುಗಾಳಿಯಿಂದ ಸುದ್ದಿಯಲ್ಲಿದ್ದರು. 2022ರಲ್ಲಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಮದುವೆ ಆಯಿತು. ಒಂದಷ್ಟು ತಿಂಗಳ ಕಾಲ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಆದರೆ ಶಾದಿ ಸಮಾಚಾರ ಬಹಿರಂಗ ಆದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿ ಸುದ್ದಿಯಲ್ಲಿದ್ದರು.
ಅದಲ್ಲದೇ ಈ ಹಿಂದೆಯಷ್ಟೇ ಸಾವಂತ್ ರವರು ಮಾನಸಿಕ ಮತ್ತು ದೈಹಿಕವಾಗಿ ಪತಿ ಆದಿಲ್ ಖಾನ್ ಹಿಂ-ಸೆ ನೀಡುತ್ತಿದ್ದ ಎಂದು ಆರೋಪಿಸಿದ್ದರು. ಅದಲ್ಲದೇ ಆದಿಲ್‌ಗಾಗಿ ಇಸ್ಲಾಂಗೆ ಮ-ತಾಂತರ ಮಾಡಿಕೊಂಡಿರುವೆ. ನಾನು ಇ-ಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದು ಆರೋಪಿಸಿದ್ದ ರಾಖಿ ಕೊನೆಗೆ ದೂ-ರು ಕೊಟ್ಟರು. ಇದರಿಂದ ಆದಿಲ್ ವಿರುದ್ಧ ಎಫ್-ಐ-ಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆದರೆ ಇದೀಗ ಬಾಲಿವುಡ್ ಹಾಟ್ ಬ್ಯೂಟಿ ರಾಖಿ ಸಾವಂತ್ ಉಡುಗೆಯ ವಿಚಾರದಲ್ಲಿ ಮುನ್ನಲೆಗೆ ಬಂದಿದ್ದಾರೆ. ರಾಖಿ ಸಾವಂತ್ ಧರಿಸಿದ ದುಬಾರಿ ಸ್ಯಾಂಡಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಸ್ಯಾಂಡಲ್ ಹಾಕಿಕೊಂಡಿದ್ದು, ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ರಾಖಿ ಸಾವಂತ್ ಅವರ ಸ್ಯಾಂಡಲ್ ನೋಡಿ ಕ್ಯಾಮರಾ ಮ್ಯಾನ್ಗಳು ವಾವ್ ರಾಖಿ ಮೇಡಂ ಅಷ್ಟು ದುಬಾರಿಯ ಸ್ಯಾಂಡಲ್ ಧರಿಸಿದ್ದೀರಿ ಎಂದು ಹೊಗಳಿದ್ದಾರೆ.
ಕಳೆದ ಹಿಂದೆಯಷ್ಟೇ ರಾಖಿ ಸಾವಂತ್ ದುಬೈನಲ್ಲಿ ನಟನೆ, ಡ್ಯಾನ್ಸ್ ಹೇಳಿಕೊಡುವ ಅಕಾಡೆಮಿ ಆರಂಭ ಮಾಡಿದ್ದಾರೆ. ಡಾನ್ಸ್ ಕ್ಲಾಸ್ ಸಲುವಾಗಿ ಆಗಾಗ ದುಬೈಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ದುಬೈನಿಂದ ವಾಪಸ್ ಬರುವಾಗ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಖಿ ಸಾವಂತ್ ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ನನಗೆ ಈ ಆಲೋಚನೆ ಬಂತು. ರಂಜಾನ್ ಎಂದರೆ ಕ್ಷಮಿಸುವ ಮಾಸ. ನಾನು ಆದಿಲ್ನನ್ನು ಕ್ಷಮಿಸದೇ ಇರಬಹುದು. ಆದರೆ ಅವನಿಗೆ ಜಾಮೀನು ಸಿಗಲಿ ಅಂತ ಪ್ರಾರ್ಥಿಸುತ್ತೇನೆ.
ನಾನು ಒಳ್ಳೆಯ ಪತ್ನಿ ಆಗಿದ್ದೆ. ಆದರೆ ಅವನು ನನ್ನ ಜೀವನ ಹಾಳು ಮಾಡಿದ. ನಾನು ಅಷ್ಟು ಪ್ರೀತಿ ಮಾಡಬಾರದಿತ್ತು. ಅವನಿಗೆ ಜಾಮೀನು ಸಿಗಲಿ. ನಾನು ಮಾಡಿದ ಆರೋಪಗಳು ಗಂಭೀರವಾಗಿವೆ. ಮೀಡಿಯಾ ಮೂಲಕ ಅವನಿಗೆ ನಾನು ಸಂದೇಶ ಕಳಿಸುತ್ತಿದ್ದೇನೆ. ಜಾಮೀನು ಸಿಕ್ಕ ಬಳಿಕ ನೀನು ಬೇರೆ ಯಾರ ಜೀವನವನ್ನೂ ಹಾಳು ಮಾಡಬೇಡ. ನೀನು ಬದಲಾಗಲು ಪ್ರಯತ್ನಿಸು. ಮದುವೆಯಾದರೆ ನನ್ನ ಜೊತೆ ನಡೆದುಕೊಂಡ ಹಾಗೆ ಆ ವ್ಯಕ್ತಿಯ ಜೊತೆ ನಡೆದುಕೊಳ್ಳಬೇಡ.
ಎಂದಿಗೂ ನಾನು ಅವನ ಬಳಿ ಮತ್ತೆ ಹೋಗುವುದಿಲ್ಲ. ಇನ್ಮುಂದೆ ನಾನು ಒಬ್ಬಳೇ ಜೀವನ ಕಳೆಯಬೇಕು. ಆತನಿಗೆ ಒಳ್ಳೆಯದಾಗಲಿ ಅಂತ ನಾನು ಪ್ರಾರ್ಥಿಸುತ್ತಿದ್ದೇನೆ’ ಎಂದಿದ್ದರು.ಇತ್ತೀಚೆಗಷ್ಟೇ ರಾಖಿ ಸಾವಂತ್ ಅವರು ತಮ್ಮ ಮನಸಿನ ಆಸೆಯನ್ನು ಹೊರಹಾಕಿದ್ದಾರೆ.ನಟಿ, ಉಮ್ರಾ ಭೇಟಿಗೆ ಉತ್ಸುಕರಾಗಿರುವುದಾಗಿ ಹೇಳಿದ್ದು, ‘ನನ್ನ ಖಾಲಿದ್ ಮಾಮು, ವಾಹಿದ್ ಭಾಯ್, ಜಾಮಾ ಮಸೀದಿಯಲ್ಲಿ ನನ್ನ ಅಫಿಡವಿಟ್ ಅನ್ನು ವೀಸಾಗಾಗಿ ತಯಾರಿ ಮಾಡುತ್ತಿದ್ದಾರೆ.
ಇದಾಗಲೇ ತಾವು ಇ-ಸ್ಲಾಂ ಧ-ರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿದ ನಟಿ, ಧರ್ಮ ಬದಲಾವಣೆಯ ಬಗ್ಗೆ ಅಫಿಡವಿಟ್ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಾನಿಗೆ ನಾನು ಉಮ್ರಾಗೆ ಹೋಗುವುದಕ್ಕೆ ಇಷ್ಟವಿದ್ದರೆ, ಖಂಡಿತವಾಗಿಯೂ ನನ್ನನ್ನು ಅಲ್ಲಿಗೆ ಕಳುಹಿಸುತ್ತಾನೆ ಎಂದಿದ್ದಾರೆ. ಉಮ್ರಾಗೆ ಹೋಗುವ ಕಾರಣ ಬಿಚ್ಚಿಟ್ಟಿದ್ದು, “ಹಳೆಯ ನೋವುಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಬಯಸುತ್ತೇನೆ, ಅದಕ್ಕಾಗಿ ಹೋಗುವುದಾಗಿ ಹೇಳಿದ್ದಾರೆ. ನನ್ನ ಪಾಪಗಳು ತೊಳೆದು ಹೋಗುವಂತೆ ರೋಜಾವನ್ನು ಸರಿಯಾಗಿ ಮಾಡುತ್ತೇನೆ.
ರಂಜಾನ್ ಸಮಯದಲ್ಲಿ ನಾನು ಉಮ್ರಾಗೆ ಹೋದರೆ, ನನ್ನ ಅದೃಷ್ಟ ಬದಲಾಗುತ್ತದೆ ಎಂದಿದ್ದಾರೆ. ‘ನಾನು ಮೊದಲಿನಂತೆ ಸಂತೋಷವಾಗಿರಲ ಬಯಸುತ್ತೇನೆ, ನಾನು ಇನ್ನು ಮುಂದೆ ಅಳಲು ಬಯಸುವುದಿಲ್ಲ. ಜೀವನವು ಸುಂದರವಾಗಿರುವುದರಿಂದ ನಾನು ಮತ್ತೆ ನನ್ನ ಕಾಲುಗಳ ಮೇಲೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಬಿಟ್ಟು ಹೋದವರ ಬಗ್ಗೆ ಅಳುವ ಅಗತ್ಯವಿಲ್ಲ. ಜೀವನವನ್ನು ನಾನು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ’ ಎಂದು ರಾಖಿ ಹೇಳಿದ್ದಾರೆ.
ಅಷ್ಟೇ ಅಲ್ಲದೇ, ರಂಜಾನ್ಗೆ ಭಾರಿ ಸಿದ್ಧತೆಯನ್ನೂ ರಾಖಿ ಮಾಡಿಕೊಂಡಿದ್ದಾರೆ.ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ. ಇಡೀ ದಿನ ಹಸಿವಿನಿಂದ ಇರಬೇಕು ಮತ್ತು ನಮಾಜ್ ಮಾಡಬೇಕಾಗುತ್ತದೆ, ಆದ್ದರಿಂದ ಜಿಮ್ ಗೆ ಹೋಗುವುದಿಲ್ಲ” ಎಂದಿದ್ದಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ.