Rajasthan sirohi son in law : ಭಾರತೀಯರು ಪ್ರತಿಯೊಂದು ಸಂಬಂಧಗಳಿಗೂ ಮಹತ್ವ ನೀಡುತ್ತಾರೆ. ತಮ್ಮ ಗುರು ಹಿರಿಯರು ಗೌರವದಿಂದ ಕಾಣುವ ಭಾರತೀಯರು ಯಾವುದೇ ಸಂಬಂಧವನ್ನು ಹಾಳಾಗದಂತೆ ಕಾಪಾಡಿಕೊಂಡು ಹೋಗುತ್ತೇವೆ. ಕೆಲವೊಮ್ಮೆ ಸಂಬಂಧಗಳಲ್ಲಿ ಸರಿ ತಪ್ಪು, ವಾದಗಳೂ ನಡೆದರೂ ಮಾತಿಗಿಂತ ಸಂಬಂಧ ಮುಖ್ಯ ಎಂದು ನಂಬುತ್ತೇವೆ ಕೂಡ.
ಹೀಗಾಗಿ ಮನುಷ್ಯನ ಜೀವನದಲ್ಲಿ ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವು ಬಹಳ ಮುಖ್ಯವೇ ಆಗಿರುತ್ತದೆ. ಆದರೆ ಇತ್ತೀಚೆಗಿನ ದಿನಗಳ ಕೆಲವರು ಸಂಬಂಧಗಳಿಗೆ ಮಹತ್ವ ನೀಡುತ್ತಿಲ್ಲ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದ್ದು, 27 ವರ್ಷದ ಅಳಿಯ 40 ವರ್ಷದ ಅತ್ತೆಯನ್ನು ಪ್ರೀತಿಸಿದ್ದಾನೆ. ಆಕೆಯ ಜೊತೆಗೆ ಓಡಿ ಹೋಗಿದ್ದಾನೆ. ಹೌದು, ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿದ್ದು, ನಾಲ್ಕು ಮಕ್ಕಳ ವಿವಾಹಿತ ಅತ್ತೆ..
ತನ್ನ ಅಳಿಯನೊಂದಿಗೆ ಓಡಿಹೋಗಿರುವ ನಂಬಲು ಸಾಧ್ಯವಾಗದ ಘಟನೆಯೂ ನಡೆದಿದೆ. ಅಂದಹಾಗೆ, ಅತ್ತೆಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಕ್ಕಳಿದ್ದು, ಈಗಾಗಲೇ ನಾಲ್ಕು ಮಕ್ಕಳೂ ಮದುವೆಯಾಗಿದ್ದಾರೆ. ಇನ್ನು ಈ ಅಳಿಯನಿಗೆ ಮೂವರು ಮಕ್ಕಳಿದ್ದಾರೆ. ಅತ್ತೆ ಕಂಡರೆ ನನಗೆ ಬಹಳ ಪ್ರೀತಿ ಎಂದು ವ್ಯಕ್ತಿ ಮಾವನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಅತ್ತೆಯೊಂದಿಗೆ ಪರಾರಿಯಾಗಿದ್ದಾನೆ.
ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಪ್ರಿಯತಮನೊಂದಿಗೆ ಓಡಿ ಹೋಗಿದ್ದ ಗ್ರಾಮ ಪಂಚಾಯತ್ ಸದಸ್ಯೆ ಇದೀಗ ವಾಪಸ್ ಬಂದು ಠಾಣೆಯಲ್ಲಿ ಕೊಟ್ಟ ಹೇಳಿಕೆ ನೋಡಿ ದಿಗ್ಭ್ರಮೆಗೊಂಡ ಪೊಲೀಸರು!!!
ಅತ್ತೆಯನನ್ನು ಅಳಿಯನೇ ಅಪಹರಿಸಿದ್ದಾನೆ ಎಂದು ಸಂಬಂಧಿಕರು ದೂರು ನೀಡಿದ್ದಾರೆ.ಸಿರೋಹಿ ಪೊಲೀಸರೂ ಈ ಬಗ್ಗೆ ಮಾಹಿತಿ ನೀಡಿದ್ದು, ಅತ್ತೆ ಮತ್ತು ಅಳಿಯನ ನಡುವೆ ಈ ಹಿಂದೆಯೇ ಪ್ರೀತಿಯೂ ಚಿಗುರಿತ್ತು. ಇಬ್ಬರೂ ಸರಿಯಾದ ಸಮಯಕ್ಕಾಗಿಯೇ ಕಾಯುತ್ತಿದ್ದರು. ಓಡಿ ಹೋಗುವ ಮುನ್ನ ಅಳಿಯ, ಮಾವನಿಗೆ ಕಂಠಪೂರ್ತಿ ಕುಡಿಸಿರುವುದು ಕೂಡ ಬೆಳಕಿಗೆ ಬಂದಿದೆ. ಮಾವ ಕುಡಿದು ಬಂದ ನಂತರ ಅತ್ತೆ ಮತ್ತು ಅಳಿಯ ಮನೆಯಿಂದ ಓಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆಯ ನಂತರ ನೇಕಾರಂ ಪೌವಾ ಜೋಗಿ ಅಣದಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ, ಮಾಮಾವಲಿ ನಿವಾಸಿ ನಾರಾಯಣ್ ಮತ್ತು ನನ್ನ ಮಗಳು ರೂಪ ಜೋಗಿ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ನಂತರ ಮಗಳು ಮತ್ತು ಅಳಿಯ ನಾರಾಯಣ್ ಬರುತ್ತಿದ್ದರು. ನಾರಾಯಣ್ ಅವರು 30 ಡಿಸೆಂಬರ್ 2022ರಂದು ಸಿಯಾಕಾರಕ್ಕೆ ಬಂದಿದ್ದರು. ಅದೇ ಸಮಯದಲ್ಲಿ, ನಾನು ಮತ್ತು ಅಳಿಯ ನಾರಾಯಣ್ ಇಬ್ಬರೂ ಮದ್ಯದ ಪಾರ್ಟಿ ಮಾಡಿದೆವು..
ಅದೇ ಮದ್ಯದ ಪಾರ್ಟಿಯ ಲಾಭವನ್ನು ಪಡೆದುಕೊಂಡು, ಅಳಿಯ ಹೆಂಡತಿಯ ಜೊತೆ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಅಳಿಯನ ಜೊತೆಗೆ ಓಡಿ ಹೋದ ಪತಿಗೆ ಡಿಸೆಂಬರ್ 30ರಂದು ಸಂಜೆ 4 ಗಂಟೆಗೆ ಎಚ್ಚರವಾಗಿತ್ತು. ಈ ವೇಳೆಯಲ್ಲಿ ನಾರಾಯಣ್ ಮತ್ತು ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಕೊನೆಗೆ ರಮೇಶ ನೀಡಿದ ದೂರಿನ ಮೇರೆಗೆ ಅನದಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ತಾಯಿ ಸಮನಾದ ಅತ್ತೆ ಜೊತೆಗೆ ಅಳಿಯನು ಓಡಿ ಹೋದದ್ದು ನಿಜಕ್ಕೂ ವಿಪರ್ಯಾಸ.