Rajasthan madeena and husband : ಅಕ್ರಮ ಸಂಬಂಧವನ್ನು ಹೊಂದಿದ್ದ ಸಂಸಾರವನ್ನು ಹಾಳು ಮಾಡಿಕೊಂಡ ಜನರು ನಮ್ಮ ಸುತ್ತ ಮುತ್ತಲಿಲ್ಲಿಯೇ ಇದ್ದಾರೆ. ಕೆಲವೊಮ್ಮೆ ಇಂತಹ ಘಟನೆಯನ್ನು ಕೇಳಿದಾಗ ಶಾಕ್ ಆಗುತ್ತದೆ. ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದ ಮಹಿಳೆಯೊಬ್ಬರು ಪತಿಯ ಮೇಲೆ ಕೋಪಗೊಂಡು ಮಾಡಿದ್ದೇನು ನೋಡಿ.. ನಿಜಕ್ಕೂ ನೀವು ಬೆರಗಾಗೋದು ಖಂಡಿತ.
ಬಹಳಷ್ಟು ಸಮಯದಿಂದ ಈ ಬಗ್ಗೆ ಯೋಚನೆ ಮಾಡಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಳು. ಪತಿ ತನ್ನ ಎದುರೇ ಇನ್ನೊಬ್ಬ ಮಹಿಳೆಯೊಂದಿಗೆ ಅ ಶ್ಲೀಲ ಚಾಟಿಂಗ್ ಮಾಡುತ್ತಿದ್ದ. ಪತಿಯ ಚೇಷ್ಟೆಯಿಂದ ಬೇಸತ್ತ ಮಹಿಳೆ ಆತನ ಪ್ರಾಣ ತೆಗೆಯಲು ಯೋಜನೆ ರೂಪಿಸಿದ್ದ ಘಟನೆಯೂ ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿ ನಡೆದಿದೆ. ಅಲ್ಲಿನ ನಿವಾಸಿಯಾಗಿರುವ ಮದೀನಾ ಎಂಬಾಕೆ ತನ್ನ ಪತಿಯ ಕಥೆ ಮುಗಿಸಿ ಬಳಿಕ ಸಿಕ್ಕಿಬೀಳಬಾರದು ಆತ್ಮ-ಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಳು.
ಮಾಧ್ಯಮ ವರದಿಗಳ ಪ್ರಕಾರ, ಮದೀನಾ 6 ವರ್ಷಗಳ ಹಿಂದೆ ಮಕ್ಸೂದ್ ಎಂಬುವವರನ್ನು ಮದುವೆಯಾಗಿದ್ದಳು. ಇಬ್ಬರಿಗೂ ಮಕ್ಕಳಾಗಿರಲಿಲ್ಲ, ಇವರ ಸಂಸಾರಕ್ಕೆ ಮಕ್ಕಳಿಲ್ಲ ಎನ್ನುವುದೇ ತೊಂದರೆಯಾಗಿತ್ತು. ಮಕ್ಸೂದ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಆರಂಭಿಸಿದ್ದನು. ಇಷ್ಟು ಮಾತ್ರವಲ್ಲದೆ ಮದೀನಾ ಮುಂದೆ ಆಕೆಯ ಪತಿ ಬೇರೆ ಮಹಿಳೆಯೊಂದಿಗೆ ಅಸಭ್ಯವಾಗಿ ಚಾಟ್ ಮಾಡಿ ವಿಡಿಯೋ ಕರೆ ಮಾಡುತ್ತಿದ್ದನು.
ಈ ವಿಷಯ ಮದೀನಾಗೆ ಕೆರಳಿಸಿದ್ದು, ಅವಳು ಮಕ್ಸೂದ್ನನ್ನು ಕೊ- ಲ್ಲಲು ಪ್ಲಾನ್ ಮಾಡಿದ್ದಳು. ಕಳೆದ ವರ್ಷ ಜುಲೈ 2 ರಂದು ಮದೀನಾ ತನ್ನ ಅತ್ತೆ ಮತ್ತು ಪತಿ ಮಕ್ಸೂದ್ ಜೊತೆ ಮದುವೆ ಸಮಾರಂಭಕ್ಕೆ ಹೋಗಿದ್ದಳು. ಮಕ್ಸೂದ್ ಸಮಾರಂಭದಿಂದ ಬೇಗನೇ ಮನೆಗೆ ಬಂದಿದ್ದನು. ಆದರೆ ಮದೀನಾ ಒಂದು ಗಂಟೆಯ ಮನೆಗೆ ಬಂದಿದ್ದಳು. ಪೊಲೀಸರ ಪ್ರಕಾರ, ಮಕ್ಸೂದ್ ಸುಮಾರು 2 ಗಂಟೆಗೆ ಮರಳಿದ್ದರು.
ಆದರೆ ಮದೀನಾ 3 ಗಂಟೆಗೆ ಮರಳಿದ್ದಳು. ಮದೀನಾ ಮನೆಗೆ ಬಂದಾಗ ಮಕ್ಸೂದ್ ಮಲಗಿದ್ದ. ಮದೀನಾಳು ಆ ಅವಕಾಶವನ್ನು ಬಳಸಿಕೊಂಡು ಮದೀನಾ ಮಕ್ಸೂದ್‌ನನ್ನು ಸ್ಕಾರ್ಫ್ ನಿಂದ ಕ ತ್ತು ಹಿಸುಕಿದಳು. ಇದಾದ ಬಳಿಕ ಮೊಬೈಲ್ ಚಾರ್ಜರ್ ನ ವೈರ್ ಕೂಡ ಬಳಸಿದ್ದಳು.ಪತಿಯನ್ನು ಕೊಂ-ದ ಬಳಿಕ ಆ ಶವವನ್ನು ನೇಣು ಬಿಗಿದು ಆತ್ಮ-ಹತ್ಯೆ ಎನ್ನುವಂತೆ ಬಿಂಬಿಸಿದ್ದಳು. ಕೊನೆಗೆ ಕುಟುಂಬ ಸದಸ್ಯರು ಮಕ್ಸೂದ್ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ್ದರು.
ಆದರೆ ಮದೀನಾಳ ಅತ್ತೆಗೆ ಅನುಮಾನ ಬಂದು ಕಟ್ಟುನಿಟ್ಟಾಗಿ ವಿಚಾರಿಸಿದಾಗ ಮದೀನಾ ಸತ್ಯ ಬಿಚ್ಚಿಟ್ಟಿದ್ದಳು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪತಿ ತನ್ನನ್ನೂ ಥಳಿಸುತ್ತಿದ್ದರು, ಇದರಿಂದ ಬೇಸತ್ತಿದ್ದೇನೆ ಎಂದು ಮದೀನಾ ಪೊಲೀಸರಿಗೆ ತಿಳಿಸಿದ್ದಳು. ಒಟ್ಟಿನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಜೀವ ತೆಗೆಯುವ ಹಂತಕ್ಕೆ ಮದೀನಾ ಮುಂದುವರೆದು ಪೊಲೀಸರ ಅತಿಥಿಯಾಗಿದ್ದಳು.