ಭಾರತೀಯರು ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ. ಹೌದು, ಶಿಕ್ಷಕರು ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ದಾರಿ ತೋರುವ ಗುರುವಿನ ಬಗ್ಗೆ ಮಕ್ಕಳು ಅಷ್ಟೇ ಗೌರವ ಹೊಂದಿರುತ್ತಾರೆ. ಚಿಕ್ಕ ಮಕ್ಕಳಂತೂ ಶಿಕ್ಷಕರ ಹೊರತಾಗಿ ಯಾರ ಮಾತನ್ನು ಕೇಳಲು ಸಿದ್ಧರಿರುವುದಿಲ್ಲ. ಅಷ್ಟರ ಮಟ್ಟಿಗೆ ಶಿಕ್ಷಕರ ಪ್ರಭಾವ ಮಕ್ಕಳ ಬದುಕಿನಲ್ಲಾಗುತ್ತದೆ.
ಈ ಮಕ್ಕಳ ಭವಿಷ್ಯ ರೂಪುಗೊಳ್ಳಲು ಶಿಕ್ಷಕರು ಮುಖ್ಯವಾಗಿ ಬೇಕಾಗುತ್ತದೆ. ಉದ್ಯೋಗ ಪಡೆದುಕೊಂಡು ಉತ್ತಮವಾಗಿ ಬದುಕಲು ಶಿಕ್ಷಕರು ಬಹಳ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಶಿಕ್ಷಕ ಶಿಕ್ಷಕಿಯರಿಗೂ ವೈಯುಕ್ತಿಕ ಬದುಕು ಎನ್ನುವುದು ಇದೆ. ಕೆಲವೊಮ್ಮೆ ಪಾಠ ಹೇಳಿಕೊಡುವ ಗುರುಗಳ ಬದುಕಿನಲ್ಲಿ ಆಗಬಾರದ ದುರಂತಗಳು ನಡೆಯುತ್ತವೆ. ಹೀಗಾಗಿ ಬದುಕಿನಲ್ಲಿ ಕೆಲವು ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿಯೇ ನಿಭಾಯಿಸಿಕೊಂಡು ಹೋಗಬೇಕು.
ಆದರೆ ಇಲ್ಲೊಬ್ಬ ಶಿಕ್ಷಕಿಯ ಜೀವ ತೆಗೆದ ಘಟನೆ ಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಚೆನ್ನೈನಿಂದ 200 ಕಿಮೀ ದೂರದಲ್ಲಿರುವ ತಮಿಳುನಾಡಿನ ಕಡಲೂರು ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 23 ವರ್ಷದ ಶಿಕ್ಷಕಿಯ ಕಥೆಯನ್ನು ವ್ಯಕ್ತಿಯೊಬ್ಬರು ಮುಗಿಸಿದ್ದರು. ಗಾಯತ್ರಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಎಸ್ ರಮ್ಯಾ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಬೋಧಿಸುತ್ತಿದ್ದರು.
ತನ್ನ ತರಗತಿಯಲ್ಲಿ ಒಬ್ಬಳೇ ಇದ್ದಾಗ ಶಂ-ಕಿತ ರಾಜಶೇಖರ್ ಆಕೆಯನ್ನು ಟಾರ್ಗೆಟ್ ಮಾಡಿದ್ದನು. ಅದಲ್ಲದೇ “ಆಕೆಯ ಮನೆ ಹತ್ತಿರದಲ್ಲಿರುವುದರಿಂದ ಅವಳು ಶಾಲೆಗೆ ಬೇಗನೆ ಬರುತ್ತಿದ್ದಳು. ಇಬ್ಬರ ನಡುವೆ ಜಗಳ ನಡೆದಿದ್ದು, ಅವನು ಅವಳನ್ನು ಕೊಂ-ದಿದ್ದಾನೆ” ಎಂದು ಪೊಲೀಸರು ತಿಳಿಸಿದ್ದರು. ಅಂದಹಾಗೆ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದೇ ಹ-ಲ್ಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದರು.
ಈ ಶಂ-ಕಿತ ರಾಜಶೇಖರ್‌ಗೆ ಕಾಲೇಜು ದಿನಗಳಿಂದಲೂ ಶಿಕ್ಷಕಿಯ ಪರಿಚಯವಿತ್ತು. ಆರು ತಿಂಗಳ ಹಿಂದೆ ನಿಮ್ಮ ಮಗಳನ್ನು ತನ್ನೊಂದಿಗೆ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರನ್ನು ಕೇಳಿದ್ದನು. ಆದರೆ ಈ ಶಿಕ್ಷಕಿಯ ಹೆತ್ತವರು ಇದನ್ನು ನಿರಾಕರಿಸಿದ್ದರು. ಇದೇ ಕಾರಣದಿಂದಲೇ ರಾಜಶೇಖರ್ ಈ ರೀತಿಯ ಕೃ-ತ್ಯ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ಮಾಹಿತಿ ನೀಡಿದ್ದರು.
ಅದಲ್ಲದೇ, ರಾಜಶೇಖರ್ ಆ-ತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಗೆ ಸಂದೇಶ ನೀಡಿದ್ದನು ಎನ್ನುವುದು ಈ ಘಟನೆಯ ಬಳಿಕ ಬಹಿರಂಗವಾಗಿತ್ತು. ಘಟನೆಯ ಬಳಿಕ ಶಿಕ್ಷಕಿಯ ಶ-ವವನ್ನು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಒಟ್ಟಿನಲ್ಲಿ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ರಾಜಶೇಖರ್ ಯುವತಿಯ ಜೀವ ತೆಗೆದದ್ದು ನಿಜಕ್ಕೂ ವಿಪರ್ಯಾಸ.