ನಟಿ ಕಮ್ ಮಾಡೆಲ್ ರಾಗಿಣಿ ಪ್ರಜ್ವಲ್ ಹಾಗೂ ತಂಗಿಯ ಅಪರೂಪದ ಫೋಟೋ ವೈರಲ್

ಸಿನಿ ಲೋಕವನ್ನು ಹೀಗೆ ಎಂದು ಬಣ್ಣಿಸಲು ಅಸಾಧ್ಯ. ಹೌದು, ಈ ಲೋಕದಲ್ಲಿ ಒಳ್ಳೆಯದು ಇದೆ, ಕೆಟ್ಟದ್ದು ಇದೆ. ಅದೇನೇ ಇದ್ದರೂ ಬದುಕಿಗಾಗಿ ಬಣ್ಣದ ಬದುಕನ್ನು ನಂಬಿಕೊಂಡವರು ಹಲವರು ಎನ್ನಬಹುದು. ಕೆಲವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಸೋಶಿಯಲ್ ಮೀಡಿಯಾಗಳು.

ಹೌದು, ನಟ ನಟಿಯರು ತಮ್ಮ ಬದುಕಿನ ಕುರಿತು ಅಪ್ಡೇಟ್ ಕೊಡುವ ಸೆಲೆಬ್ರಿಟಿಗಳು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ನಟಿಯರು ವೈಯಕ್ತಿಕ ಬದುಕಿನ ಬಗ್ಗೆ ಏನು ಅಪ್ಡೇಟ್ ಕೊಡುತ್ತಾರೆ ಎಂದು ಕಾಯುವುದಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವವರ ಪೈಕಿ ನಟ ಪ್ರಜ್ವಲ್ ದೇವರಾಜ್ ಅವರ ಮಡದಿ ರಾಗಿಣಿ ಪ್ರಜ್ವಲ್ (Ragini Prajwal) ಕೂಡ ಒಬ್ಬರು.

ನಟಿ ಕಮ್ ಡ್ಯಾನ್ಸರ್ ರಾಗಿಣಿ ಪ್ರಜ್ವಲ್ (Ragini Prajwal) ಎಲ್ಲರಿಗೂ ಕೂಡ ಚಿರಪರಿಚಿತವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು, ಜಿಮ್, ಡ್ಯಾನ್ಸ್ ಹಾಗೂ ಔಟಿಂಗ್ ಎಂದು ಅಪ್ಡೇಟ್ ನೀಡುವ ಈ ಬೆಡಗಿಯ ವರ್ಕ್ ಔಟ್ ಹಾಗೂ ಡಾನ್ಸ್ ವಿಡಿಯೋಗಳು ವೈರ್ ಆಗುವುದಿದೆ. ಫಿಟ್ನೆಸ್ (Fitness) ಕುರಿತು ತಿಳಿದುಕೊಂಡಿದ್ದು, ತಮ್ಮ ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುವ ಮೂಲಕ ಬ್ಯುಸಿಯಾಗಿರುತ್ತಾರೆ.ಇನ್ನು ನಟಿ ಕಮ್ ಡ್ಯಾನ್ಸರ್ ಗೆ ನಟಿ ರಾಗಿಣಿ ಪ್ರಜ್ವಲ್ ಅವರಿಗೆ ಮುದ್ದಾದ ತಂಗಿಯಿರುವುದು ಗೊತ್ತೆ ಇದೆ. ತಂಗಿಯ ಜೊತೆಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮುದ್ದಿನ ತಂಗಿಯ ಜೊತೆಗೆ ತೆಗೆದ ಫೋಟೋವೊಂದು ವೈರಲ್ ಆಗಿವೆ.

ಈ ಫೋಟೋದಲ್ಲಿ ನೋಡಿದರೆ ರಾಗಿಣಿ ಪ್ರಜ್ವಲ್ ಅವರ ಅರಶಿಣ ಶಾಸ್ತ್ರದ ಸಮಯದಲ್ಲಿ ತೆಗೆದ ಫೋಟೋ ಎಂದು ಗೊತ್ತಾಗುತ್ತದೆ. ರಾಗಿಣಿ ಪ್ರಜ್ವಲ್ ಕೆಂಪು ಬಣ್ಣದ ಸೀರೆಯುಟ್ಟಿದ್ದು, ಅವರ ಕೆನ್ನೆ ತುಂಬಾ ಅರಶಿಣವಿದ್ದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇತ್ತ ರಾಗಿಣಿಯವರ ತಂಗಿಯೂ ಅಕ್ಕನ ಪಕ್ಕ ನಿಂತುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿವೆ. ನಟಿ ರಾಗಿಣಿ ಪ್ರಜ್ವಲ್ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಿಸಿದ್ದ `ಲಾ’ (Laa) ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.

ತದನಂತರದಲ್ಲಿ `ರಿ‍ಷಭಪ್ರಿಯ’ (Rishabhapriya) ಚಿತ್ರದಲ್ಲಿ ನಟಿಸುವ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು. ಸದ್ಯಕ್ಕೆ ಶಾನುಭೋಗರ ಮಗಳು (Shanubhogara Magalu) ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ. ನಿರ್ದೇಶಕ ಕೋಡ್ಲು ರಾಮಕೃಷ್ಣ (Kodlu Ramakrishna) ಅವರು ಶಾನುಭೋಗರ ಮಗಳು ಸಿನಿಮಾಗೆ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನಟಿ ರಾಗಿಣಿ ಪ್ರಜ್ವಲ್ ಅವರು ಬಂದೂಕು ಹಿಡಿದು ನಿಂತಿರುವ ಫೋಟೋಗಳು ವೈರಲ್ ಆಗಿವೆ. ನಟಿ ರಾಗಿಣಿ ಪ್ರಜ್ವಲ್ ಅವರು ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಬಗ್ಗೆ ಎಲ್ಲರಿಗೂ ಕೂಡ ಬಹಳ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *