ಕರ್ನಾಟಕದ ಜನತೆಗೆ ಶೇವಿ ಶೇವಿ ತುಪ್ಪ ತಿನ್ನಿಸಿ, ದುಬೈನಲ್ಲಿ ಖರ್ಜೂರ ತಿನ್ನುತ್ತಿರುವ ಈ ರಘುವೀರ್ ದೇಸಾಯಿ ಹಿನ್ನಲೆ ಏನು ಗೊತ್ತಾ? ಗೊತ್ತಾದ್ರೆ ನಿಂತ ಜಾಗದಲ್ಲೇ ನೀರು ಕುಡಿತೀರಾ ನೋಡಿ!!

ಸ್ನೇಹಿತರೆ ಸೋಶಿಯಲ್ ಮೀಡಿಯಾಗಳಂತಹ ಜಾಲದಿಂದಾಗಿ ಸಾಕಷ್ಟು ಪ್ರತಿಭೆಗಳು ಕೋಟ್ಯಾಂತರ ಜನರ ಮಧ್ಯೆ ಗುರುತಿಸಿಕೊಳ್ಳುವಂಥಾಗಿದೆ. ಕಳೆದ ಎರಡು ಮೂರು ವರ್ಷಗಳ ಹಿಂದೆ ಶುರುವಾದ ಈ ಟಿಕ್ ಟಾಕ್(tiktok) ಡಬ್ಸ್ಮ್ಯಾಶ್(dub smash) ಹಾಗೂ ರೀಲ್ಸ್ ವಿಡಿಯೋಗಳಿಂದ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವಂತಹ ಸಾಕಷ್ಟು ಕಲಾವಿದರು ಇಂದು ಸ್ಟಾರ್ ಹೀರೋಗಳಿರುವಂತಹ ಸಿನಿಮಾಗಳಲ್ಲಿ ಪೋಷಕ ನಟನಾಗಿ ಸಹ ನಟರಾಗಿ ಕಾಣಿಸಿಕೊಳ್ಳುವಂತಹ ಅವಕಾಶ ಪಡೆದಿದ್ದಾರೆ.

ಇನ್ನು ಕೆಲವರಂತೂ ತಮ್ಮ ಸಿನಿಮಾದ ಸ್ಟಾರ್ ಹೀರೋ ಅಥವಾ ಹೀರೋಯಿನ್ ಆಗಿ ಗುರುತಿಸಿಕೊಂಡರೆ ಹಲವರು ಕಿರುತೆರೆ ಲೋಕದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಹೀಗೆ ಪ್ರತಿದಿನ ತಮ್ಮೊಳಗಿರುವಂತಹ ಅಪಾರವಾದ ಪ್ರತಿಭೆಯನ್ನು ಇಂತಹ ಜಾಲಗಳನ್ನು ಉಪಯೋಗಿಸಿ ಅನಾವರಣಗೊಳಿಸುತ್ತಿರುವಂತಹ ಕಲಾವಿದರು ವೈರಲ್ ಆಗುತ್ತಲೇ ಇರುತ್ತಾರೆ. ಸದ್ಯದ ಟ್ರೆಂಡ್ ನಲ್ಲಿ ಇರುವಂತಹ ಹಾಡುಗಳಿಗೆ ರೀಲ್ಸ್ ವಿಡಿಯೋ ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಅತಿ ಹೆಚ್ಚಿನ ಫಾಲೋವರ್ಸ್ಗಳನ್ನು ಗಳಿಸುತ್ತಿದ್ದಾರೆ.

ಇನ್ನು ಹಲವರಂತೂ ತಮ್ಮೊಳಗೆ ಇರುವಂತಹ ನಕಾರಾತ್ಮಕತೆಯನ್ನೇ ಜನರ ಮುಂದೆ ಬಿಚ್ಚಿಡುತ್ತಾ ತಮ್ಮದೇ ಶೈಲಿಯಲ್ಲಿ ನೆಟ್ಟಿಗರನ್ನು ಆಕರ್ಷಿಸ ತೊಡಗಿದ್ದಾರೆ. ಹೌದು ಗೆಳೆಯರೇ ಯಾವುದೇ ಶ್ರುತಿ ಚರಣ ಪಲ್ಲವಿ ಇಲ್ಲದೆ ಸಾವಿರಾರು ಹಾಡನ್ನು ಹಾಡಿ ಕಾಫಿ ನಾಡು ಚಂದು(chandu) ಇದೀಗ ಜನರ ಮನಸ್ಸನ್ನು ಗೆಲ್ಲುವ ಮುಖಾಂತರ ಅತಿ ಹೆಚ್ಚಿನ ಫಾಲೋವರ್ಸ್ ಗಳನ್ನು ಗಿಟ್ಟಿಸಿಕೊಂಡರೆ ಇತ್ತ. ದೀಪಕ್ ಗೌಡ (Deepak Gowda)ತಾವು ಪ್ರತಿನಿತ್ಯ ಮಾಡುವಂತಹ ಚಟುವಟಿಕೆಗಳನ್ನೆಲ್ಲ ವಿಡಿಯೋ ಮಾಡಿ ಅದರಲ್ಲೇ ತಮ್ಮ ಹಾಸ್ಯ ಪ್ರತಿಭೆ ಹಾಗೂ ಡ್ಯಾನ್ಸ್ ಕಲೆಯನ್ನು ಹೊರ ಹಾಕುತ್ತಿರುತ್ತಾರೆ.

ಅದರಂತೀಗ ಮತ್ತೊರ್ವ ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಹುಟ್ಟಿಕೊಂಡಿದ್ದು, ತಮ್ಮ ರಘುವೀರ್ (Raghuveer) ಎಂಬ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಕರ್ಜೂರದ ಗಿಡದ ಬಳಿ ಹೋಗಿ ಅದರ ಹಣ್ಣನ್ನು ಸವಿಯುತ್ತಾ ರುಚಿಯನ್ನು ವರ್ಣಿಸಿದ್ದಾರೆ. ಹೌದು ಗೆಳೆಯರೇ ರಘುವೀರ್ ದೇಸಾಯಿ(Raghveer Desai) ಎಂಬಾತ ಕಳೆದ ಕೆಲವು ದಿನಗಳ ಇನ್ನಷ್ಟು ‘ಕರ್ಜೂರ ಎಷ್ಟು ಸಿಹಿ ಸಿಹಿಯಾಗಿದೆ ಗಾಯ್ಸ್ ಸೂಪರ್ ಗಾಯ್ಸ್ ನೈಸ್ ಕರ್ಜೂರ ಗಾಯ್ಸ್’ ಎಂಬ ಕ್ಯಾಪ್ಶನ್ ಬರೆದು ವಿಡಿಯೋ ಶೇರ್ ಮಾಡಿದ್ದಾರೆ.

ಈ ವಿಡಿಯೋ ವೈರಲ್(viral) ಆಗುತ್ತಾ ಇದ್ದ ಹಾಗೆ ಈತನ ಮಾತುಗಾರಿಕೆಯ ಶೈಲಿಯನ್ನು ಹಾಡಿಕೊಳ್ಳುತ್ತಾ ಆತನೊಳಗಿರುವಂತಹ ಪ್ರತಿಭೆಯನ್ನು ತಮ್ಮದೇ ದಾಟಿಯಲ್ಲಿ ವರ್ಣಿಸುತ್ತಿದ್ದಾರೆ.

Leave a Reply

Your email address will not be published. Required fields are marked *