ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ ಧಾರಾವಾಹಿ ಖ್ಯಾತಿಯ ನಟಿ ರಾಧಿಕಾ ರಾವ್ ಅವರ ಬೇಬಿ ಬಂಪ್ ಫೋಟೋ ಶೂಟ್ ಹೇಗಿತ್ತು ಗೊತ್ತಾ?

ಅಪರೂಪದ ಫೋಟೋಗಳು ವೈರಲ್ ಕನ್ನಡ ಕಿರುತೆರೆಯ ನಟ ನಟಿಯರು ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ಕಡೆಗೂ ಹೆಚ್ಚು ಗಮನ ಕೊಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ನಟಿಯರು ಮದುವೆ, ಸಂಸಾರ ಎಂದು ಬ್ಯುಸಿಯಾಗಿದ್ದಾರೆ. ಈ ಸಾಲಿಗೆ ಕಿರುತೆರೆ ನಟಿ ರಾಧಿಕಾ ರಾವ್ (Radhika Rao) ಕೂಡ ಸೇರಿಕೊಳ್ಳುತ್ತಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟನಾ ಬದುಕಿಗೆ ಸ್ವಲ್ಪ ಬ್ರೇಕ್ ನೀಡಿ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದರು.

ಆದರೆ ಇತ್ತೀಚೆಗಷ್ಟೇ ರಾಧಾ ಕಲ್ಯಾಣ (Radha Kalyana) ಹಾಗೂ ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ (Manglore Hudgi Hubli Hudga) ಸೀರಿಯಲ್ ಖ್ಯಾತಿಯ ನಟಿ ರಾಧಿಕಾ ರಾವ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಹೀಗಾಗಿ ನಟಿ ರಾಧಿಕಾ ರಾವ್ ಮುದ್ದಾದ ಬೇಬಿ ಬಂಪ್ ಫೋಟೋಶೂಟ್ (Baby Bump Photoshoot) ಮಾಡಿಸಿಕೊಂಡಿದ್ದರು. ಕೆಂಪು ಬಣ್ಣದ ಲಾಂಗ್ ಲೆಹೆಂಗಾದಲ್ಲಿ ನಟಿ ರಾಧಿಕಾ ರಾವ್ ಮುದ್ದಾಗಿ ಕಾಣಿಸಿಕೊಂಡಿದ್ದ ನಟಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಟಿ ರಾಧಿಕಾ ರಾವ್ ಬೇಬಿ ಬಂಪ್ ಫೋಟೋಶೂಟ್ ನೋಡಿ ಫ್ಯಾನ್ಸ್‌ ನಟಿಗೆ ಶುಭಹಾರೈಸುವುದರ ಜೊತೆಗೆ ಸೂಪರ್, ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದರು. ಕಳೆದ ಜುಲೈ 5ರಂದು ರಾಧಿಕಾ ರಾವ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ನಟಿ ರಾಧಿಕಾ ರಾವ್ ಅವರು ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.ನಟಿ ರಾಧಿಕಾ ರಾವ್ ಅವರು 2020 ರ ಡಿಸೆಂಬರ್ ತಿಂಗಳಲ್ಲಿ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ರಾವ್ ತಮ್ಮ ಗೆಳೆಯ ಆಕರ್ಷ್ ಭಟ್ (Akarsh Bhat) ಅವರ ಹೊಸ ಜೀವನ ಶುರು ಮಾಡಿದ್ದರು. ನಟಿ ರಾಧಿಕಾ ರಾವ್ ಅವರ ಮದುವೆಯೂ ಮೂಡಬಿದಿರೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಗುರು-ಹಿರಿಯರು ನಿಶ್ಚಯಿಸಿದ್ದ ಮುಹೂರ್ತದಲ್ಲಿ ಅವರ ಸಮ್ಮುಖದಲ್ಲಿ ಆಕರ್ಷ್ ಜೊತೆಗೆ ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಕಿರುತೆರೆಯ ನಟಿ ರಾಧಿಕಾ ಹಾಗೂ ಅಕರ್ಷ್ ಅವರದ್ದು ಲವ್ ಮ್ಯಾರೇಜ್ (Love Marriage).

ನಟಿಗೆ ಗೆಳತಿಯ ಮೂಲಕ ಆಕರ್ಷ್ ಅವರ ಪರಿಚಯವಾಗಿತ್ತು. ಕೊನೆಗೆ ಈ ಪರಿಚಯ ಸ್ನೇಹವಾಗಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಕೊನೆಗೆ ಈ ಸ್ನೇಹ ಪ್ರೀತಿಯಾಗಿದೆ. ಅಕರ್ಷ್ ಅವರು ರಾಧಿಕಾರವರಿಗೆ ತಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದ್ದರು. ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದು, ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿ ಅಧಿಕೃತವಾಗಿ ತಮ್ಮಿಬ್ಬರ ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ದರು .

ನಟಿ ರಾಧಿಕಾ ರಾವ್ ಅವರು ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಸೀರಿಯಲ್‍ನಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಮೂಲ್ಯ (Amulya) ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದರು. ಆ ಬಳಿಕ ‘ರಾಧಾ ಕಲ್ಯಾಣ’ ಯಲ್ಲಿ ರಾಧಾ (Radha) ಪಾತ್ರವನ್ನು ನಿರ್ವಹಿಸಿದ್ದರು. ಕನ್ನಡ ಕಿರುತೆರೆ ಸೇರಿದಂತೆ ಪರಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ವೈಯುಕ್ತಿಕ ಬದುಕಿನ ಕಡೆಗೆ ಹೆಚ್ಚು ಗಮನ ಕೊಡುವ ಮೂಲಕ ಬ್ಯುಸಿಯಾಗಿದ್ದಾರೆ

Leave a Reply

Your email address will not be published. Required fields are marked *