ರೆಬಲ್ ಸ್ಟಾರ್ ಅಂಬರೀಷ್ (Rebel Star Ambarish) ಪುತ್ರ ಅಭಿಷೇಕ್ ಅಂಬರೀಷ್ (Abhishek Ambarish) ನಿನ್ನೆ (ಜೂನ್ 5) ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ನಿನ್ನೆ ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮಹೂರ್ತದಲ್ಲಿ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ (Aviva Biddappa) ಜೊತೆ ಅಭಿಷೇಕ್ ಅವರು ಸತಿ ಪತಿಗಳಾದರು. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರ (Chamaravajra) ದಲ್ಲಿ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾಗೆ ಮಾಂಗಲ್ಯಧಾರಾಣೆ ಮಾಡಿದ್ದರು.
ಮದುವೆ ಗೌಡರ ಸಾಂಪ್ರದಾಯದ ಪ್ರಕಾರ ನೆರವೇರಿದೆ. ಅಭಿಷೇಕ್ ಕುರ್ತಾ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ ಅವಿವಾ ಕೆಂಪು ಬಣ್ಣದ ಜೆರಿ ಸೀರೆಯಲ್ಲಿ ಮಿಂಚಿದ್ದಾರೆ. ಅಭಿಷೇಕ್ ಮತ್ತು ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿದ್ದರು. ಅದರಲ್ಲಿಯೂ ರಾಕಿಂಗ್ ಸ್ಟಾರ್ ಯಶ್ (Rocking Star Yash) ದಂಪತಿ ಸಮೇತ ವಿವಾಹಕ್ಕೆ ಆಗಮಿಸಿದ್ದು, ಎಲ್ಲರ ಗಮನ ಸೆಳೆದಿದ್ದರು.
ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandith) ಪಿಂಕ್ ಪಿಂಕ್ ಆಗಿ ಕಾಣಿಸಿಕೊಂಡಿದ್ದು, ನವ ಜೋಡಿಗೆ ಶುಭಾಶಯ ಕೋರಿದ್ದರು. ಅದಲ್ಲದೇ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಕೊರಳಿಗೆ ಹಾಕಿದ್ದ ನೆಕ್ ಲೆಸ್ ಹೈ ಲೈಟ್ ಆಗಿತ್ತು. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ದುಬಾರಿ ಬೆಲೆಯ ನೆಕ್ ಲೆಸ್ ಧರಿಸಿದ್ದರು. ಈ ನೆಕ್ ಲೆಸ್ ಬೆಲೆ ಬರೋಬ್ಬರಿ 15 ಲಕ್ಷ ರೂಪಾಯಿಯಾಗಿದೆ.
The #Rocking couple, @TheNameIsYash and @RadhikaPandit7, at the wedding ceremony of #AbishekAmbareesh and #AvivaBidappa as they elegantly wish the family and embrace the newlyweds. Dressed exquisitely in their ethnically-inspired attire, add a touch of enchantment to the joyous… pic.twitter.com/BRiPlgChRH
— A Sharadhaa (@sharadasrinidhi) June 5, 2023
ಮಗಳು ಅಂಬಿ ಮನೆಗೆ ಸೊಸೆಯಾಗಿ ಹೋಗುತ್ತಿರುವ ಬಗ್ಗೆ ತಂದೆ ಪ್ರಸಾದ್ ಬಿದ್ದಪ್ಪ (Prasad Biddappa) ಮಾಧ್ಯಮಗಳ ಜೊತೆ ಮಾತನಾಡಿದ್ದು, “ನಮ್ಮ ಮನೆ ಇರೋದು ಯಲಹಂಕದಲ್ಲಿ. ಈಗ ನಮ್ಮ ಮಗಳ ಮನೆ ಇರುವುದು ಜೆಪಿ ನಗರದಲ್ಲಿ. ಥ್ಯಾಂಕ್ ಗಾಡ್.. ಅಷ್ಟೇನೂ ದೂರ ಇಲ್ಲ. ನಮಗೆ ತುಂಬ ಸಂತೋಷ. ಯಾಕೆಂದರೆ ಅಂಬರೀಷ್ ಅವರು ನಮಗೆ ಹಳೆಯ ಫ್ಯಾಮಿಲಿ ಫ್ರೆಂಡ್. ಅಂಬರೀಷ್ ಅವರು ನನಗೆ ಚೆನ್ನಾಗಿ ಗೊತ್ತಿದ್ದರು. ಅವರು ಬಹಳ ಒಳ್ಳೆಯವರಾಗಿದ್ದರು. ಸುಮಲತಾ ಅವರು ಕೂಡ ಉತ್ತಮ ವ್ಯಕ್ತಿ. ಅವರ ಮನೆಗೆ ನಮ್ಮ ಮಗಳು ಹೋಗುತ್ತಿರುವುದಕ್ಕೆ ನಮಗೆ ಖುಷಿ ಇದೆ. ಅವರ ಮನೆಯಲ್ಲಿ ಮಗಳು ಚೆನ್ನಾಗಿರುತ್ತಾಳೆ ಎಂಬ ನಂಬಿಕೆ ಇದೆ ” ಎಂದು ಹೇಳಿದ್ದಾರೆ.