ಮುಖೇಶ್ ಅಂಬಾನಿ ಮನೆಗೆ ಸೊಸೆಯಾಗಿ ಬರುತ್ತಿರುವ ರಾಧಿಕಾ ಮರ್ಚೆಂಟ್ ಆಸ್ತಿ ಎಷ್ಟು ಗೊತ್ತಾ!! ಶ್ರೀಮಂತಿಕೆ ನೋಡಿ ಇವಳು ಮುಖೇಶ್ ಅಂಬಾನಿ ಮಗನನ್ನ ಮದುವೆಯಾಗುತ್ತಿಲ್ಲ.. ಈಕೆ ಕೂಡ ಕೂಡ ಕೋಟ್ಯಾಧೀಶಳೆ!!!

Radhika merchant net worth : ಭಾರತದ ಖ್ಯಾತ ಉದ್ಯಮಿ ಮತ್ತು ಎರಡನೇಯ ಶ್ರೀಮಂತರಾದ ಮುಖೇಶ್ ಅಂಬಾನಿ (Mukhesh Ambani) ಯವರ ಮನೆಯಲ್ಲಿ ಶುಭ ಕಾರ್ಯವು ನಡೆಯಲಿದೆ. ಕಿರಿಯ ಮಗ ಅನಂತ್ ಅಂಬಾನಿ (Ananth Ambani) ಅವರು ಶೀಘ್ರದಲ್ಲೇ ನವಜೀವನ ಪ್ರಾರಂಭಿಸಲಿದ್ದಾರೆ. ರಾಧಿಕಾ ಮಾರ್ಚೆಂಟ್(Radhika Merchant) ಅವರ ಕೈ ಹಿಡಿದು ನಡೆಯಲಿದ್ದಾರೆ. ಇದೀಗ ನೆಟ್ಟಿಗರಿಗೆ ರಾಧಿಕಾ ಮಾರ್ಚೆಂಟ್ ಅವರ ಒಟ್ಟಾರೆ ಆಸ್ತಿಯ ಮೇಲೆ ಕುತೂಹಲ ಉಂಟಾಗಿದೆ.

ಮುಖೇಶ್ ಅಂಬಾನಿಯವರ ಕಿರಿ ಪುತ್ರ ಅನಂತ್ ಅವರ ಮಡದಿಯಾಗುವವಳು ಶ್ರೀಮಂತಳೇ. ಕಳೆದ ಡಿಸೆಂಬರ್ 29ರಂದು ರಾಜಸ್ಥಾನದ ಶ್ರೀನಾಥ್ ಜಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ(Engagement) ಕಾರ್ಯಕ್ರಮವು ಜರುಗಿದೆ. Reliance industry ಇದು ಭಾರತದ ಶ್ರೀಮಂತ ಕಂಪನಿಗಳಲ್ಲಿ ಒಂದು. ಅಂಬಾನಿಯವರ 3 ಮಕ್ಕಳು ಒಂದೊಂದು ಜವಾಬ್ದಾರಿ ಹೊತ್ತು ನಡೆಯುತ್ತಿದ್ದಾರೆ.

ಅನಂತ್ ಅವರು ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಭಾವಿ ಪತ್ನಿ, ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿದ್ದರೆ. ಅನಂತ್ ಅಂಬಾನಿ ಯುಎಸ್ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಓದಿದವರು. ರಾಧಿಕಾ ಅವರು ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ರಾಧಿಕಾ ಮಾರ್ಚೆಂಟ್ ಹಾಗೂ ಅನಂತ್ ಅಂಬಾನಿ ಇಬ್ಬರು ಚಿಕ್ಕಂದಿನಿಂದಲೂ ಸ್ನೇಹಿತರು. 2018 ರಲ್ಲಿಯೇ ಇಬ್ಬರು ಒಟ್ಟಾಗಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ರಾಧಿಕಾ, ಗುಜರಾತ್ ನ ಕಚ್ ಪ್ರದೇಶದಕ್ಕೆ ಸೇರಿದ, ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೇನ್ ಮರ್ಚೆಂಟ್ ಅವರ ಮಗಳು. ತನ್ನ ಓದು ಮುಗಿದ ಬಳಿಕ ರಾಧಿಕಾ, ಇಂಡಿಯಾ ಫಸ್ಟ್ ಆರ್ಗನೈಸೇಶನ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು.

ಬಳಿಕ ರಾಧಿಕಾ, ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿ ನೇಮಕಗೊಂಡರು. ಕೆಲವು ಮೂಲಗಳು ಹೇಳುವ ಪ್ರಕಾರ ಕುಣಿತ, ಈಜು ಮತ್ತು ಓದುವುದನ್ನು ಇಷ್ಟಪಡುತ್ತಾರಂತೆ. ಐಷಾರಾಮಿ ಜೀವನ ನಡೆಸುತ್ತಿರುವ ರಾಧಿಕಾ ಉಡುಗೆಗಳನ್ನು, ಬ್ಯಾಗ್ ಹಾಗೂ ಚಪ್ಪಲಿಗಳನ್ನು ಧರಿಸುತ್ತಾರಂತೆ.

60 ಸಾವಿರಕ್ಕೂ ಹೆಚ್ಚು followers ಗಳನ್ನು ಹೊಂದಿರುವ Instagram ಅಕೌಂಟ್ ರಾಧಿಕಾ ಅವರದ್ದು. ಇವರ ತಂದೆಯ ಆಸ್ತಿ ಸುಮಾರು ಏಳು ನೂರು ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತಂದೆಯ ಬಿಸಿನೆಸ್ ಅಲ್ಲಿ ರಾಧಿಕಾ ಅವರಿಗೆ 10% ರಷ್ಟು ಲಾಭಾಂಶ ಸಿಗುತ್ತದೆ. ರಾಧಿಕಾ ಮಾರ್ಚೆಂಟ್ ಅವರ ಒಟ್ಟಾರೆ ಆಸ್ತಿಯು ಸುಮಾರು ಎಂಟರಿಂದ ಹತ್ತು ಕೋಟಿ ರೂಪಾಯಿಗಳೆಂದು ವರದಿಗಳ ಪ್ರಕಾರ ತಿಳಿದುಬಂದಿದೆ.

Leave a Reply

Your email address will not be published. Required fields are marked *