ನಾಚುತ್ತಲೆ ಮದುವೆ ಆಗುತ್ತಿರುವ ಹುಡುಗನ ಗುಟ್ಟು ರಟ್ಟು ಮಾಡಿದ ನಟಿ ರಚಿತಾ ರಾಮ್! ಡಿಂಪಲ್ ಹುಡುಗಿಯನ್ನು ಕೈ ಹಿಡಿಯುತ್ತಿರುವ ಸಿಂಪಲ್ ಹುಡುಗ ಇವರೇ ನೋಡಿ!!

rachita ram marriage : ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ಡಿಂಪಲ್ ಕ್ವೀನ್ ರಚಿತಾ ರಾಮ್. ಹೌದು ಗುಳಿ ಕೆನ್ನೆ ಚೆಲುವೆಯ ನಟನೆ ಹಾಗೂ ಎಕ್ಸ್ಪ್ರೆಶನ್ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬದುಕಿನ ಹಿನ್ನಲೆ ಗಮನಿಸಿದರೆ ಬೆಂಗಳೂರಿನಲ್ಲಿ ಜನಿಸಿದ ರಚಿತಾರ ಬಾಲ್ಯದ ಹೆಸರು ಬಿಂದ್ಯಾ ರಾಮ್ (rachita ram original name). ಇವರ ಪೂರ್ವಜರು ಮಧ್ಯಪ್ರದೇಶದ ಭೂಪಾಲ್ ಮೂಲದವರು. ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದ.

ರಾಮ್ ರವರು ಸುಮಾರು 500 ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಚಿತಾರವರ ಹಿರಿಯ ಸಹೋದರಿ ನಿತ್ಯಾ ರಾಮ್ ಕನ್ನಡ ಮತ್ತು ತಮಿಳು ಕಿರುತೆರಯಲ್ಲಿ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿದ್ದಾರೆ. ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ `ಬೆಂಕಿಯಲ್ಲಿ ಅರಳಿದ ಹೂವು’ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.

rachita ram marriage
rachita ram marriage

Rachita ram career :

ತದನಂತರದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಅರಸಿ’ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಸಂಪಾದಿಸಿಕೊಂಡರು. ಇನ್ನು, 2013 ರಲ್ಲಿ ತೆರೆಕಂಡ ಬುಲ್‌ಬುಲ್ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆ ಸಮಯದಲ್ಲಿ ಅಂದರೆ, ಚಿತ್ರದ ಅಡಿಷನ್‌ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ಬಂದಿದ್ದರು.

ಆದರೆ ಅದೃಷ್ಟ ಎನ್ನುವಂತೆ ರಚಿತಾ ಆಯ್ಕೆಯಾದರು. ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ಅಂಬರೀಶ್, ದಿಲ್ ರಂಗೀಲಾ, ರನ್ನ, ರಥಾವರ, ಚಕ್ರವ್ಯೂಹ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.

ಅದರ ಜೊತೆಗೆ, 2016 ರಲ್ಲಿ ಉದಯ ಟಿವಿಯ `ಕಿಕ್’ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಶೋ ಜಡ್ಜ್ ಆಗಿದ್ದರು. ತದನಂತರ ಕಾಮಿಡಿ ಟಾಕೀಸ್, ಮಜಾಭಾರತ- 2 ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ವಯಸ್ಸು 30 ವರ್ಷ ದಾಟಿದ್ದು ಇನ್ನು ಮದುವೆಯಾಗಿಲ್ಲ. ಇತ್ತೀಚೆಗಷ್ಟೇ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

Rachita ram about marriage and love :

ಈ ವೇಳೆಯಲ್ಲಿ ರಚಿತಾ ರಾಮ್ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಪ್ರತಿವರ್ಷ ಹುಟ್ಟುಹಬ್ಬದ ದಿನ ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ನೀವು ಏನು ಅಂದುಕೊಂಡಿದ್ದೀರಾ ಕೇಳಿದಾಗ, ನಾನು ಏನು ಅಂದುಕೊಳ್ಳುತ್ತೇನೋ ಅದು ಇದುವರೆಗೂ ಅದು ಆಗ್ಲಿಲ್ಲ. ಹಾಗಾಗಿ ಈ ವರ್ಷ ಏನನ್ನು ಡಿಸೈಡ್ ಮಾಡಿಲ್ಲ. ದೇವರು ಹೇಗೆ ತೆಗೆದುಕೊಂಡು ಹೋಗುತ್ತಾರೋ ಹಾಗೆ ಜೀವನ ಸಾಗಲಿ. ಏನೇ ಅಗಲಿ ದೇವರು ಎಲ್ಲವನ್ನು ಸಹಿಸುವ ಶಕ್ತಿ ನೀಡಲಿ ಎಂದಿದ್ದರು.

52 ವಯಸ್ಸಿನ ಮಹಿಳೆಯನ್ನ ಮದುವೆಯಾದ, 21 ವಯಸ್ಸಿನ ಯುವಕ! ಹೊಸ ಟ್ರೆಂಡ್ ಗೆ ನಾಂದಿ ಹಾಡಿದ ಯುವಕ, ಬೆಚ್ಚಿಬಿದ್ದ ಯುವತಿಯರು!!

ಇಷ್ಟು ವರ್ಷ ಒಬ್ಬರೇ ಬರ್ತ್ಡೇ ಆಚರಿಸಿಕೊಂಡಿದ್ದೀರಿ. ಮುಂದಿನ ವರ್ಷವಾದರೂ ಯಾರದಾದರೂ ಜೊತೆಗೆ ಬರ್ತ್ಡೇ ಆಚರಿಸಿಕೊಳ್ಳುತ್ತಿರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದರಚಿತಾ ರಾಮ್, ನಾನು ಈ ಪ್ರಶ್ನೆಗೆ ಉತ್ತರ ಕೊಟ್ಟರೆ ನನ್ನ ಅಭಿಮಾನಿಗಳು ಬೇಸರಗೊಳ್ಳಬಹುದು. ಮತ್ತೆ ಅದೇ ಹೇಳುತ್ತೇನೆ ದೇವರು ಪ್ಲಾನ್ ಹೇಗಿದೆಯೋ ಹಾಗೆ ಆಗುತ್ತದೆ ಎಂದಿದ್ದರು. ಒಟ್ಟಿನಲ್ಲಿ ರಚಿತಾ ರಾಮ್ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಹೀಗೆಲ್ಲಾ ಹೇಳಿದ ಮೇಲೆ ರಚಿತಾ ರಾಮ್ ಅವರು ಮುಂದಿನ ಕೆಲವೇ ವರ್ಷಗಳಲ್ಲಿ ಮದುವೆಯಾಗುವುದು ಪಕ್ಕಾ ಎನ್ನಬಹುದು.

Leave a Reply

Your email address will not be published. Required fields are marked *