ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಪತ್ನಿಯ ಕುತ್ತಿಗೆಯನ್ನ ಹಿ.ಸುಕಿ ಕೊ-ಲೆ ಮಾಡಿದ ಪಾಪಿಪತಿ. ಸಂಸಾರ ಎಂದ ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಎಲ್ಲವನ್ನು ಸಹಿಸಿಕೊಂಡು ಬಾಳುವುದೇ ಜೀವನ. ಇದು ಗಂಡ ಹೆಂಡತಿ ಇಬ್ಬರಿಗೂ ಕೂಡ ಅನ್ವಯಿಸುತ್ತದೆ. ಅದನ್ನೇ ದೊಡ್ಡದಾಗಿ ಮಾಡಿಕೊಂಡು ಜೀವವನ್ನೇ ಬಲಿ ಕೊಡುವಂತಹ ಸಂಕಷ್ಟವನ್ನು ತಂದುಕೊಳ್ಳಬಾರದು.
ಆದರೆ ಇಂತಹ ಒಂದು ಘಟನೆ ನಡೆದಿದೆ.ಸಣ್ಣ ವಿಷಯವನ್ನ ಮುಂದಿಟ್ಟುಕೊಂಡು ಬಲವಾದ ಕಾರಣಗಳಿಲ್ಲದೆ ಪತ್ನಿಯ ಕುತ್ತಿಗೆಯನ್ನು ಹಿ-ಸುಕಿ ಕೊಂ-ದ ಘಟನೆ ನಂಜನಗೂಡು ತಾಲೂಕಿನ ದೊಡ್ಡಹಮ್ಮ ಗ್ರಾಮದಲ್ಲಿ ನಡೆದಿದೆ. 35 ವರ್ಷದ ರೂಪ ಮೃ-ತ ದುರ್ದೈವಿಯಾಗಿದ್ದು, ಎಳಂದೂರು ಕೆಸ್ತೂರು ಗ್ರಾಮದ 40ವರ್ಷದ ಪುರುಷೋತ್ತಮ್ ಎನ್ನುವವರೇ ಪತ್ನಿಯ ಅನ್ನ ಕೊ-ಲೆ ಮಾಡಿದ್ದಾರೆ.
ಪುರುಷೋತ್ತಮ್ ಹಾಗೂ ರೂಪಾ ದಂಪತಿಗಳು ಎಂಟು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಹೊಸ ಸಂಸಾರಕ್ಕೆ ಕಾಲಿಟ್ಟಿದ್ದರು. ಎಂಟು ವರ್ಷ ತುಂಬ ಜೀವನವನ್ನು ನಡೆಸಿದ್ದರು. ಆದರೆ ಅದನ್ನೆಲ್ಲ ಮರೆತು ಗಂಡ ಪುರುಷೋತ್ತಮ್ನೆ ಹೆಂಡತಿಯ ಕೊ-ಲೆಯನ್ನ ಮಾಡಿದ್ದಾನೆ.ಗಂಡ ಹೆಂಡತಿಯ ನಡುವೆ ಆಗಾಗ ಜಗಳ ನಡೆಯುತ್ತಿದ್ದು,ಗುರುವಾರ ನಡೆದ ಜಗಳದಲ್ಲಿ ಪುರುಷೋತ್ತಮ್ ತನ್ನ ಪತ್ನಿಯನ್ನೇ ಕೊ-ಲೆ ಗೈದ ಪಾಪಿಯಾಗಿದ್ದಾನೆ.

ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ. ಪುರುಷೋತ್ತಮರನ್ನು ಪೊಲೀಸರು ಬಂಧಿಸಿದ್ದಾರೆ. ಆ ಕಡೆ ಹೆಂಡತಿಯನ್ನ ಕಳೆದುಕೊಂಡು ಈ ಕಡೆ ಜೀವನವನ್ನು ಕಳೆದುಕೊಂಡು ಪುರುಷೋತ್ತಮ್ ಜೈಲಿನಲ್ಲಿ ಕಂಬಿಯನ್ನು ಎಣಿಸುತ್ತಿದ್ದಾನೆ. ಸ್ನೇಹಿತರೆ ಯಾವ ಕೆಲಸವನ್ನು ಮಾಡುವ ಮೊದಲು ಬುದ್ಧಿಯನ್ನ ಕೈಗೆ ಕೊಡಬಾರದು. ಯೋಚಿಸಿ ನಿರ್ಧಾರವನ್ನು ಮಾಡಬೇಕು ಎನ್ನುವುದಕ್ಕೆ ಈ ಪುರುಷೋತ್ತಮ್ನೆ ಉದಾಹರಣೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.