ಅಪ್ಪು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹಾಡಿದ್ದಾರೆ ಗೊತ್ತಾ..? ಅಪ್ಪು ತೆಲುಗಿನಲ್ಲಿ ಹಾಡಿದ ಈ ವಿಡಿಯೋ ನೋಡಿ ಸೂಪರ್

punitrajkumar telugu song

ನಮಸ್ತೆ ಪ್ರೀತಿಯ ವೀಕ್ಷಕರೆ ಕರುನಾಡಿನ ಮೆಚ್ಚಿನ ಮಗನನ್ನು ಕಳೆದು ಕೊಂಡು ಸರಿ ಸುಮಾರು 9 ತಿಂಗಳು ಕಳೆದಿದೆ ಆದರೂ ಕೂಡ ಅವರ ನೆನೆಪಿನಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಪ್ಪು ಬದುಕಿದ್ದಾಗ ಅವರು ಮಾಡಿರುವಂತಹ ದಾನ ಧರ್ಮಾ ಅವರಿರುವಾಗ ಅದ್ಯಾವುದು ಕೂಡ ಹೊರ ಬಂದಿರಲಿಲ್ಲ. ಆದರೆ ಅಪ್ಪು ಅಗಲಿದ ನಂತರ ಅವರ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳು ಒಂದೊಂದಾಗಿ ಹೊರ ಬರುತ್ತಿದೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೆಲವು ಸಿನೆಮಾಗಳಲ್ಲಿ ಅಭಿಯಿಸುವುದಕ್ಕೆ ಮಾತ್ರ ಅಲ್ಲದೇ ಇನ್ನೂ ಹಲವಾರು ಕಲೆ ಹೊಂದಿದ್ದಾರೆ. ಹೌದು ಪುನೀತ್ ರಾಜ್ ಕುಮಾರ್ ಅವರು ತುಂಬಾ ಚನ್ನಾಗಿ ಹಾಡು ಹಾಡುತ್ತಾರೆ ಈ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ ಕನ್ನಡದ ಬಹುತೇಕ ಚಿತ್ರಗಳಲ್ಲಿ ಅವರು ಹಾಡನ್ನು ಹಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕನ್ನಡಲ್ಲಿ ಹಾಡು ಹಾಡಿರೋದು ಹೊಸದೇನಲ್ಲ.

ಸಾಕಷ್ಟು ಬಾರಿ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಹಾಗೂ ತಮ್ಮ ಕುಟುಂಬದ ಜೊತೆ ಸೇರಿದಾಗ ಹಾಗೂ ಸ್ನೇಹಿತರೊಂದಿದೆ ಸಮಯ ಕಳೆಯುವ ಸಮಯದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ತೆಲುಗಿನ ಖ್ಯಾತ ನಿರೂಪಕಿಯೊಬ್ಬರು ನೀವು ತೆಲುಗಿನಲ್ಲಿ ಹಾಡನ್ನು ಹಾಡುತ್ತಿರ ಎಂದು ಪ್ರೆಶ್ನೆ ಕೇಳಿದಗ ಅಪ್ಪು ನಿರಾಳವಾಗಿ ಖಂಡಿತಾ ಹಾಡುತ್ತೇನೆ ಎಂದು ಹಾಡೊಂದನ್ನು ಹಾಡಿದ್ದಾರೆ.

ಸದ್ಯಕ್ಕೆ ಅಪ್ಪು ಅವರು ಹಾಡಿದಂತಹ ಈ ಹಾಡನ್ನು ಕೇಳಿ ನಿರೂಪಕಿ ಸ್ಥಳದಲ್ಲಿಯೇ ಫಿದಾ ಆಗಿದ್ದಾರೆ ಅಷ್ಟೇ ಅಲ್ಲದೇ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಏಕೆಂದರೆ ಅಪ್ಪು ಕನ್ನಡದವರು ಕನ್ನಡ ಹಾಡು ಹಾಡುವುದಕ್ಕೆ ಅವರಿಗೆ ಅಷ್ಟೇನೂ ಕಷ್ಟಕರವಾಗಿಲ್ಲ ಆದರೆ ತೆಲುಗು ಭಾಷೆಯಲ್ಲಿ ಇಷ್ಟು ನಿರಂತರವಾಗಿ ಹಾಡನ್ನು ಸಲೀಸಾಗಿ ಹಾಡಿದ್ದನ್ನು ಕೇಳಿ ಒಂದು ಕ್ಷಣ ಆಕೆ ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ತೆಲುಗು ಸಿನೆಮಾದಲ್ಲಿ ಅಭಿನಯ ಮಾಡದೇ ಇರಬಹುದು ಆದರೂ ಕೂಡ ತೆಲುಗು ಚಿತ್ರರಂಗಕ್ಕೆ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು. ಜೂನಿಯರ್ ಎನ್ ಟಿ ಆರ್, ಅಲ್ಲು ಅರ್ಜುನ್, ಮಹೇಶ್ ಬಾಬು, ರಜನಿ ಕಾಂತ್, ರಾಜಮೌಳಿ, ವಿಶಾಲ್, ಹೀಗೆ ಹಲವಾರು ಸೇರಿದಂತೆ ಎಲ್ಲಾ ನಟರೊಂದಿಗೆ ಖ್ಯಾತ ನಟರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು ಅಪ್ಪು.

ಅಷ್ಟೇ ಅಲ್ಲದೇ ಯಾವುದೇ ಸಿನೆಮಾ ಪ್ರಚಾರ ಕಾರ್ಯಕ್ರಮ ಬಂದರೂ ಕೂಡ ಅಲ್ಲಿ ಭಾಗಿಯಾಗುತ್ತಿದ್ದರು ನಿಮಗೆಲ್ಲರಿಗೂ ತಿಳಿದಿರುವಂತೆ ಜೂನಿಯರ್ ಎನ್ ಟಿ ಆರ್ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗೆಳೆಯ ಗೆಳೆಯ ಎಂಬ ಹಾಡನ್ನು ಹಾಡುವುದರ ಮೂಲಕ ಅವರ ಸ್ನೇಹಕ್ಕೆ ಇರುವಂತಹ ಮೌಲ್ಯವನ್ನು ಎತ್ತಿ ಹಿಡಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಪುನೀತ್ ಅವರು ಕೂಡ ತೆಲುಗಿನ ಹಾಡೊಂದನ್ನು ಹಾಡಿ ತೆಲುಗಿನ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ.

ಹೌದು ತುಂಬಾ ಸಮಯದ ನಂತರ ಅಪ್ಪು ಅವರು ತೆಲುಗಿನಲ್ಲಿ ಹಾಡಿದಂತಹ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ@ರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇಷ್ಟು ಒಳ್ಳೆ ಗುಣಗಳನ್ನು ಹೊಂದಿರುವ ವ್ಯಕ್ತಿ ಯಾಕೆ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎಂದು ದೇವರಿಗೆ ಶಾಪ ಹಾಕುತ್ತಿದ್ದಾರೆ. ಈ ವಿಧಿಯಾಟದ ಮುಂದೆ ಮನುಷ್ಯನ ಆಸೆ ಕನಸುಗಳಲೆವೂ ಕೂಡ ನೀರ ಮೇಲೆ ಗುಳ್ಳೆ ಎಂಬುದಕ್ಕೆ ಅಪ್ಪು ಅವರೇ ಉದಾಹರಣೆ ಆಗಿದ್ದಾರೆ.

ಅಪ್ಪು ಅವರು ನಮ್ಮ ಜೊತೆ ಶರೀರಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ನಮ್ಮ ಜೊತೆಯಲ್ಲೇ ಇದ್ದಾರೆ ಅವರು ಮಾಡಿರುವಂತಹ ಅದೆಷ್ಟೋ ಕೆಲಸಗಳನ್ನು ಇಂದು ನಾವು ಸ್ಮರಿಸಿ ಇನ್ನೊಬ್ಬರಿಗೆ ಒಳ್ಳೆಯ ರೀತಿಯಲ್ಲಿ ಬದುಕಬೇಕು. ಜೊತೆಗಿರುವ ಜೀವ ಎಂದಿಗೂ ಜೀವಂತ ಎಂಬುದು ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನಮ್ಮೊಟ್ಟಿಗೆ ಇದ್ದಾರೆ ಎಂಬ ಭಾವನೆಯಲ್ಲಿ ಜೀವನ ಸಾಗಿಸಬೇಕಾಗಿದೆ.

ಪುನೀತ್ ರಾಜ್ ಕುಮಾರ್ ಅವರು ಹಾಡಿರುವ ಈ ವಿಡಿಯೋವನ್ನು ನೋಡಿ ಈ ಹಾಡನ್ನು ಕೇಳಿದರೆ ನಿಮಗೆ ಏನು ಅನ್ನಿಸುತ್ತದೆ ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು. ಈ ಒಂದು ಮಾಹಿತಿ ನಿಮ್ಮ ಸ್ನೇಹಿತರಿಗೂ ನಿಮ್ಮ ಕುಟುಂಬದವರಿಗೂ ಶೇರ್ ಮಾಡಿ ಅಪ್ಪು ಅವರ ಮೇಲಿನ ಗೌರವ ಹೆಚ್ಚಿಸಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *