ಯುಪಿಎಸ್ಸಿ ಪರೀಕ್ಷೆಯಲ್ಲಿ 260 ನೇ ರ‍್ಯಾಂಕ್ ಪಡೆದು ಯುವಕ, ಸೌರಭ್ ಸಾಧನೆಗೆ ಅಪ್ಪು ಸಿನಿಮಾವೇ ಸ್ಫೂರ್ತಿ, ಇಲ್ಲಿದೆ ನೋಡಿ ಅಸಲಿ ವಿಚಾರಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಸಾಧಿಸುವ ಛಲ ಹೊಂದಿದ್ದರೆ ಯಾರು ಬೇಕಾದರೂ ಎಂತಹ ಸಾಧನೆಯನ್ನು ಮಾಡಬಹುದು. ಇದಕ್ಕೆ ಉದಾಹರಣೆಯಾಗಿರುವವರೇ ಈ ಯುವಕ. ಮೈಸೂರು ಮೂಲಕ ಯುವಕ ಸೌರಭ್ ಎನ್ನುವವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ಯುಪಿಎಸ್ಸಿ (UPSC Civils 2022 Results) ಪರೀಕ್ಷೆಯಲ್ಲಿ 260ನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಅದಲ್ಲದೇ ಪುನೀತ್ ರಾಜ್ ಕುಮಾರ್ ( Puneeth Raj Kumar)ಅಭಿನಯದ ಪೃಥ್ವಿ (Pruthvi) ಸಿನಿಮಾವೇ ಸೌರಭ್ (Sowrabh) ಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಹೌದು, ಉತ್ತರಾಖಂಡದ ಡೆಹ್ರಾಡೂನ್’ನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಸೌರಭ್ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾರೆ. ಸೌರಭ್ ಎಂ.ಟೆಕ್ ಪದವೀಧರರಾಗಿದ್ದು, ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರ ತಾಯಿ ಡಾ.ಜಾನಕಿ ( Dr. Janaki) ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೌರಭ್, “ಯೂಟ್ಯೂಬ್‌ನಲ್ಲಿ ರಾಜ್ಯಸಭಾ ಟಿವಿ ಚಾನೆಲ್, ಆನ್‌ಲೈನ್ ಜಾಲತಾಣಗಳು, ಪರೀಕ್ಷೆಗೆ ಪೂರಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಂಡೆ. ಮೂಲ ವಿಷಯಗಳು ಪಠ್ಯ ಪುಸ್ತಕದಲ್ಲಿ ದೊರೆತರೆ, ಆ ವಿಚಾರಗಳಿಗೆ ಸಂಬಂಧಿಸಿದ ಅಪ್ಡೇಟೆಡ್ ಮಾಹಿತಿಯನ್ನು ಅನೇಕ ವೆಬ್‌ಸೈಟ್‌ಗಳಿಂದ ಪಡೆದು ಅಧ್ಯಯನ ನಡೆಸಿದೆ. ಯೂಟ್ಯೂಬ್‌ನಲ್ಲಿ ಕೆಲವೊಂದು ಚಾನೆಲ್ ಗಳಿಂದ ಸಾಕಷ್ಟು ಮಾಹಿತಿ ದೊರೆಯಿತು. ಪರೀಕ್ಷೆಯಲ್ಲಿ ಯಶಸ್ವಿಯಾಗಲು ಈ ವಿಧಾನಗಳೂ ನೆರವಾಗಿವೆ” ಎಂದಿದ್ದಾರೆ.
“ನಾನು ಐಎಫ್‌ಎಸ್ ಪ್ರೊಬೇಷನರಿ ಮಾಡುತ್ತಿದ್ದ ಕಾರಣ ಯುಪಿಎಸ್‌ಸಿ ಪರೀಕ್ಷೆಗೆ ಸಾಕಷ್ಟು ಓದಿಕೊಂಡರೂ ನಿರಂತರವಾಗಿ ಓದಲಾಗಲಿಲ್ಲ. ಎರಡು ಗಂಟೆ ಓದಿದರೆ ಇನ್ನೆರಡು ಗಂಟೆಯನ್ನು ಟಿವಿ ನೋಡುವುದು ಹಾಗೂ ಆಟ ಆಡುವುದರಲ್ಲಿ ಕಳೆಯುತ್ತಿದ್ದೆ. ನಿರಂತರವಾಗಿ ಓದಿದರೆ ತಲೆಯಲ್ಲಿ ಉಳಿಯುವುದಿಲ್ಲ ಎಂದು ತಂದೆಯವರು ನೀಡುತ್ತಿದ್ದ ಸಲಹೆಯನ್ನು ಪಾಲಿಸಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.
ಅಲ್ಲದೆ ಜೆಸಿ ಕಾಲೇಜಿನಲ್ಲಿ ಬಿಇ ಹಾಗೂ ಎಂಟೆಕ್ ಅನ್ನು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ ಎಂದಿದ್ದಾರೆ. ಅದಲ್ಲದೆ, ಪೂಜಾ ಎಂ (Pooja M) 390ನೇ ರ‍್ಯಾಂಕ್ ಪಡೆದರೆ, ಭಾನುಪ್ರಕಾಶ್ (Bhanu Prakash) ಅವರು 448ನೇ ರ‍್ಯಾಂಕ್ ಪಡೆದು ಎಲ್ಲರೂ ಮಾದರಿಯಾಗುವಂತಹ ಸಾಧನೆಯನ್ನು ಮಾಡಿದ್ದಾರೆ.