ಕೋಟಿ ಕೋಟಿ ಕೊಟ್ಟು ಅಪ್ಪು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರು ಈಗ ಏನಾಗಿದೆ ಗೊತ್ತಾ?

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗದ ಅತ್ಯಂತ ಸಿಂಪಲ್ ಸೂಪರ್ ಸ್ಟಾರ್ ಎಂದು ಹೇಳಬಹುದಾಗಿದೆ. ಬೇರೆಯವರು ದುಬಾರಿ ಬಟ್ಟೆಗಳನ್ನು ಧರಿಸಿ ಹಾಗೂ ದುಬಾರಿ ವಸ್ತುಗಳನ್ನು ಧರಿಸುವಂತಹ ಹವ್ಯಾಸವನ್ನು ಹೊಂದಿದ್ದಾರೆ ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾನೊಬ್ಬ ಸೂಪರ್ ಸ್ಟಾರ್ ಆಗಿದ್ರೂ ಹಾಗೂ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟನ ಮಗನಾಗಿದ್ದರೂ ಕೂಡ ಯಾವತ್ತೂ ಅಹಂಕಾರದಿಂದ ಹಾಗೂ ಆಡಂಬರದಿಂದ ಇದ್ದವರಲ್ಲ.

ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಇವತ್ತು ಅವರನ್ನು ಕಳೆದುಕೊಂಡು ತುಂಬಲಾರದ ನಷ್ಟದ ಪರಿಸ್ಥಿತಿಯಲ್ಲಿದೆ ಎಂದು ಹೇಳಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಮಹಿಳೆಯರ ದಿನಾಚರಣೆಯ ದಿನದಂದು 3 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವಂತಹ ಲ್ಯಾಂಬೋರ್ಗಿನಿ ಉರುಸ್ ಕಾರ್ ಅನ್ನು ಉಡುಗೊರೆ ಮಾಡಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮ ಪತ್ನಿಯ ಜೊತೆಗೆ ಈ ಕಾರಿನಲ್ಲಿ ಪುನೀತ್ ರಾಜಕುಮಾರ್ ಅವರು ಓಡಾಡಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಈ ಕಾರ್ ಏನಾಗಿದೆ ಅನ್ನೋದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಹೌದು ಗೆಳೆಯರೇ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಲ್ಯಾಂಬೋರ್ಗಿನಿ ಉರುಸ್ ಕಾರ್ ಅನ್ನು ದುಬೈ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *