ನಮ್ಮ ಹತ್ತಿರದವರನ್ನು ಕಳೆದುಕೊಂಡರೆ ಮನಸ್ಸಿಗೆ ನೋವಾಗುವುದು ಸಹಜ. ಆದರೆ ಒಬ್ಬ ನಟ ಅಥವಾ ನಟಿ ನಮ್ಮಿಂದ ದೂರ ಆದ್ರೂ ಅಂದ್ರೆ ನಮ್ಮ ಮನೆಯ ಸದಸ್ಯನ್ನೇ ಕಳೆದುಕೊಂಡಷ್ಟು ದುಃಖವಾಗುತ್ತೆ ಅಲ್ವಾ. ಹೌದು ಇಂದು ನಮ್ಮ ನಿಮ್ಮೆಲ್ಲರ ಮನಸ್ಸಿಗೆ ಹತ್ತಿರವಾದ ಮೂರು ಸ್ಟಾರ್ ನಟರು ನಮ್ಮೊಂದಿಗೆ ಇಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಇತ್ತೀಚಿಗೆ ದೊಡ್ಮನೆ ಕುಡಿ ತಮ್ಮ ಗೊಂಬೆಯ ಆಟವನ್ನು ಮುಗಿಸಿ ಹೊರಟುಬಿಟ್ಟಿದ್ದಾರೆ. ಯುವರತ್ನ, ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತೀರಿಕೊಂಡು ಒಂದು ವರ್ಷ ಆಯ್ತು ಅನ್ನೋದನ್ನ ಯಾರಿಗೂ ಒಪ್ಪಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ.
ಹೀಗೆ ಪ್ರತಿ ಬಾರಿ ಒಬ್ಬೊಬ್ಬ ಮೇರು ನಟರನ್ನು ಕಳೆದುಕೊಂಡಾಗಲೂ ನಮಗೆ ಬಹಳ ನೋವಾಗುತ್ತೆ. ಡಾ. ರಾಜಕುಮಾರ್, ವಿಷ್ಣು ವರ್ಧನ್, ಅಂಬರೀಶ್, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್, ಅಪ್ಪು ಹೀಗೆ ಅತ್ಯದ್ಭುತ ನಟರನ್ನ ನಾವು ಕಳೆದುಕೊಂಡಿದ್ದೇವೆ. ಯಾರನ್ನು ಕೂಡ ಮರೆಯಲು ಸಾಧ್ಯವೇ ಇಲ್ಲ ಅಲ್ಲದೆ ಇಂತಹ ಮಹಾನ್ ಚೇತನಗಳನ್ನು ಕಳೆದುಕೊಂಡ ಕನ್ನಡ ಸಿನಿಮಾ ಇಂಡಸ್ಟ್ರಿ ನಿಜಕ್ಕೂ ಅನಾಥವಾಗಿಬಿಟ್ಟಿದೆ.
ಪುನೀತ್ ರಾಜಕುಮಾರ್ ಅವರ ವಿಷಯಕ್ಕೆ ಬಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅವರದ್ದು ಬಹಳ ದೊಡ್ಡ ಹೆಸರು. ಯಾವ ಗಾ-ಸಿಪ್ ಗಳಿಗೂ ಬ-ಲಿಯಾಗದ ಪುನೀತ್ ಅವರು ತಮ್ಮ ನಗುಮುಖದಿಂದಲೇ ಎಲ್ಲರನ್ನ ಗೆಲ್ಲುತ್ತಿದ್ದರು. ನಿಜ ಜೀವನದಲ್ಲಿಯೂ ಒಬ್ಬ ಅತ್ಯುತ್ತಮ ನಾಯಕರಾಗಿದ್ರು ಪುನೀತ್. ಪುನೀತ್ ರಾಜಕುಮಾರ್ ಅವರಿಗೆ ಮ-ರಣದ ನಂತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿದೆ.
ಇನ್ನು ಕೆಲವು ಸ್ಟಾರ್ ನಟರು ಹುಟ್ಟಿದ ದಿನ ಒಂದೇ. ಹೌದು ಈ ಮೂರು ಸ್ಟಾರ್ ನಟರು ಒಂದೇ ದಿನಾಂಕದಂದು ಜನ್ಮ ತಾಳಿದ್ದು ಹಾಗದರೆ ಈ ಸಂಖ್ಯೆಯಲ್ಲಿ ಏನೋ ಲೋಪ ಇದೆ ಅನ್ನೋದು ಹಲವರ ಅಭಿಪ್ರಾಯ. ನಟ ಪುನೀತ್ ರಾಜಕುಮಾರ್ ಹುಟ್ಟಿದ್ದು 17 ಮಾರ್ಚ್ 1975 ರಲ್ಲಿ. ಅದೇ ರೀತಿ ನಮ್ಮನ್ನ ಅಗಲಿರುವ ಚಿರಂಜೀವಿ ಸರ್ಜಾ ಅವರ ಜನನ 1984 ಅಕ್ಟೋಬರ್ 17ರಂದು.

ಹಾಗೆಯೇ ನಟ ಸಂಚಾರಿ ವಿಜಯ್ ಅವರು ಹುಟ್ಟಿದ್ದು ಕೂಡ 1983 ಜುಲೈ 17ರಂದು. ಈ ಮೂರು ಮೇರು ನಟರು ಕೂಡ ಜನಿಸಿದ್ದು ಒಂದೇ ತಾರೀಕು. ಅಂದರೆ 17ನೇ ತಾರೀಕು. ಈ ಮೂರು ನಟರ ಹುಟ್ಟಿದ ದಿನಾಂಕವೇ ಅವರಿಗೆ ಕಂಟಕವಾಯಿತೇ? 17ನೇ ನಂಬರ್ ಈ ಮೂರು ಸ್ಟಾರ್ ನಟರಿಗೆ ಆಗಿ ಬರುತ್ತಿರಲಿಲ್ಲವೇ? ಹೀಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನೋಡುವುದಾದರೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಅದೇನೇ ಇರಲಿ ಇಂತಹ ಅದ್ಭುತ ನಟರನ್ನು ಕಳೆದುಕೊಂಡ ನಾವು ಮಾತ್ರ ನಿಜಕ್ಕೂ ದುರಾದೃಷ್ಟವಂತರು. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.