ನಮಸ್ತೆ ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗ ಕಂಡ ಅಪ್ರತಿಮೆ ಪ್ರತಿಭೆ ಹಾಗೂ ಮೇರು ನಟ ಅಭಿಮಾನಿಗಳು ದೇವರು, ರಸಿಕರ ರಾಜ, ನಾಡು ಕಂಡ ಶ್ರೇಷ್ಠ ನಟ ಡಾ. ರಾಜ್ ಕುಮಾರ್ ಅವರ ಕಿರಿಯ ಮಗನಾದ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಆಗಲಿ ಸುಮಾರು 7 ತಿಂಗಳು ಕಳೆದಿದೆ. ಈ ಸುದ್ದಿಯನ್ನು ಬಹುಷಃ ಯಾರಿಂದಲು ಇನ್ನು ಕೂಡ ನಂಬಲು ಸಾಧ್ಯ ಇಲ್ಲ. ಅಪ್ಪು ಎಂದರೆ ಚಿತ್ರರಂಗಕ್ಕೆ ಮಾತ್ರ ಅಲ್ಲ ದೇಶದ ಮೂಲೆ ಮೂಲಯಲ್ಲೂ ಕೂಡ ಇವರಿಗೆ ಅಭಿಮಾನಿಗಳು ಇದ್ದಾರೆ.
ಇವರ ಅಗಲಿಕೆಯ ನೋವಿನಿಂದ ಅದೆಷ್ಟೋ ಜನ ಸೊರಗಿತ್ಹೋಗಿದ್ದಾರೆ. ಕರ್ನಾಟಕದಲ್ಲಿ ಇಂದಿಗೂ ಕೂಡ ಸೂತಕದ ವಾತಾವರಣ ನಿರ್ಮಾಣ ವಾಗಿದ್ದು, ಇಂದಿಗೂ ಕೂಡ ಕರುನಾಡು ಕಂಡ ರಾಜ ನನ್ನು ಕಳೆದುಕೊಂಡೆವು ಎನ್ನುವ ದುಃಖ್ಖದಲ್ಲಿದ್ದಾರೆ ಎನ್ನಬಹುದು.
ನಮ್ಮೆಲ್ಲರ ಪ್ರೀತಿಯ ಅಪ್ಪು ಕರುನಾಡಲ್ಲಿ ಮನೆ ಮಗನಂತೆ ಇದ್ದವರು ಅಂಥಹ ವಕ್ತಿತ್ವ ಹೊಂದಿದವರು ನಮ್ಮ ಅಪ್ಪು. ಚಿಕ್ಕ ವಯಸ್ಸಿಗೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ ಸೈ ಎನಿಸಿಕೊಂಡರು. ಇನ್ನು ಪುನೀತ್ ಅವರು ಮದುವೆ ವಿಚಾರಕ್ಕೆ ಬಂದರೆ. 1999 ರ ಡಿಸೇಂಬರ್ 1ರಂದು ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಈ ಜೊತೆ ಮದುವೆಯಾಗಿ ಈಗಾಗಲೇ 21 ವರ್ಷ ಕಳೆದು ಹೋಗಿದೆ.
ಈ ಡಿಸೇಂಬರ್ ಬಂದರೆ ಇವರಿಬ್ಬರ ಮದುವೆಗೆ 23 ವರ್ಷ ಕಳೆಯುತ್ತಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬೆಂಗಳೂರಿನವರಾಗಿದ್ದು ಮದುವೆಯ ಬಳಿಕ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಹಾಗೂ ನಿರ್ಮಾಪಾಕಿ ಆಗಿಯೂ ಅಶ್ವಿನಿ ಅವರು ಕೆಲಸಮಾಡಿದ್ದು. ಅಶ್ವಿನಿ ಹಾಗೂ ಪುನೀತ್ ಅವರ ಪ್ರೇಮಕಥೆ ಹುಟ್ಟಿಕೊಂಡಿದ್ದು ಜಿಮ್ ನಲ್ಲಿ. ನಿಜ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಇಬ್ಬರು ಕೂಡ ಒಂದೇ ಜಿಮ್ ನಲ್ಲಿ ವರ್ಕೌಟ್ ಮಾಡುತ್ತ ಇದ್ದರು. ಅಲ್ಲಿ ಪರಿಚಯವಾಗಿ ನಂತರ ಸ್ನೇಹಿತರಾಗಿ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು.
ಪುನೀತ್ ಹಾಗೂ ಅಶ್ವಿನಿ ಅವರು ಮದುವೆಯಾಗಿ ಇಷ್ಟು ವರ್ಷವಾದರೂ ಎಲ್ಲೂ ಕೂಡ ಇವರ ಸಂಸಾರದ ಬಗ್ಗೆ ಎಳ್ಳಷ್ಟೂ ಮಾತುಗಳು ಕೇಳಿಬಂದಿಲ್ಲ. ಇವರಿಬ್ಬರು ಆದರ್ಶ ದಂಪತಿಗಳಗಿದ್ದು ಇವರಿಬ್ಬರ ನಡುವಿನಲ್ಲಿ ವಯಸ್ಸಿನ ಅಂತರ ನೋಡುವುದಾದರೆ ಕೇವಲ ಎರಡು ವರುಷ ಅಷ್ಟೇ ವತ್ಯಾಸ. ಪುನೀತ್ ರಾಜಕುಮಾರ್ ಅವರು ಮಾರ್ಚ್ 17, 1975 ರಂದು ಜನಿಸಿದ್ದು ಅವರಿಗೆ 46 ವರ್ಷ ತುಂಬಿದ್ದು. ಇನ್ನು ಪತ್ನಿ ಅಶ್ವಿನಿ ಅವರು ಮಾರ್ಚ್ 14, 1977 ರಲ್ಲಿ ಜನಿಸಿದ್ದು ಇವರಿಗೆ ಈಗ 44 ವರ್ಷ ವಯಸ್ಸಾಗಿದೆ.
ಈ ಆದರ್ಶ ದಂಪತಿಗಳ ನಡುವಿನ ವಯಸ್ಸಿನ ಅಂತರ ಕೇವಲ 2 ವರ್ಷ ಇವರು ಬಹಳ ಅನ್ನೋನ್ಯ ವಾಗಿ ದಾಂಪತ್ಯ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದರು ಎನ್ನಬಹುದು. ಎಲ್ಲಾ ಸುಸೂತ್ರವಾಗಿರ ಬೇಕಾದರೆ ಯಾರು ಊಹಿಸಲು ಸಾಧ್ಯ ವಿಲ್ಲದ ಅನಾಹುತ ಒಂದು ನಡೆದೇ ಹೋಯಿತು ಆ ದೊಡ್ಡ ನೋವು ಯಾರಿಂದಲೂ ಕಡಿಮೆ ಮಾಡಲು ಸಾಧ್ಯ ಇಲ್ಲ ಅಪ್ಪು ಮತ್ತೆ ಹುಟ್ಟಿ ಬನ್ನಿ. ಅಪ್ಪು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ