ಫ್ರೀ ಫೈರ್ ಆಟ ಆಡೋಕೆ ಅಮ್ಮ ಮೊಬೈಲ್ ರಿಚಾರ್ಜ್ ಮಾಡಿಲ್ಲ ಅಂತ ಹೇಳಿದ್ದಕ್ಕೆ ಯುವಕ ಮಾಡಿದ್ದೇನು ಗೊತ್ತಾ? ಏನಾಗಿದೆ ಈಗಿನ ಕಾಲದ ಮಕ್ಕಳಿಗೆ!!

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ (Online Gaming) ಗೆ ದಾಸರಾಗಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಆನ್ಲೈನ್ ಗೇಮಿಂಗ್ ನಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಇದನ್ನೆಲ್ಲಾ ನೋಡುವಾಗ ನಾವೂ ಎಷ್ಟು ಅಪ್ಡೇಡ್ ಆಗಿದ್ದೇವೆ ಎಂದು ಖುಷಿಪಡಬೇಕೊ ಇಲ್ಲವಾದರೆ ಆನ್ಲೈನ್ ಗೆಮಿಂಗ್ ನಡೆಯುವ ಕೆಟ್ಟ ಘಟನೆಗಳಿಗೆ ಮರುಗಬೇಕೋ ತಿಳಿಯದು.

ಆದರೆ ಆನ್ಲೈನ್ ಗೆಮಿಂಗ್ ನಿಂದ ದು-ಡುಕಿನ ನಿರ್ಧಾರವನ್ನು ತೆಗೆದುಕೊಂಡಿರುವ ಯುವಕನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುದುಚೇರಿ (Puducheri) ರಾಜ್ಯದ ಅರಿಯಂಗುಪ್ಪಂ ಬಳಿಯ ವೀರಪಟ್ಟಣಂ (Araiyamguppam Near Vieerapattanam) ನಿವಾಸಿ ಪಾಚವಲ್ಲಿ (Pachivalli) ಖಾಸಗಿ ಜವಳಿ ಅಂಗಡಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ.

Astrology mahesh bhat

7 ತಿಂಗಳ ಹಿಂದೆ ಮೀನುಗಾರಿಕಾ ದೋಣಿ ಡಿ-ಕ್ಕಿ ಹೊಡೆದು ಪತಿ ಅರುಲ್ ದಾಸ್ (Arul Das) ಮೃ-ತಪಟ್ಟಿದ್ದರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಕಮಲೇಶ್ (Kamalesh) ಪುದುಚೇರಿಯ ಸರ್ಕಾರಿ ಶಾಲೆಯಲ್ಲಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದನು. ಕಮಲೇಶ್ ಅವರು ಮನೆಯಲ್ಲಿದ್ದಾಗ ಯಾವಾಗಲೂ ತಮ್ಮ ಸೆಲ್ ಫೋನ್‌ನಲ್ಲಿ ಫ್ರೀ ಫೈರ್ (Free Fire) ಆಟವನ್ನು ಆಡುತ್ತಿದ್ದನು.

ಮೊಬೈಲ್ ಗೇಮ್ ನ ಹು-ಚ್ಚು ಹಿಡಿಸಿಕೊಂಡಿದ್ದ ಈ ಕಮಲೇಶ್ ಗೇಮ್ ಆಡಲು ಹೋಗಿದ್ದು, ನೆಟ್ ಪ್ಯಾಕ್ ರೀಚಾರ್ಜ್ ಮಾಡದ ಕಾರಣ ಬೇಸರಗೊಂಡಿದ್ದಾನೆ. ಕೊನೆಗೆ ಈ ಕಮಲೇಶ್ ಆಟ ಆಡಲು ಸಾಧ್ಯವಿಲ್ಲ ಎಂದು ತಿಳಿದು ತಾಯಿಯ ಬಳಿ ಹಣ ಕೇಳಿದ್ದಾನೆ. ಅದಕ್ಕೆ ತಾಯಿಯು ಕೆಲಸಕ್ಕೆ ಹೋಗಿ ಬಂದ ನಂತರದಲ್ಲಿ ಹಣ ಕೊಡುವುದಾಗಿ ಹೇಳಿದ್ದಾಳೆ.

ಮನೆಯಲ್ಲೇ ಇದ್ದ ಕಮಲೇಶ್ ಆಟವಾಡಲು ಆಗದ ಕಾರಣ ಖಿ-ನ್ನತೆಗೆ ಒಳಗಾಗಿದ್ದು, ಆ-ತ್ಮಹತ್ಯೆಗೆ ಶರಣಾಗಿದ್ದಾನೆ. ಹೌದು ಈ ಕಮಲೇಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆಈ ವಿಷಯ ತಿಳಿದ ನೆರೆಹೊರೆಯವರು ಕೆಲಸಕ್ಕೆ ಹೋಗುತ್ತಿದ್ದ ಕಮಲೇಶ್ ತಾಯಿ ಪಾಚಿವಲ್ಲಿ (Pachivalli) ಗೆ ಮಾಹಿತಿ ನೀಡಿದ್ದಾರೆ.

ಮಗನು ಹೀಗೆ ಮಾಡಿಕೊಂಡಿದ್ದಾನೆ ಎಂದು ತಿಳಿಯುತ್ತಿದ್ದಂತೆ ಕಿರುಚುತ್ತಾ ಓಡಿ ಬಂದಿದ್ದಾರೆ. ಮನೆಗೆ ಬಂದು ನೋಡಿದಾಗ ಮಗ ಶ-ವವಾಗಿ ಬಿದ್ದಿದ್ದಾನೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಸದ್ಯಕ್ಕೆ ಈ ತಾಯಿ ಮಗನನ್ನು ಕಳೆದುಕೊಂಡಿರುವ ನೋವಿನಲ್ಲಿದ್ದಾರೆ.

Leave a Reply

Your email address will not be published. Required fields are marked *