ಹಣ ಆಸ್ತಿ ಅಂತಸ್ತಿನ ಮುಂದೆ ಯಾವ ಸಂಬಂಧಗಳು ಲೆಕ್ಕಕ್ಕೆ ಬರುವುದಿಲ್ಲ. ಆಸ್ತಿಗಾಗಿ (Property) ಅದೆಷ್ಟೋ ಜಗಳಗಳು ನಡೆದು ದುರಂತ ಕಂಡ ಉದಾಹರಣೆಗಳು ಇವೆ. ಆಸ್ತಿಯ ವಿಚಾರಕ್ಕೆ ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುವ ಮಾತು ನಿಜವಾಗುತ್ತದೆ. ಆದರೆ ಆಸ್ತಿಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಕಾನೂನುಗಳು (Property Law) ಬಹಳಷ್ಟಿವೆ.
ಆದರೆ ಆಸ್ತಿಯಾ ವಿಚಾರವಾಗಿ ಇರುವ ಕಾನೂನುಗಳ ಬಗ್ಗೆ ಸಾಮಾನ್ಯ ಜನರಿಗೆ ಅಷ್ಟಾಗಿ ಮಾಹಿತಿಯೂ ಇಲ್ಲ.ಭಾರತದಂತಹ ದೇಶದಲ್ಲಿ ಒಂದು ಕೂಡು ಕುಟುಂಬದಲ್ಲಿ ಆಸ್ತಿ ಹಂಚಿಕೆ (Property Distrubution) ಯಾವ ರೀತಿ ಆಗಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಹೌದು, ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು ಆ ಇಬ್ಬರೂ ಪತ್ನಿಯರಿಗೂ ಕೂಡ ಮಕ್ಕಳಿದ್ದರೆ ಎಲ್ಲರಿಗೂ ಆಸ್ತಿ ಸಮವಾಗಿ ಭಾಗ ಆಗುತ್ತದೆಯೇ ಎನ್ನುವ ಬಗ್ಗೆ ಪ್ರಶ್ನೆಯೊಂದು ಹುಟ್ಟಿಕೊಳ್ಳಬಹುದು.

ಆದರೆ ಈ ಕಾನೂನಿನಲ್ಲಿ ಮೊದಲನೇ ಹೆಂಡತಿ (First Wife)ಬದುಕಿದ್ದಾಗಲೇ ಎರಡನೇ ಮದುವೆಯಾಗುವಂತೆ ಇಲ್ಲ. ಮದುವೆಯಾಗಿದ್ದವರು ಅಥವಾ ಒಂದು ವೇಳೆ ಮೊದಲ ಹೆಂಡತಿ ಮೃ-ತಪಟ್ಟಿದ್ದು ಆಕೆಗೆ ಮಕ್ಕಳಿದ್ದು ನಂತರ ಎರಡನೇ ಮದುವೆ ಆಗಿದ್ದರೆ ಆ ಮದುವೆಯೂ ಕಾನೂನಿಗೆ ಸೇರುತ್ತದೆ. ಆ ಎರಡನೇ ಹೆಂಡತಿಗೂ ಮಕ್ಕಳಿದ್ದರೆ ಆಸ್ತಿ ಹಂಚಿಕೆಯೂ ಹೇಗೆ ಇರುತ್ತದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ಪ್ರಶ್ನೆಗಳಿಗೂ ಈ ಕಾನೂನಿನಲ್ಲಿ ಸರಿಯಾದ ಪರಿಹಾರವಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಒಬ್ಬ ವ್ಯಕ್ತಿಗೆ ಇಬ್ಬರೂ ಹೆಂಡತಿಯರು ಇದ್ದರೂ ಅವರಿಬ್ಬರಿಗೂ ಮಕ್ಕಳಿದ್ದು ಆಸ್ತಿಯ ವಿಚಾರಕ್ಕೆ ಬಂದಾಗ ಮೊದಲನೇ ಹೆಂಡತಿ ಎರಡನೇ ಹೆಂಡತಿ ಮಕ್ಕಳು ಎನ್ನುವ ಯಾವುದೇ ಭೇದಭಾವವಿರುವುದಿಲ್ಲ ಒಟ್ಟು ಎಷ್ಟು ಜನ ಮಕ್ಕಳು ಹಾಗೂ ಇರುವ ಆಸ್ತಿ ಎಷ್ಟು ಎನ್ನುವುದಷ್ಟೇ ಕಾನೂನು ಪರಿಗಣನೆಗೆ ತೆಗೆದುಕೊಂಡು ಆಸ್ತಿ ಹಂಚಿಕೆಯನ್ನು ಎಲ್ಲಾ ಮಕ್ಕಳು ಸಮಾನರು ಎನ್ನುವ ರೀತಿಯಲ್ಲಿ ಭಾಗ ಮಾಡಲಾಗುತ್ತದೆ.
ಇಲ್ಲಿ ಮುಖ್ಯವಾಗಿ ಮೃ-ತಪಟ್ಟಿರುವ ವ್ಯಕ್ತಿಯೂ ಐದು ಜನ ಮಕ್ಕಳಲ್ಲಿ ಯಾವ ಮಕ್ಕಳಿಗೆ ಬೇಕಾದರೂ ತಮ್ಮ ಆಸ್ತಿಯನ್ನು ದಾನ ಪತ್ರದ ಮೂಲಕ ಅಥವಾ ವೀಲ್ ಮಾಡಿಟ್ಟಿದ್ದರೆ ಆ ಆಸ್ತಿಯು ಯಾವ ಮಕ್ಕಳಿಗೆ ಎಷ್ಟು ಸೇರಬೇಕು ಎನ್ನುವ ಮೊದಲೇ ಇರುವ ಕಾರಣ, ಆ ಪ್ರಕಾರವಾಗಿ ಆಸ್ತಿ ಹಂಚಿಕೆ ಮಾಡಲಾಗುತ್ತದೆ. ಸ್ವಯಾರ್ಜಿತ ಆಸ್ತಿಯ ಬಗ್ಗೆ ವೀಲ್ (Wil) ಮಾಡಿಲ್ಲವಾದಲ್ಲಿ ಆ ಆಸ್ತಿಯು 5 ಜನ ಮಕ್ಕಳಿಗೆ ಸಮಾನವಾಗಿ ಭಾಗವಾಗುತ್ತದೆ ಈ ರೀತಿಯಾದ ಕಾನೂನು ತಂದೆಯ ಆಸ್ತಿಯೂ ಮಕ್ಕಳಿಗೆ ಹಂಚಿಕೆ ಮಾಡುವಾಗ ಇದೆ.